Breaking News
Home / ತಾಲ್ಲೂಕು / ಕಾಂಗ್ರೇಸ ಪಕ್ಷದಲ್ಲಿ ಯಾವುದೆ ಬಿನ್ನಾಭಿಪ್ರಾಯವಿಲ್ಲ,ಎಲ್ಲರೂ ಒಗ್ಗಟ್ಟಿನಿಂದ ಮುಂಬರುವ ಚುನಾವಣೆ ಎದುರಿಸುತ್ತೇವೆ -ಲಕ್ಕಣ್ಣ ಸವಸುದ್ದಿ

ಕಾಂಗ್ರೇಸ ಪಕ್ಷದಲ್ಲಿ ಯಾವುದೆ ಬಿನ್ನಾಭಿಪ್ರಾಯವಿಲ್ಲ,ಎಲ್ಲರೂ ಒಗ್ಗಟ್ಟಿನಿಂದ ಮುಂಬರುವ ಚುನಾವಣೆ ಎದುರಿಸುತ್ತೇವೆ -ಲಕ್ಕಣ್ಣ ಸವಸುದ್ದಿ

Spread the love

ಕಾಂಗ್ರೇಸ ಪಕ್ಷದಲ್ಲಿ ಯಾವುದೆ ಬಿನ್ನಾಭಿಪ್ರಾಯವಿಲ್ಲ,ಎಲ್ಲರೂ ಒಗ್ಗಟ್ಟಿನಿಂದ ಮುಂಬರುವ ಚುನಾವಣೆ ಎದುರಿಸುತ್ತೇವೆ -ಲಕ್ಕಣ್ಣ ಸವಸುದ್ದಿ

ಮೂಡಲಗಿ:- 2018ರ ವಿಧಾನಸಭೆ ಚುನಾವಣೆ ನಂತರ ಅರಭಾಂವಿ ಕ್ಷೇತ್ರದಲ್ಲಿ ಕಾಂಗ್ರೇಸ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮೂರು ಗುಂಪುಗಳಾಗಿವೆ ಎಂಬುವದು ಸುಳ್ಳು. ಎಲ್ಲರೂ ಒಗ್ಗಟ್ಟಾಗಿ ಮುಂಬರುವ ಜಿ.ಪಂ,ತಾ.ಪಂ ಮತ್ತು ಗ್ರಾ.ಪಂ ಚುನಾವಣೆಗಳನ್ನು ಸಮರ್ಪಕವಾಗಿ ಎದುರಿಸಲು ಈಗಿನಿಂದಲೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲಕ್ಕಣ್ಣ ಸವಸುದ್ದಿ ಹೇಳಿದರು.
ಅವರು ಬುಧವಾರದಂದು ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,ಪಕ್ಷದ ರಾಜ್ಯ ಮತ್ತು ಜಿಲ್ಲಾ ಯುವ ಘಟಕದ ಆದೇಶದ ಮೇರೆಗೆ ನೂತನ ಸದಸ್ಯರ ನೊಂದನಿ ಅಭಿಯಾನಕ್ಕೆ ಇಂದು ಚಾಲಣೆ ನೀಡಲಾಗಿದೆ.ಉತ್ಸಾಹಿ ಮತ್ತು ಅಭಿಮಾನಿ ಯುವಕರಿಗೆ ಆದ್ಯತೆ ನೀಡಿ ಸದಸ್ಯರನ್ನು ನೊಂದಾಯಿಸಿಕೊಳ್ಳಲಾಗುವುದು.ಅ.9ರವರೆಗೆ ನೊಂದನಿ ಕಾರ್ಯ ನಡೆದು 9ರಿಂದ 12ರವರೆಗೆ ಯುವ ಘಟಕಗಳಿಗೆ ಚುನಾವಣೆ ನಡೆಯಲಿದೆ.
ಅ.2ರಂದು ಬೆಳಗಾವಿಯಲ್ಲಿ ನಿರ್ಮಾಣವಾದ ಕಾಂಗ್ರೇಸ ಭವನವನ್ನು ಮತ್ತು ಘಟಪ್ರಭಾದಲ್ಲಿ ಸೇವಾದಳದ ನೂತನ ಕಟ್ಟಡಗಳು ಉಧ್ಘಾಟಣೆಗೊಳ್ಳಲಿದ್ದು ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಮತ್ತು ರಾಜ್ಯ ನಾಯಕರು ಆಗಮಿಸುವರು.ಈ ಕಾರ್ಯಕ್ರಮಗಳಿಗೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದರು.
ಮಾಜಿ ಜಿ.ಪಂ.ಸದಸ್ಯ ರಮೇಶ ಉಟಗಿ ಮಾತನಾಡಿ ಅರಭಾಂವಿ ಕ್ಷೇತ್ರದಲ್ಲಿ ಪಕ್ಷವನ್ನು ತಳಮಟ್ಟದಿಂದ ಪುನಶ್ಛೇತನಗೊಳಿಸುವುದು ಅವಶ್ಯವಿದೆ.ಪಕ್ಷವು ನಿಷ್ಠಾವಂತ ಕಾರ್ಯಕರ್ತರಿಗೆ ಸಾಕಷ್ಟು ಹುದ್ದೆಗಳನ್ನು ನೀಡುತ್ತಿದೆ. ನಾನೂ ಕೂಡ ಬ್ಲಾಕ್ ಅಧ್ಯಕ್ಷ,ಜಿ.ಪಂ.ಸದಸ್ಯ ಅಲ್ಲದೆ ಜಿಲ್ಲಾ ಮತ್ತು ರಾಜ್ಯ ಘಟಕಗಳಲ್ಲಿ ಹುದ್ದೆಗಳನ್ನು ಈ ಪಕ್ಷದಿಂದಲೇ ಅನುಭವಿಸಿದ್ದೇನೆ.ಪಕ್ಷಕ್ಕೆ ನಾನು ನಿಷ್ಠೆಯಾಗಿದ್ದು ತನುಮನ ಧನದಿಂದ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.
ಅರಭಾಂವಿ ಬ್ಲಾಕ್ ಅಧ್ಯಕ್ಷ ಗುರುರಾಜ ಪೂಜೇರಿ ಮಾತನಾಡಿ,ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೋವಿಡ್ ಸಂಕಷ್ಟ ನಿವಾರಣೆಯಲ್ಲಿ ವಿಫಲವಾಗಿ ಹೆಣದ ಮೇಲೆ ಹಣ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.
ಈ ಸಮಯದಲ್ಲಿ ಹಿರಿಯ ಮುಖಂಡ ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್.ಸೋನವಾಲ್ಕರ,ರೈತ ಕಿಸಾನ್ ಕಮಿಟಿ ಜಿಲ್ಲಾಧ್ಯಕ್ಷ ಕಲ್ಲಪ್ಪ ಲಕ್ಕಾರ,ಅರಭಾಂವಿ ಬ್ಲಾಕ್ ಮಾಜಿ ಅಧ್ಯಕ್ಷ ಭರಮಣ್ಣ ಉಪ್ಪಾರ,ಮಹಿಳಾ ಘಟಕದ ಅಧ್ಯಕ್ಷೆ ನೀಲಮ್ಮ ಬೆಣ್ಣಿ,ಯುವ ಘಟಕದ ಅಧ್ಯಕ್ಷರಾದ ಭೀಮಶಿ ಕಾರದಗಿ, ರೇವಣ್ಣ ಮುನ್ಯಾಳ,ಯುವ ಮುಖಂಡರಾದ ಲಕ್ಷ್ಮಣ ಬೆಣ್ಣೆಪ್ಪಗೋಳ,ಶಿವಾನಂದ ಮಾದರ,ಸುಬಾಸ ಲೋಕನ್ನವರ,ಮಂಜು ಮಸಗುಪ್ಪಿ,ಲಕ್ಕಪ್ಪ ಛಬ್ಬಿ,ಹೊಳೆಪ್ಪ ಶಿವಾಪೂರ,ಭೀಮಶಿ ಬೆಣ್ಣಿ, ಮಂಜು ಪೀರೋಜಿ ಇನ್ನಿತರರು ಇದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ