Breaking News
Home / Recent Posts / ಪೇರಲ ಬೆಳೆಯಲ್ಲಿ ಆಧುನಿಕ ಉತ್ಪಾದನಾ ತಾಂತ್ರಿಕತೆಗಳ ಆನ್ ಲೈನ್ ತರಬೇತಿ

ಪೇರಲ ಬೆಳೆಯಲ್ಲಿ ಆಧುನಿಕ ಉತ್ಪಾದನಾ ತಾಂತ್ರಿಕತೆಗಳ ಆನ್ ಲೈನ್ ತರಬೇತಿ

Spread the love

ಪೇರಲ ಬೆಳೆಯಲ್ಲಿ ಆಧುನಿಕ ಉತ್ಪಾದನಾ ತಾಂತ್ರಿಕತೆಗಳ ಆನ್ ಲೈನ್ ತರಬೇತಿ

ಮೂಡಲಗಿ: ಪೇರಲ ಬೆಳೆಯಲ್ಲಿ ಅಧಿಕ ಸಾಂದ್ರ ಬೇಸಾಯ ಪದ್ದತಿಯಡಿ ಸಾಲಿನಿಂದ ಸಾಲಿಗೆ ಹತ್ತು ಅಡಿ ಮತ್ತು ಗಿಡದಿಂದ ಗಿಡಕ್ಕೆ ಆರು ಅಡಿ ಅಂತರದಲ್ಲಿ, ಆರುನೂರಾ ಅರವತ್ತು ಗಿಡಗಳನ್ನು ನಾಟಿ ಮಾಡಬಹುದಾಗಿದ್ದು, ಮೊದಲನೇ ವರ್ಷದಲ್ಲಿ ಎರಡರಿಂದ ಮೂರು ಟನ್ ಇಳುವರಿ ಪಡೆಯಬಹುದೆಂದು ಹಣ್ಣು ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಅನೀಲ ಈ.ಸಬರದ ಹೇಳಿದರು.

ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ತೋಟಗಾರಿಕೆ ವಿಸ್ರಣಾ ಶಿಕ್ಷಣ ಘಟಕ, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ “ಪೇರಲ ಬೆಳೆಯಲ್ಲಿ ಆಧುನಿಕ ಉತ್ಪಾದನಾ ತಾಂತ್ರಿಕತೆಗಳು” ರೈತರಿಗಾಗಿ ಆನ್ ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾಟಿ ಮಾಡಿದ ಮೂರು ವರ್ಷದ ಮೇಲೆ ವರ್ಷಕ್ಕೆ ಸರಾಸರಿ ಎಂಟರಿoದ ಹತ್ತು ಟನ್ ಪ್ರತಿ ಎಕರೆಗೆ ಇಳುವರಿ ಪಡೆದು ಎರಡರಿಂದ ಎರಡುವರೆ ಲಕ್ಷ ಆದಾಯ ಗಳಿಸಬಹುದೆಂದು ತಿಳಿಸಿದರು. ಇತರೆ ಬೇಸಾಯ ತಾಂತ್ರಿಕತೆಗಳಾದ ಸೂಕ್ತವಾದ ಮಣ್ಣು, ಹವಾಗುಣ, ಕಳೆ ನಿರ್ವಹಣೆ, ನೀರಾವರಿ ಪದ್ದತಿ, ಕೊಯ್ಲು ಮಾಡುವ ಸಮಯ ಮತ್ತು ಪದ್ದತಿಯ ಬಗ್ಗೆ ತಿಳಿಸಿಕೊಟ್ಟರು.

ಸಹಾಯಕ ಪ್ರಾಧ್ಯಾಪಕ ನಟರಾಜ ಕೆ.ಹೆಚ್ ಮಾತನಾಡಿ, ಪೇರಲ ಬೆಳೆಯಲ್ಲಿ ಆಕಾರ ಕೊಡುವುದು ಮತ್ತು ಚಾಟನಿ ಪದ್ದತಿಗಳ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು.

ಅಧಿಕ ಸಾಂದ್ರ ಬೇಸಾಯ ಪದ್ದತಿಯಲ್ಲಿ ಬೆಳೆಯಬೇಕಾದರೆ ರೈತರು 45 ಸೆಂಟಿ ಮೀಟರ್‌ನಿಂದ ಅರವತ್ತು ಸೆಂಟಿ ಮೀಟರ್ ಉದ್ದದ ಗಿಡಗಳನ್ನು ಆಯ್ಕೆ ಮಾಡಬೇಕು.

ನಾಟಿ ಮಾಡಲು ಜೂನ್ ಜುಲೈ ತಿಂಗಳುಗಳು ಅತೀ ಸೂಕ್ತವಾಗಿದ್ದು, ನಾಟಿ ಮಾಡಿದ ಎರಡು ತಿಂಗಳಿಗೆ ಅರವತ್ತು ಸೆಂಟಿ ಮೀಟರ್ ಎತ್ತರಕ್ಕೆ ಚಾಟನಿ ಮಾಡಬೇಕು. ಮತ್ತು ಒಂದು ವರ್ಷದೊಳಗೆ ನಿಗದಿತ ಛತ್ರಿ ಆಕಾರ ಕೊಡುವುದು. ಎರಡನೇ ವರ್ಷದ ನಂತರ ಸಾಮಾನ್ಯವಾಗಿ ಮೇ ಅಥವಾ ಜೂನ್ ತಿಂಗಳಿನಲ್ಲಿ ಚಾಟನಿ ಮಾಡುವುದು ವಾಡಿಕೆ ಇರುವುದರಿಂದ ಸಪ್ಟಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದೆಂದು ತಿಳಿಸಿದರು.

ಚಾಟನಿಯನ್ನು ಫೆಬ್ರವರಿ-ಮಾರ್ಚ ಮತ್ತು ಸಪ್ಟಂಬರ್- ಅಕ್ಟೋಬರ್ ತಿಂಗಳುಗಳಲ್ಲಿ ಕೂಡಾ ಮಾಡಬಹುದಾಗಿದ್ದು, ಚಾಟನಿ ಮಾಡಿದ ಐದರಿಂದ ಆರು ತಿಂಗಳುಗಳಲ್ಲಿ ಹಣ್ಣು ಕೊಯ್ಲು ಮಾಡಬಹುದೆಂದು ತಿಳಿಸಿದರು.

ಸಸ್ಯರೋಗ ಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಕಾಂತರಾಜು. ವಿ ಪೇರಲ ಬೆಳೆಗೆ ಬರುವ ಕಜ್ಜಿರೋಗ, ಬೇರು ಗಂಟು ರೋಗ, ಬೇರು ಕೊಳೆರೋಗ, ಸೊರಗು ರೋಗ ಮತ್ತು ಹಣ್ಣು ಕೊಳೆ ರೋಗಗಳ ಗುರುತಿಸುವಿಕೆ, ಹರಡುವಿಕೆಗೆ ಬೇಕಾಗುವ ಸೂಕ್ತ ವಾತಾವರಣ ಮತ್ತು ನೂತನ ಹತೋಟಿ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕೀಟಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಡಾ. ರಾಮನಗೌಡ ಎಸ್.ಎಚ್. ಇವರು ಪೇರಲ ಬೆಳೆಯ ಹಣ್ಣು ನೊಣ ಮತ್ತು ರಸ ಹೀರುವ ಕೀಟಗಳ ಗುರುತಿಸುವಿಕೆ, ಬಾಧೆಯ ಲಕ್ಷಣಗಳು ಮತ್ತು ವಿವಿಧ ನಿಯಂತ್ರಣಾ ಕ್ರಮಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಸಚಿನಕುಮಾರ


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ