ಮೂಡಲಗಿಯ ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ ಬಹದ್ದೂರಶಾಸ್ತ್ರಿ ಜಯಂತಿ ಆಚರಿಸಲಾಯಿತು.
ಮುಡಲಗಿ : ಸತ್ಯ, ಪ್ರೀತಿ ಅಹಿಂಸೆಗಳ ತ್ರಿವೇಣಿ ಸಂಗಮಕ್ಕೆ ಇನ್ನೋಂದು ಹೆಸರೆ ಮಹಾತ್ಮ ಗಾಂಧಿ. ಮಹಾತ್ಮ ಗಾಂಧೀಜಿ ಜಗತ್ತೀನ ಮಹಾನ್ ಪುರುಷರಲ್ಲಿ ಒಬ್ಬರಾಗಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಹಿರಿಯ ನ್ಯಾಯವಾದಿಗಳಾದ ಎಮ್.ಆಯ್. ಬಡಿಗೇರ ಹೇಳಿದರು.
ಅವರು ಸ್ಥಳೀಯ ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದ ಆವರಣದಲ್ಲಿ ನಡೇದ ಮಹಾತ್ಮ ಗಾಂಧಿ ಹಾಗೂ ಲಾಲ ಬಹದ್ದೂರಶಾಸ್ತ್ರಿ ಜಯಂತಿ ಅಂಗವಾಗಿ ಮಾತನಾಡುತ್ತಾ, ಗಾಂಧಿಜಿಯವರು ಚಿಕ್ಕಂದಿನಿಂದಲೆ ಸತ್ಯೆ ನಿಷ್ಟೆ ಸೇವಾ ಭಾವಗಳನ್ನು ರಕ್ತಗತವಾಗಿ ಬಳಸಿಕೊಂಡು ಬಂದವರು. ಗಾಂಧಿಜಿಯವರಿಗೆ ಅಸತ್ಯ ಕಂಡರೆ ಅಸಹ್ಯವೆನಿಸುತ್ತಿತ್ತು ಎಂದರು.
ನ್ಯಾಯವಾದಿಗಳ ಸಂಘದ ಖಜಾಂಚಿ ವಿ.ಕೆ.ಪಾಟೀಲ ಮಾತನಾಡುತ್ತಾ, ಭಾರತದಲ್ಲಿ ಮೊದಲ ಬಾರಿಗೆ ಸತ್ಯಗ್ರಹ ಎಂಬ ಶಬ್ದವನ್ನು ನಿರ್ಮಿಸಿದವರು ಮಹಾತ್ಮ ಗಾಂಧಿ. ಬ್ರಿಟಿಷರ ವಿರುದ್ದ ಹೋರಾಡಲು ಸತ್ಯಗ್ರಹವನ್ನು ಒಂದು ಅಸ್ತ್ರವಾಗಿ ಬಳಸಿಕೊಂಡರು. ಇಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ನಾವೆಲ್ಲರು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳೋನ ಎಂದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಮಹಿಳಾ ಪ್ರತಿನಿಧಿ ಎ.ಎಚ್. ಗೊಡ್ಯಾಗೋಳ ಹಾಗೂ ಹಿರಿಯ ನ್ಯಾಯವಾದಿಗಳಾದ ವಿ.ವಿ. ನಾಯಕ, ಎನ್.ಬಿ. ನೇಮಗೌಡರ, ಎಸ್.ಬಿ.ತುಪ್ಪದ, ಎಲ್.ಎಸ್.ಯಡ್ರಾಂವಿ, ವಾಯ್.ಎಸ್.ಖಾನಟ್ಟಿ ಮತ್ತೀತರು ಉಪಸ್ಥಿತರಿದ್ದರು.