Breaking News
Home / ತಾಲ್ಲೂಕು / ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾದ ಮೊದಲ ಬಲಿ?

ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾದ ಮೊದಲ ಬಲಿ?

Spread the love

ಬೆಳಗಾವಿ: ನಿನ್ನೆ ಬೆಳಗಾವಿ ತಾಲೂಕು ಹಿರೇಬಾಗೇವಾಡಿಯಲ್ಲಿ ಪತ್ತೆಯಾಗಿದ್ದ ಕೊರೊನಾ ಸೋಂಕಿತ ವ್ಯಕ್ತಿಯ ಅಜ್ಜಿ ಇಂದು ಮುಂಜಾನೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇದು ಕೊರೊನಾದ ಮೊದಲ ಬಲಿಯೇ ಎನ್ನುವುದು ಇನ್ನಷ್ಟೇ ಖಾತ್ರಿಯಾಗಬೇಕಾಗಿದೆ.

ಮೃತಪಟ್ಟ ಅಜ್ಜಿಗೆ 85 ವರ್ಷ ವಯಸ್ಸಾಗಿತ್ತು. ಅಜ್ಜಿಗೆ ಸೋಂಕು ತಗುಲಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗುತ್ತಿದ್ದು, ಆಕೆಯ ಶವವನ್ನು ಶವಪರೀಕ್ಷೆಗಾಗಿ ತರಲಾಗಿದೆ. ನಿನ್ನೆ ಹಿರೇಬಾಗೇವಾಡಿಯ 38 ವಯಸ್ಸಿನ ವ್ಯಕ್ತಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಇಂದು ಮುಂಜಾನೆ ಆತನ ಮನೆಯವರನ್ನೆಲ್ಲ ಆರೋಗ್ಯ ಇಲಾಖೆಯವರು ಎರಡು ಅಂಬ್ಯುಲನ್ಸ್ ಗಳಲ್ಲಿ ಕರೆದೊಯ್ದು ಅವರನ್ನು ಕ್ವಾರಂಟೈನ್ ಮಾಡಿದ್ದಾರೆ. ಆದರೆ, ವಯಸ್ಸಾದ ಕಾರಣ ಅಜ್ಜಿಯನ್ನು ಮನೆಯಲ್ಲೇ ಬಿಟ್ಟಿದ್ದರು ಎಂಬ ಮಾಹಿತಿ ಬಂದಿದೆ.

ವಿಶೇಷವೆಂದರೆ ಇದುವರೆಗೆ ಹಿರೇಬಾಗೇವಾಡಿಯಲ್ಲಿ ಪತ್ತೆಯಾಗಿರುವ ಎಲ್ಲ ಐದು ಮಂದಿ ಸೋಂಕಿತರು ನೆರೆಹೊರೆಯವರಾಗಿದ್ದಾರೆ. ಅವರೆಲ್ಲ ಅಜ್ಜಿಯೊಂದಿಗೆ ನಿತ್ಯ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.


Spread the love

About inmudalgi

Check Also

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ತಾಲೂಕಾ ಎಸ್.ಸಿ/ಎಸ್.ಟಿ ಹಾಗೂ ಅಲ್ಪ ಅಲ್ಪಸಂಖ್ಯಾತರ ಶಾಖಾ ಘಟಕ ಉದ್ಘಾಟನೆ

Spread the loveಮೂಡಲಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯು ಸಮಜದಲ್ಲಿ ಹಿಂದುಳಿದ ಜನರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ