Breaking News
Home / Recent Posts / ಸರಳವಾಗಿ ಆಚರಿಸಿದ ಹನುಮ ಜಯಂತಿ, ವಿಶೇಷ ಅಲಂಕಾರ

ಸರಳವಾಗಿ ಆಚರಿಸಿದ ಹನುಮ ಜಯಂತಿ, ವಿಶೇಷ ಅಲಂಕಾರ

Spread the love

ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಹನಮಂತ ದೇವರ ದೇವದಸ್ಥಾನದಲ್ಲಿ ಮಂಗಳವಾರ ಸರಳವಾಗಿ ಆಚರಿಸಿದ ಹನುಮ ಜಯಂತಿಯ ಅಂಗವಾಗಿ ವಿಶೇಷವಾಗಿ ಅಲಂಕರಿಸಿದ್ದರು.

ಕಲ್ಲೋಳಿ: ಸರಳವಾಗಿ ಹನುಮ ಜಯಂತಿ ಆಚರಣೆ
ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪ್ರಸಿದ್ಧ ಹನಮಂತ ದೇವರ ದೇವಸ್ಥಾನದಲ್ಲಿ ಮಂಗಳವಾರ ಕೊವಿಡ್ ಎರಡನೇ ಅಲೆಯ ಅತಂಕದ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಹನುಮ ಜಯಂತಿಯನ್ನು ಆಚರಿಸಿದರು.
ಬೆಳಿಗ್ಗೆ ಹನಮಂತ ದೇವರ ಸನ್ನಿಧಿಗೆ ಅಭಿಷೇಕ, ವಿಶೇಷ ಪೂಜೆಯನ್ನು ಸಲ್ಲಿಸಿ, ವಿಶೇಷ ಅಲಂಕಾರದೊಂದಿಗೆ ಪೂಜೆಯನ್ನು ಮಾಡಿದರು. ಸಂಪ್ರದಾಯದಂತೆ ತೊಟ್ಟಿಲೋತ್ಸವ ಮತ್ತು ಪಾಲಕಿ ಉತ್ಸವ ಜರುಗಿತು.
‘ಕೊವಿಡ್ ಮಾರ್ಗಸೂಚಿಯಂತೆ ಕೆಳದ ಎರಡು ವಾರಗಳ ಪೂರ್ವದಿಂದ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನವನ್ನು ನಿಷೇಧಿಸಲಾಗಿದೆ. ಹೀಗಾಗಿ ಈ ಬಾರಿ ಹನುಮ ಜಯಂತಿಯನ್ನು ಆರ್ಚಕರಷ್ಟೇ ಜಯಂತಿಯನ್ನು ಸರಳವಾಗಿ ಆಚರಿಸಿದೆವು’ ಎಂದು ಆರ್ಚಕ ಸುಭಾಷ ಪೂಜೇರಿ ತಿಳಿಸಿದರು.
ಬೆಳಿಗ್ಗೆ ಭಕ್ತರು ದೇವಸ್ಥಾನದ ಹೊರಗಿನಿಂದ ನಮಿಸಿ, ತಮ್ಮ ಭಕ್ತಿಯನ್ನು ಸಮರ್ಪಿಸಿದರು.


Spread the love

About inmudalgi

Check Also

ಕನಕದಾಸರು ಕೇವಲ ವ್ಯಕ್ತಿಯಲ್ಲ, ಶೋಷಿತರ ಅತಿ ದೊಡ್ಡ ಧ್ವನಿ:ಬಸವಂತ ಕೋಣಿ

Spread the loveಬೆಟಗೇರಿ:ಕನಕದಾಸರು ಒಬ್ಬ ಕವಿಯಾಗಿ ಬೆಳೆದು, ಸಮಾಜ ಸುಧಾರಕನಾಗಿ, ಸಂತನಾಗಿ ಶಾಶ್ವತವಾಗಿ ಉಳಿದವರು ಎಂದು ಗೋಕಾಕ ತಾಲೂಕಿನ ಬೆಟಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ