Breaking News
Home / ತಾಲ್ಲೂಕು / ದಿ.ಸುರೇಶ ಅಂಗಡಿ ಅವರಿಗೆ ಅಭಿಮಾನಿಗಳಿಂದ ಶೃದ್ಧಾಂಜಲಿ

ದಿ.ಸುರೇಶ ಅಂಗಡಿ ಅವರಿಗೆ ಅಭಿಮಾನಿಗಳಿಂದ ಶೃದ್ಧಾಂಜಲಿ

Spread the love

ದಿ.ಸುರೇಶ ಅಂಗಡಿ ಅವರಿಗೆ ಅಭಿಮಾನಿಗಳಿಂದ ಶೃದ್ಧಾಂಜಲಿ
ಮೂಡಲಗಿ:- ಬುಧವಾರದಂದು ನಿಧನರಾದ ಕೇಂದ್ರ ರೈಲ್ವೇ ಸಚಿವ ಸುರೇಶ ಅಂಗಡಿ ಅವರಿಗೆ ಅರಭಾವಿ ಬಿಜೆಪಿ ಮಂಡಲ ಪದಾಧಿಕಾರಿಗಳು,ಕಾರ್ಯಕರ್ತರು,ಅಭಿಮಾನಿಗಳು ಕಲ್ಮೇಶ್ವರ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಮೌನ ಆಚರಿಸಿ ಶೃದ್ಧಾಂಜಲಿ ಸಲ್ಲಿಸಿದರು,
ಬಿಜೆಪಿ ಮುಖಂಡರಾದ ಪ್ರಕಾಶ ಮಾದರ ಮಾತನಾಡಿ ಕೇಂದ್ರ ಸಚಿವ ಸುರೇಶ ಅಂಗಡಿ ಅವರು ರೈಲ್ವೇ ಸಚಿವರಾಗಿ ಕರ್ನಾಟಕಕ್ಕೆ ದೊಡ್ಡ ಕೊಡುಗೆ ನೀಡಿದ್ದರು. ಸಾಕಷ್ಟು ಮಹಾತ್ವಾಕಾಂಕ್ಷೆ ಹೊಂದಿದ್ದ ಅವರು ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರು. ಅವರ ನಿಧನದಿಂದ ಇಡೀ ದೇಶಕ್ಕೆ ನಷ್ಟವಾಗಿದೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ಅಂಗಡಿ ಅವರು, ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಒಟ್ಟು 4 ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು ಕೊರೋನಾ ಮಹಾಮಾರಿಗೆ ಬಲಿಯಾಗಿರುವುದು ನಮ್ಮೆಲ್ಲರ ದುರ್ದೈವವೆಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿಡಿಸಿಸಿ ಉಪಾಧ್ಯಕ್ಷ ಎಸ್.ಜಿ.ಢವಳೇಶ್ವರ ಬಿಜೆಪಿ ಅರಭಾಂವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ,ಎಸ್.ಟಿ.ಮೋರ್ಚಾ ಅಧ್ಯ್ಯಕ್ಷ ಯಲ್ಲಾಲಿಂಗ ವಾಳದ,ಕೇದಾರಿ ಭಸ್ಮೆ,ಆರ್.ಬಿ.ಹಂದಿಗುಂದ, ಚೇತನ ನಿಶಾನಿಮಠ,ಮುತ್ತಪ್ಪ ಈರಪ್ಪನವರ,ಜಗದೀಶ ತೇಲಿ,ರಾಜು ಭಜಂತ್ರಿ,ಕೃಷ್ಣಾ ಗಾಡಿವಡ್ಡರ,ಮಲ್ಲು ಢವಳೇಶ್ವರ,ಹುಸೇನಸಾಬ ಶೇಖ,ಡಾ.ಎಸ್.ಎಸ್.ಪಾಟೀಲ,ಸೋಮಯ್ಯಾ ಹಿರೇಮಠ,ಮಲ್ಲಪ್ಪ ತೇರದಾಳ,ರವೀಂದ್ರ ಸಣ್ಣಕ್ಕಿ,ಈಶ್ವರ ಮುರಗೋಡ,ಹಣಮಂತ ಸತರಡ್ಡಿ,ಪಾಂಡು ಮಹೇಂದ್ರಕರ,ಪ್ರಭು ಹಡಪದ,ಮಹಾದೇವ ಮಸರಗುಪಿ ಈರಣ್ಣ ಕೊಣ್ಣೂರ,ಮಲ್ಲಪ್ಪ ಮದಗುಣಕಿ ಇನ್ನಿತರರು ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ