ಬೆಟಗೇರಿ:ಬೆಳಗಾವಿ ಸಂಸದ ಹಾಗೂ ಕೇಂದ್ರ ರೇಲ್ವೆ ಸಚಿವರಾದ ಸುರೇಶ ಅಂಗಡಿ ಅವರ ನಿಧನ ಬೆಳಗಾವಿ ಜಿಲ್ಲೆಯ ಜನತೆಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಸಮೀಪದ ಕೌಜಲಗಿ ಗ್ರಾಮದಲ್ಲಿ ಗುರುವಾರ ಸೆ.24 ರಂದು ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಮೃತ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ, ಮೌನಾಚರಣೆ ಸಲ್ಲಿಸಿ ಮಾತನಾಡಿ, ಬೆಳಗಾವಿ ಸ್ಮಾರ್ಟ್ ಸಿಟಿ ಸೇರಿದಂತೆ ಈ ವಿಭಾಗದ ಬಹುದಿನಗಳ ಕನಸಾಗಿದ್ದ ಹಲವಾರು ಬೇಡಿಕೆಗಳನ್ನು ಹಂತ ಹಂತವಾಗಿ ಇಡೇರಿಸುವ ಕನಸು ಹೊತ್ತಿದ್ದ ಸುರೇಶ ಅವರ ನಿಧನ ಈಗ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದರು.
ಸ್ಥಳೀಯ ಯುವ ಧುರೀಣರಾದ ಶಿವಾನಂದ ಲೋಕನ್ನವರ, ಡಾ.ಅಶೋಕ ಪಾಟೀಲ, ಶ್ರೀಶೈಲ ಗಾಣಿಗೇರ, ಬಸವರಾಜ ಲೋಕನ್ನವರ, ನೀಲಪ್ಪ ಕೇವಟಿ, ಬಸವರಾಜ ಜೋಗಿ, ರಾಮಣ್ಣ ಈಟಿ, ಮಂಜು ಗೋವಿಂದಪ್ಪಗೋಳ, ಅಶೋಕ ಶಿವಾಪೂರ, ಕಾಶೀಂ ನಗಾರ್ಸಿ, ಮಂಜುನಾಥ ಸಣ್ಣಕ್ಕಿ, ಸಿದ್ದಪ್ಪ ಹಳ್ಳೂರ, ಕೆಂಪ್ಪಣ್ಣ ಹುನಗುಂದ, ಕರೆಪ್ಪ ದಳವಾಯಿ ಸೇರಿದಂತೆ ಸಂಸದ ಸುರೇಶ ಅಂಗಡಿ ಅವರ ಅಭಿಮಾನಿಗಳು, ಗ್ರಾಮಸ್ಥರು ಇದ್ದರು.
