Breaking News
Home / Recent Posts / ಗ್ರಾಮದ ಜನತೆ ಮತ ಚಾಯಿಸುವ ಮೂಲಕ ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟಿದ್ದಾರೆ

ಗ್ರಾಮದ ಜನತೆ ಮತ ಚಾಯಿಸುವ ಮೂಲಕ ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟಿದ್ದಾರೆ

Spread the love

ಮೂಡಲಗಿ: ಗ್ರಾಮದ ಜನತೆ ಮತ ಚಾಯಿಸುವ ಮೂಲಕ ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟಿದ್ದಾರೆ, ಅಂತಹ ಜವಾಬ್ದಾರಿಯನ್ನು ಗ್ರಾ.ಪಂ ಸದಸ್ಯರು ಗ್ರಾಮದ ಸರ್ವತೋಮುಖ ಅಭಿವೃದ್ಧಿಯತ್ತ ಗಮನ ಹರಿಸುವುದು ಅಗತ್ಯವಾಗಿದೆ ಎಂದು ಯಾದವಾಡ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಹೇಳಿದರು.
ಅವರು ತಾಲೂಕಿನ ಯಾದವಾಡ ಗ್ರಾಮ ಪಂಚಾಯತಿಯ ನೂತನ ಸದಸ್ಯರಿಗೆ ಪ್ರಮಾಣ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಸ್ಥಳೀಯ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಜಾರಕಿಹೊಳಿಯವರ ಗಮನಕ್ಕೆ ತಂದರೆ ಯಾವದೇ ಬೇಡಿಕೆಗಳನ್ನು ಈಡೇರಿಸಲು ಸಿದ್ದರಿದ್ದಾರೆ, ಗ್ರಾಮಸ್ಥರು ಹಿರಿಯರು, ಜನಪ್ರತಿನಿಧಿಗಳ ಹಾಗೂ ಅಧಿಕಾರಿ ವರ್ಗಗಳ ಸಹಕಾರದೊಂದಿಗೆ ಗ್ರಾಮದ ಮೂಲಭೂತ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಮಾದರಿ ಗ್ರಾಮವನ್ನಾಗಿ ಮಾಡಲು ಶ್ರಮಿಸಬೇಕೆಂದರು.
ಯಾದವಾಡ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಯಲ್ಲಪಗೌಡ ಎಲ್.ನ್ಯಾಮಗೌಡ ಮಾತನಾಡಿ, ಹಿಂದಿನ ಅವಧಿಯಲ್ಲಿ ನಾವು ಮಾಡಿದ ಕೆಲಸಗಳನ್ನು ಕಂಡ ಜನತೆ ತಮ್ಮನ್ನು ಮರು ಆಯ್ಕೆ ಮಾಡಿದ್ದಾರೆ, ಮತದಾರರ ವಿಶ್ವಾಸಕ್ಕೆ ಚ್ಯತಿ ಬರದಂತೆ ಮಂದಿನ ದಿನಗಳಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಚುನಾವಣಾಧಿಕಾರಿ ಎ.ಕೆ.ಕಟಕಭಾವಿ ಅವರು ನೂತನ 25 ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿ ಮಾತನಾಡಿ, ಚುನಾವಣೆಯಲ್ಲಿ ಸಂಧರ್ಭದಲ್ಲಿ ಗ್ರಾಮದ ಜನತೆ ಎಲ್ಲ ರೀತಿಯ ಸಹಕಾರ ನೀಡಿದ್ದರಿಂದ ಚುನಾವಣೆಯು ಯಾವುದೇ ರೀತಿಯ ಅಡಚಣೆಯಿಲ್ಲದೆ ನಡೆಯಿತು ಎಂದು ಕೃತಜ್ಞತೆ ಸಲ್ಲಿಸಿದರು.
ನೂತನ ಗ್ರಾ.ಪಂ ಸದಸ್ಯರಾದ ಕಲ್ಮೇಶ ಗಾಣಗಿ ಮತ್ತು ಹಣಮಂತ ಚೆಕ್ಕೆನ್ನವರ ಮಾತನಾಡಿ, ನಮ್ಮಮೇಲೆ ವಿಶ್ವಸ ಇಟ್ಟು ಆಯ್ಕೆ ಮಾಡಿದ ಜನತೆಯ ವಿಶ್ವಾಸಕ್ಕೆ ದ್ರೋಹ ಬಗೆಯದಂತೆ ನಾವೆಲ್ಲ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೆವೆ ಎಂದರು.
ಸಮಾರಂಭದಲ್ಲಿ ತಾ.ಪಂ ಸದಸ್ಯೆ ಮಾನಂದಾಬೆಳಗಲಿ, ಶ್ರೀಶೈಲ್ ಢವಳೇಶ್ವರ, ಮಲ್ಲಪ್ಪ ಮಾಳೇದ, ಶಂಕರ ತೋಟಗಿ, ಊರಣ್ಣಾ ತಿಮ್ಮಾಪೂರ, ಸಿದ್ದಪ್ಪ ಪೂಜೇರಿ, ಡಾ: ಶಿವಾಜಿ ಪಾಟೀಲ, ಹಿರಿಯರಾದ ರಂಗಪ್ಪ ಇಟ್ಟಣ್ಣವರ, ಶಂಕರ ಬೆಳಗಲಿ, ಗ್ರಾ.ಪಂ ಕಾರ್ಯದರ್ಶಿ ಪಿ.ಎಮ್.ಸಮಗಾರ ಗ್ರಾ.ಪಂ ಸದಸ್ಯರು, ಸಿಬ್ಬಂದಿ ವರ್ಗದವರು ಇದ್ದರು. ಗ್ರಾ.ಪಂ ಪಿಡಿಒ ಎಂ.ಎಚ್.ಹುಡೇದ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.


Spread the love

About inmudalgi

Check Also

ಘಟಪ್ರಭಾ ನದಿಗೆ 1.36 ಲಕ್ಷ ಕ್ಯೂಸೆಕ್ಸ್ ನೀರು, ಸುರಕ್ಷತೆಯಿಂದಿರಲು ಸಂತ್ರಸ್ತರಿಗೆ ಶಾಸಕರ ಮನವಿ ನೆರೆಪೀಡಿತ 12 ಕಡೆಗಳಲ್ಲಿ ಗಂಜಿಕೇಂದ್ರಗಳು ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಘಟಪ್ರಭಾ ನದಿಗೆ 1.36 ಲಕ್ಷ ಕ್ಯೂಸೆಕ್ಸ್ ನೀರು, ಸುರಕ್ಷತೆಯಿಂದಿರಲು ಸಂತ್ರಸ್ತರಿಗೆ ಶಾಸಕರ ಮನವಿ ನೆರೆಪೀಡಿತ 12 ಕಡೆಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ