Breaking News
Home / ತಾಲ್ಲೂಕು / ಮುಸಗುಪ್ಪಿಯಲ್ಲಿ ಗೋದಾವರಿ ಸಕ್ಕರೆಕಾರ್ಖಾನೆ ಕಬ್ಬು ಬೆಳೆಗಾರರ ಸಭೆ

ಮುಸಗುಪ್ಪಿಯಲ್ಲಿ ಗೋದಾವರಿ ಸಕ್ಕರೆಕಾರ್ಖಾನೆ ಕಬ್ಬು ಬೆಳೆಗಾರರ ಸಭೆ

Spread the love

*ಮುಸಗುಪ್ಪಿಯಲ್ಲಿ ಗೋದಾವರಿ ಸಕ್ಕರೆಕಾರ್ಖಾನೆ ಕಬ್ಬು ಬೆಳೆಗಾರರ ಸಭೆ*

ಮೂಡಲಗಿ: ಆಧುನಿಕ ಯುಗದಲ್ಲಿ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಅತೀ ಅವಶ್ಯಕ, ರೈತರು ಭೂಮಿಗೆ ಖರ್ಚು ಮಾಡಲು ಹಿಂಜರಿಯಬಾರದು ಹಾಗೂ ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿಯನ್ನು ಪಡೆಯುವಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕೆಂದು ಗೋದಾವರಿ ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗದ ಮುಖ್ಯಸ್ಥ ಎಸ್‍ಎಮ್ ಹುಕ್ಕೇರಿಹೇಳಿದರು.
ತಾಲೂಕಿನ ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮೀದೇವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜರುಗಿದ ಗೋದಾವರಿ ಸಕ್ಕರೆ ಕಾರ್ಖಾನೆಯ ಕಬ್ಬು ಬೆಳೆಗಾರರ ಸಭೆಯಲ್ಲಿ ಮಾತನಾಡಿ, ಕಳೆದ ವರ್ಷ ಕಾರ್ಖಾನೆ ಪ್ರಾರಂಭಿಸಲು ತಡವಾಗಿದ್ದಕ್ಕೆ ಸಹಕಾರ ನೀಡಿದ್ದಿರಿ, ಬರುವ ಹಂಗಾಮವನ್ನುಅಕ್ಟೋಬರ ಕೊನೆಗೆ ಅಥವಾ ನವೆಂಬರ ಮೊದಲನೆಯ ವಾರದಲ್ಲಿ ಕಾರ್ಖಾನೆ ಪ್ರಾರಂಭಿಸುತ್ತೆವೆ ಕಾರಣ ರೈತರು ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಕಳಿಸಿ ಸಹಕಾರ ನೀಡಬೇಕೆಂದು ರೈತರಲ್ಲಿ ವಿನಂತಿಸಿದರು.
ಕಬ್ಬು ಅಭಿವೃದ್ದಿ ವಿಭಾಗದ ಸಹಾಯಕ ವ್ಯವಸ್ಥಾಪಕ ವಿ.ಎಸ್.ಬುಜನ್ನವರ ಮಾತನಾಡಿ, ಕಬ್ಬು ಪ್ರಮುಖವಾದ ವಾಣಿಜ್ಯ ಬೆಳೆಯಾಗಿದೆ ರೈತರುಕಬ್ಬಿನ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯಲು ಹರಸಾಹಸ ಮಾಡುತ್ತಾರೆ ಆದರೆ ಕಬ್ಬು ಕೃಷಿ ಅತ್ಯಂತ ಲಾಭದಾಯಕವಾಗಿದೆ, ರಾಸಾಯನಿಕ ಗೊಬ್ಬರಗಳ ಬಳಕೆಯು ಆಧುನಿಕ ಯುಗದಲ್ಲಿ ಶಾಪವಾಗಿಯು ಪರಿಣಮಿಸಿರುವ ಅನೇಕ ಉದಾಹರಣೆಗಳಿವೆ, ಕಬ್ಬು ನಾಟಿ ಮಾಡುವ ಮೊದಲು ಮಣ್ಣು ಪರೀಕ್ಷೆ ಮಾಡಿಸಿ ಇದರ ಆದಾರದ ಮೇಲೆ ರಸಗೊಬ್ಬರಗಳ ಬಳಕೆಯನ್ನು ಮಾಡಬೇಕೆಂದು ಸಲಹೆ ನೀಡಿದರು. ರೈತರು ಈ ಯಾವ ತಂತ್ರಜ್ಞಾನಗಳನ್ನು ಬಳಸದೆಯಿರುವದು, ಜೈವಿಕ ಗೊಬ್ಬರ ಮತ್ತು ಸಾವಯವ ಗೊಬ್ಬರ ಬಳಸದೆಯಿರುವದರಿಂದ ಭೂಮಿ ಬರಡಾಗಿ ಮುಂದಿನ ಪೀಳಿಗೆ ಗಂಭೀರ ಪರಿಣಾಮ ಅನುಭವಿಸ ಬೇಕಾಗುತ್ತದೆ ಎಂದರು.
ರೈತರಾದ ರಮೇಶ ಕುಲಕರ್ಣಿ ಮತ್ತು ಸಂಗಮೇಶ ಸೊನ್ನದ ಅವರು ಗೋದಾವರಿ ಸಕ್ಕರೆ ಕಾರ್ಖಾನೆಯ ಸಲಹೆ ಮೇರೆಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಬ್ಬಿನ ಇಳುವರಿಯನ್ನು ಹೆಚ್ಚಿಸಕೊಂಡ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಕಾರ್ಖಾನೆಯ ಕೃಷಿ ಅಧಿಕಾರಿ ಎಸ್.ಎಸ್.ಅರಕೇರಿ ಮತ್ತು ಗ್ರಾಮದ ರೈತರಾದ ಬಸವರಾಜ ಬುಜನ್ನವರ, ಸಂಜು ಹೊಸಕೋಟಿ, ಅಪ್ಪಯ್ಯಾ ಬಡ್ನಿಂಗೋಳ, ಕಲ್ಲಪ್ಪಾ ಉಪ್ಪಾರ, ಅಶೋಕ ಮಳಲಿ, ಸಾತಪ್ಪಾ ಕೊಳದುರ್ಗಿ, ಮುರಗೇಶ ಗಾಡವಿ, ಭರಮಪ್ಪಾ ಗಂಗನ್ನವರ, ಶಿವಾನಂದ ಗುಡೇರ ಹಾಗೂ ತಿಗಡಿ, ಫುಲಗಡ್ಡಿ, ವಡೇರಹಟ್ಟಿ, ಮಸಗುಪ್ಪಿ ಗ್ರಾಮದ ರೈತರು ಹಾಗೂ ಕಾರ್ಖಾನೆಯ ಮೂಡಲಗಿ ವಿಭಾಗದ ಸಿಬ್ಬಂದಿ ವರ್ಗದವರು ಇದ್ದರು


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ