Breaking News
Home / Recent Posts / ಹೋರಾಟ್ಟಕ್ಕೆ ಜಯ ಸಿಗಬೇಕಾದರೆ ಒಗ್ಗಟ್ಟಿನ ಶಕ್ತಿ ಬಹಳ ಮುಖ್ಯವಾಗಿದೆ – ಗೈಬು ಜೈನೆಖಾನ

ಹೋರಾಟ್ಟಕ್ಕೆ ಜಯ ಸಿಗಬೇಕಾದರೆ ಒಗ್ಗಟ್ಟಿನ ಶಕ್ತಿ ಬಹಳ ಮುಖ್ಯವಾಗಿದೆ – ಗೈಬು ಜೈನೆಖಾನ

Spread the love

ಮೂಡಲಗಿ: ಕಾರ್ಮಿಕರ ಮತ್ತು ನೌಕರರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ಹೋರಾಟ್ಟಕ್ಕೆ ಜಯ ಸಿಗಬೇಕಾದರೆ ಒಗ್ಗಟ್ಟಿನ ಶಕ್ತಿ ಬಹಳ ಮುಖ್ಯವಾಗಿದೆ ಎಂದು ಗ್ರಾ.ಪಂ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಬೆಳಗಾವಿ ಜಿಲ್ಲಾ ಸಿಐಟಿಯು ಸಂಘದ ಪ್ರಧಾನ ಕಾರ್ಯದರ್ಶಿ ಗೈಬು ಜೈನೆಖಾನ ಹೇಳಿದರು.
ಅವರು ರವಿವಾರದಂದು ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿಸ್ಧೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮೂಡಲಗಿ ತಾಲೂಕಾ ಗ್ರಾಮ ಪಂಚಾಯತ ನೌಕರ ಸಂಘ ಪ್ರಥಮ ಸಮ್ಮೆಳನವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಸರಕಾರ ಗ್ರಾ.ಪಂ ನೌಕರರ ವೇತನದ 382 ಕೋಟಿ ರೂ ತುರ್ತಾಗಿ ಬಿಡುಗೋಳಿಸಬೇಕು, ಎಮ್.ಎಸ್. ಸ್ವಾಮಿ ವರದಿಯನ್ನು ಜಾರಿಗೆ ತರಬೇಕು, ನೌಕರರನ್ನು ಬಡ್ತಿ ಪ್ರಮಾಣ ಹೆಚ್ಚಿಸುವದರೊಂದಿಗೆ ಪಂಚತಂತ್ರ ಯೋಜನೆಯಲ್ಲಿ ಕೈ ಬಿಟ್ಟ ನೌಕರರನ್ನು ಸೇಪರ್ಡಿಸಬೇಕೆಂದು ಆಗ್ರಹಿಸಿದ್ದರು.
ಕೇಂದ್ರ ಸರಕಾರ ಅಂಬೇಡಕ್ಕರ ಸಂವಿಧಾನವನ್ನು ಉಲ್ಲಘಂನೆ ಮಾಡಿ ಸರ್ವಾಧಿಕಾರ ತೋರುತ್ತಿದ್ದಾರೆ, ಹೊಸ ಶಿಕ್ಷಣ ಪದ್ಧತಿ ಜಾರಿಯಿಂದ ಅಂಗನವಾಡಿ ಮತ್ತು ಅಡುಗೆ ಸಿಬ್ಬಂದಿಯವರು ಕೆಲಸ ಕಳೆದುಕೋಳ್ಳ ಸನಿಹಿತವಾಗಿದೆ. ಮುಂದಿನಗಳಲ್ಲಿ ಪಂಚಾಯತ, ಅಂಗನವಾಡಿ, ಅಕ್ಷರ ದಾಸೋಹ ಸಿಬ್ಬಂದಿಗಳು ತಮ್ಮ ಬೇಡಿಕೆಗಳಿಗೆ ಹೋರಾಟ ಮಾಡುವುದ ಅನಿವಾರರ್ಯವಾಗಿದೆ ಎಂದರು.
ನೌಕರ ಸಂಘದಿಂದ ಅವಿರತ ಪರಿಶ್ರಮ ಮತ್ತು ಹೋರಾಟದ ಫಲವಾಗಿ ಅನೇಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲಾಗಿದು ಉಳಿದ ಬೇಡಿಕೆಕೆಗಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದ ಅವರು ಪ್ರತಿಯೊಬ್ಬರು ಸಂಘದ ಸದಸ್ಯತ್ವನ್ನು ಹೊಂದಬೆಕೆಂದರು.

ಗೋಕಾಕ ತಾಲೂಕ ಗ್ರಾ.ಪಂ ನೌಕರ ಸಂಘದ ಮಡ್ಡೆಪ್ಪ ಭಜಂತ್ರಿ ಮಾತನಾಡಿ, ಪ್ರತಿಯೊಬ್ಬರಿಗೂ ಸಂಘಟನೆ ಬಹಳ ಅವಶ್ಯವಿದೆ, ತಮ್ಮ ತಮ್ಮ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸ ಬೇಕೆಂದರು.

ಅಂಗನವಾಡಿ ನೌಕರ ಸಂಘದ ಜಿಲ್ಲಾಧ್ಯಕ್ಷೆ ದೊಡ್ಡವ್ವ ಪೂಜೇರಿ ಮಾತನಾಡಿ, ನಮ್ಮ ಬೇಡಿಕೆ ಇಡೇರಿಕ್ಕೆಗಾಗಿ ಸಂಘಟನೆಗಳನ್ನು ಉಳಿಸಿ-ಬೆಳಸಬೇಕೆಂದರು.
ಗೋಕಾಕ ತಾಲೂಕಾ ಬಿಸಿಊಟ ನೌಕರ ಸಂಘದ ಅಧ್ಯಕ್ಷೆ ಪಾರ್ವತಿ ಕೌಜಲಗಿ ಮಾತನಾಡಿ, ಬಿಸಿ ಸಿಬ್ಬಂದಿಗಳ ಸಮಸ್ಯೆಗಳ ಈಡೇರಿಕೆಗೆ ನೌಕರ ಒಕ್ಕೂಟದವರ ಸಹಾಯ ಸಹಕಾರ ನಿಡಬೇಕೆಂದು ಮನವಿ ಮಾಡಿಕೊಂಡರು.
ಇದೇ ಸಮಯದಲ್ಲಿ ನೂತನವಾಗಿ ಮೂಡಲಗಿ ತಾಲೂಕಾ ಗ್ರಾ.ಪಂ ನೌಕರ ಸಂಘದ ಪದಾಧಿಕಾಗಳನ್ನು ಆಯ್ಕೆ ಮಾಡಲ್ಲಾಯಿತು.
ಸಮಾರಂಭದ ವೇಧಿಕೆಯಲ್ಲಿ ಗೋಕಾಕ ತಾಲೂಕ ಗ್ರಾ.ಪಂ ನೌಕರ ಸಂಘದ ಕಾರ್ಯದರ್ಶಿ ಕಲ್ಲಪ್ಪ ಮಾದರ, ಧರೇಪ್ಪ ಬೆಳವಿ, ಮಾರುತಿ ನಾಕೊತಿ ರಮೇಶ ಹೊಳಿ ಇದ್ದರು ಸಮಾರಂಭದಲ್ಲಿ ಅಂಗನವಾಡಿ, ಅಕ್ಷರದಾಸೋಹ ಅಡುಗೆ ಸಿಬ್ಬಂದಿ ಮತ್ತು ಗ್ರಾಪ ನೌಕರರು ಮತ್ತಿತರರು ಭಾಗವಹಿಸಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ