ಪಿ.ವಾಯ್.ಹುಣಶ್ಯಾಳ ಗ್ರಾಮದಲ್ಲಿ ಕಬ್ಬು ಕೃಷಿ ಕಾರ್ಯಾಗಾರ
ಕಬ್ಬಿನ ಬೆಳೆಯಲ್ಲಿ ಯಾಂತ್ರಿಕರಣವನ್ನು ಅಳವಡಿಸಿಕೊಳ್ಳುವದು ತುಂಬಾ ಅವಶ್ಯಕತೆ ಇದೆ-ಹುಕ್ಕೇರಿ
ಮೂಡಲಗಿ: ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರ ಕೊರೆತೆ ಉಂಟಾಗುತ್ತಿರುವದರಿಂದ ಮುಂದಿನ ದಿನಗಳಲ್ಲಿ ಕಬ್ಬುಕಟಾವು ತೊಂದರೆ ಹೊಗಲಾಡಿಸಲು ಕಬ್ಬು ಬೆಳೆಗಾರರು ಅಗಲ ಸಾಲು ಪದ್ದತಿಯಲ್ಲಿ ಕಬ್ಬನ್ನು ನಾಟಿ ಮಾಡಿ ಕಬ್ಬಿನ ಬೆಳೆಯಲ್ಲಿ ಯಾಂತ್ರಿಕರಣವನ್ನು ಅಳವಡಿಸಿಕೊಳ್ಳುವದು ತುಂಬಾ ಅವಶ್ಯಕತೆ ಇದೆ ಎಂದು ಗೋದಾವರಿ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಮುಖ್ಯಸ್ಥರಾದ ಎಸ್.ಎಮ್.ಹುಕ್ಕೇರಿ ಹೇಳಿದರು.
ತಾಲೂಕಿನ ಹುಣಶ್ಯಾಳ ಪಿ.ವಾಯ್ ಗ್ರಾಮದಲ್ಲಿ ರವಿವಾರ ಸಮೀರವಾಡಿಯ ಗೋದಾವರಿ ಸಕ್ಕರೆಕಾರ್ಖಾನೆಯಿಂದ ಕಬ್ಬಿನ ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಅಧಿಕ ಇಳುವರಿ ಪಡೆಯುವ ಬಗ್ಗೆ ರೈತರಿಗೆ ಜಾಗ್ರತಿ ಮೂಡಿಸುವ ಕಾರ್ಯದಲ್ಲಿ ಮಾತನಾಡಿ, ಕಳೆದ ಹಂಗಾಮಿನಲ್ಲಿ ಘಟಪ್ರಭಾನದಿಯ ಪ್ರವಾಹದಿಂದ ಕಬ್ಬುನಾಟಿ ಮಾಡಲು ವಿಳಂಬವಾಗಿತ್ತು. ಈ ವರ್ಷಜನೇವರಿ, ಫೆಬ್ರುವರಿ ಮತ್ತು ಮಾರ್ಚ ತಿಂಗಳುಗಳಲ್ಲಿ ನಾವು ಅಭೂತ ಪೂರ್ವಕಬ್ಬಿನ ನಾಟಿಗೆ ಸಾಕ್ಷಿಯಾಗಿದ್ದೇವೆ. ಬೇಸಿಗೆಯಲ್ಲಿ ಸಾಕಷ್ಟುನೀರಿನ ಲಭ್ಯತೆಯಿಂದಾಗಿ ಮತ್ತು ಉತ್ತಮ ಮುಂಗಾರು ಮಳೆಯಿಂದಾಗಿ ಕಬ್ಬಿನ ಬೆಳೆಯು ಉತ್ತಮವಾಗಿದೆ, ಪ್ರತಿ ವರ್ಷ ಕಬ್ಬು ನುರಿಸುವ ಹಂಗಾಮಿಗೆ ರೈತರುನ ಮ್ಮಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಕಳಿಸಿ ಸಹಕಾರ ನೀಡಬೇಕೆಂದು ರೈತರಲ್ಲಿ ವಿನಂತಿಸಿದರು.
ಕಬ್ಬು ಅಭಿವೃದ್ದಿ ವಿಭಾಗದ ಸಹಾಯಕ ವ್ಯವಸ್ಥಾಪಕ ವಿ.ಎಸ್.ಬುಜನ್ನವರ ಮಾತನಾಡಿ, ಕಬ್ಬು ಪ್ರಮುಖವಾದ ವಾಣಿಜ್ಯ ಬೆಳೆಯಾಗಿದೆ. ರೈತರು ಕಬ್ಬು ನಾಟಿ ಮಾಡುವ ಮೊದಲು ಮಣ್ಣು ಪರೀಕ್ಷೆ ಮಾಡಿಸಿ ಇದರ ಆದಾರದ ಮೇಲೆ ರಸಗೊಬ್ಬರಗಳ ಬಳಕೆಯನ್ನು ಮಾಡಬೇಕು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಮತ್ತು ಜೈವಿಕ ಗೊಬ್ಬರಗಳನ್ನು ಬಳಸಲು ಸ¯ಹೆ ನೀಡಿದರು. ಕಬ್ಬು ನಾಟಿ ಮಾಡಲು ಆರೋಗ್ಯಯುತವಾದ ಹಾಗೂ ಕೀಟ ಮತ್ತು ರೋಗ ಬಾದೆ ರಹಿತವಾದ ಕಬ್ಬಿನ ಬೀಜವನ್ನುಆಯ್ಕೆ ಮಾಡಿಕೊಂಡು ಬೀಜೋಪಚಾರ ಮಾಡಿ ನಾಟಿ ಮಾಡುವದರಿಂದ ಉತ್ತಮ ಇಳುವರಿಯನ್ನು ಪಡೆಯಬಹುದೆಂದರು.
ಕೃಷಿ ಅಧಿಕಾರಿಯಾದ ಜೆ.ಬಿ.ನುಚ್ಚಿ ರೈತರಾದ ಎ.ಟಿ.ಗಿರಡ್ಡಿ, ಎಸ್.ಎಸ್.ಗಿರಡ್ಡಿ, ಬಿ.ಟಿ.ಗಿರಡ್ಡಿ, ಜಿ.ಆರ್.ಹಿರಡ್ಡಿ, ಎಮ್.ಸಿ.ನಿಡಗುಂದಿ, ಎಸ್.ಪಿ.ದೇಶಪಾಂಡೆ, ಆರ್.ಆರ್.ಉಪ್ಪಿನ, ಎಸ್.ಎಮ್.ಬಿಳ್ಳೂರ, ಜಿ.ಕೆ.ಡೊಳ್ಳಿ, ಜಂಬುಚಿಕ್ಕೋಡಿ, ಪ್ರಕಾಶ ಪಾಟೀಲ, ಹಣಮಂತ ಬಿಳ್ಳೂರ, ಗುರುನಾತ ಬಿಳ್ಳೂರ, ಗೋಪಾಲ ಬಿಳ್ಳೂರ, ಕಾರ್ಖಾನೆಯ ಕುಲಗೋಡ ವಿಭಾಗದ ಸಿಬ್ಬಂದಿ ವರ್ಗದವರು, ಹುಣಶ್ಯಾಳ ಗ್ರಾಮದ ರೈತರು ಭಾಗವಹಿಸಿದ್ದರು.