ಮೂಡಲಗಿ: ಗ್ರಾಮೀಣ ಪ್ರದೇಶದಲ್ಲಿ ಆಚಾರ, ವಿಚಾರ, ಕನ್ನಡದ ಉಚ್ಚಾರಣೆ, ಉಡುಗೆ, ತೂಡುಗೆ, ಸಂಸ್ಕøತಿ ಕರ್ನಾಟಕವನ್ನು ಇಂದಿಗೂ ಜೀವಂತವಾಗಿ ಕಾಣಬಹುದಾಗಿದೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಈರಣ್ಣ ಕಡಾಡಿ ಅವರು ಹೇಳಿದರು.
ರವಿವಾರ ಅ 4 ರಂದು ಕಲ್ಲೋಳಿ ಪಟ್ಟಣದ ಬಸವ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನಾಡು, ನುಡಿ, ಸಂಸ್ಕøತಿ ಉಳಿಸಿಕೊಳ್ಳುವುದರೊಂದಿಗೆ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕನ್ನಡ ತಾಯಿಗೆ ಗೌರವ ನೀಡುವಂತಾಗಬೇಕೆಂದರು.
ಗ್ರಾಮೀಣ ಪ್ರದೇಶದಲ್ಲಿ ಜನಸಾಮಾನ್ಯರಿಗೆ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ಯುವಕರು ನೀಡಬೇಕು ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನ್ ತಿಳಿಹೇಳುವಲ್ಲಿ ನಿಮ್ಮ ಪಾತ್ರ ಮುಖ್ಯವಾಗಿದೆ. ಕೇಂದ್ರ ಸರಕಾರದ ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆ, ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನ್ ರೈತರಿಗೆ ಮುಟ್ಟಿಸುವ ಕಾರ್ಯವನ್ನು ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ಮಾಡಬೇಕೆಂದರು.
ಹಣಮಂತ ದಾಸನವರ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ ಸದಸ್ಯ ಶಂಕರ ಮಕ್ಕಳಗೇರಿ, ಪಪ್ಪು ಹಂದಿಗುಂದ, ಬಸವರಾಜ ಹುಲಕುಂದ, ರಾಮಚಂದ್ರ ಕಾಕಡೆ, ರಮೇಶ ಗೊಸಬಾಳ, ಸಂಜು ಯಕ್ಸಂಬಿ, ವಿಲಾಸ ಗಾಡಿವಡ್ಡರ, ಕೃಷ್ಣಾ ಬಂಡಿವಡ್ಡರ, ಸಿದ್ದು ಯಕ್ಕುಂಡಿ ಸೇರಿದಂತೆ ಕಲ್ಲೋಳಿ, ರಾಜಾಪೂರ, ದಂಡಾಪೂರ, ಅರಭಾವಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು. ಚೂನಪ್ಪ ಕಡಕಭಾವಿ ಸ್ವಾಗತಿಸಿದರು. ಅನೀಲ ಮಾಳಗಿ ಕಾರ್ಯಕ್ರಮ ನಿರೂಪಿಸಿದರು. ರವಿ ಗಾಡಿವಡ್ಡರ ವಂದಿಸಿದರು.
Home / Recent Posts / ಗ್ರಾಮೀಣ ಪ್ರದೇಶದಲ್ಲಿ ಆಚಾರ, ವಿಚಾರ, ಕನ್ನಡದ ಉಚ್ಚಾರಣೆ, ಉಡುಗೆ, ತೂಡುಗೆ, ಸಂಸ್ಕøತಿ ಕರ್ನಾಟಕದಲ್ಲಿ ಇಂದಿಗೂ ಜೀವಂತವಾಗಿ ಕಾಣಬಹುದಾಗಿದೆ – ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಈರಣ್ಣ ಕಡಾಡಿ
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …