Breaking News
Home / ತಾಲ್ಲೂಕು / ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ನಿಧನಕ್ಕೆ ಅರಭಾಂವಿ ಬಿಜೆಪಿ ಮಂಡಲದಿಂದ ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶನಿವಾರದಂದು ಶ್ರದ್ಧಾಂಜಲಿ

ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ನಿಧನಕ್ಕೆ ಅರಭಾಂವಿ ಬಿಜೆಪಿ ಮಂಡಲದಿಂದ ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶನಿವಾರದಂದು ಶ್ರದ್ಧಾಂಜಲಿ

Spread the love

.ಗೋಕಾಕ: ಗುರುವಾರದಂದು ರಾತ್ರಿ ನಿಧನರಾದ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ನಿಧನಕ್ಕೆ ಅರಭಾಂವಿ ಬಿಜೆಪಿ ಮಂಡಲದಿಂದ ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶನಿವಾರದಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಶ ಪಾಟೀಲ ಅವರು, ಗಸ್ತಿ ಅವರು ಪಕ್ಷದ ನಿಷ್ಟಾವಂತ ಸೇವಕರಾಗಿದ್ದರು. ಇವರು ಪಕ್ಷಕ್ಕೆ 3ದಶಕದಿಂದ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿ ಕಾರ್ಯಕರ್ತರನ್ನು ಗುರುತಿಸಿ ಕೆಲಸ ಮಾಡಿತ್ತು. ದುರ್ದೈವವೆಂದರೆ ಗಸ್ತಿ ಅವರಿಗೆ ಕೋರೋನಾ ಸೊಂಕು ತಗುಲಿ ಸದನಕ್ಕೂ ಪ್ರವೇಶಿಸದೇ ನಿಧನರಾಗಿರುವುದು ನಮಗೆಲ್ಲ ದು:ಖ ತಂದಿದೆ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಮಾತನಾಡಿ, ದಿ. ಅಶೋಕ ಗಸ್ತಿ ಅವರ ಕುಟುಂಬ ವರ್ಗಕ್ಕೆ ಭಗವಂತನು ದು:ಖವನ್ನು ಸಹಿಸುವ ಶಕ್ತಿಯನ್ನು ನೀಡಲಿ, ಅವರ ಕುಟುಂಬದಲ್ಲಾದ ನೋವಿನಲ್ಲಿಯೂ ನಾವು ಸಹ ಸಹಭಾಗಿಯಾಗುತ್ತಾ ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರಭಾಂವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕ ಬಿ.ಜಿ.ಸಂತಿ, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಬಸವರಾಜ ಮಾಳೇದ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆನಂದ ಮೂಡಲಗಿ, ಜಿಲ್ಲಾ ಎಚ್.ಸಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಈರಣ್ಣ ಢವಳೇಶ್ವರ, ಜಿಲ್ಲಾ ಕಾರ್ಯದರ್ಶಿ ಮುತ್ತೆಪ್ಪ ಮನ್ನಾಪೂರ, ಜಿ.ಪಂ ಮಾಜಿ ಸದಸ್ಯ ಸುಧೀರ ಜೋಡಟ್ಟಿ, ಮುಖಂಡ ಹಣಮಂತ ತೇರದಾಳ, ಅರಭಾಂವಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ, ಎಸ್.ಟಿ.ಮೋರ್ಚಾ ಅಧ್ಯಕ್ಷ ಯಲ್ಲಾಲಿಂಗ ವಾಳದ, ಎಸ್.ಸಿ.ಮೋರ್ಚಾ ಅಧ್ಯಕ್ಷ ನಾಗರಾಜ ಕುದರಿ, ಮಹಾಂತೇಶ ಕುಡಚಿ, ಸುನೀಲ ಜಮಖಂಡಿ, ಮಂಗಲಾ ಕೌಜಲಗಿ, ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ