ವಿದ್ಯುತ್ ವಲಯ ಖಾಸಗಿಕರಣ ವಿರೋಧಿಸಿ ಪ್ರತಿಭಟನೆ
ಕುಲಗೋಡ: ವಿದ್ಯುತ ವಲಯದ ಖಾಸಗೀಕರಣ ವಿರೋಧಿಸಿ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿ ನೌಕರರ ಸಂಘ ಹೆಸ್ಕಾಂ ಕಛೇರಿಯಲ್ಲಿ ಸೋಮವಾರ ಮುಂಜಾನೆ ಕೈಗೆ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಕುಲಗೋಡ ಶಾಖಾಧಿಕಾರಿ ಎಸ್.ಎಸ್ ಯಲಿಗಾರ ಮಾತನಾಡಿ ಕೇಂದ್ರ ಸರಕಾರ 2003 ರ ವಿದ್ಯುತ್ ಕಾಯ್ದೆಗೆ ಪ್ರಸ್ತಾಪಿತ ತಿದ್ದುಪಡಿಯನ್ನು ತರಲು ಮುಂದಾಗಿದ್ದು ಹಾಗೂ ವಿತರಣಾ ಕಂಪನಿಯನ್ನು ಖಾಸಗಿಕರಣಗೊಳಿಸುವ ಕಾರ್ಯ ಮಾಡುತ್ತಿದೆ.ಇದರಿಂದ ಜನರಿಗೆ,ರೈತರಿಗೆ ಕಾರ್ಮಿಕರಿಗೆ ತೊಂದರೆಗುವದ್ದು ಕೂಡಲೇ ಸರಕಾರ ಜನವಿರೋಧಿ,ರೈತವಿರೋಧಿ, ಕಾರ್ಮಿಕವಿರೋಧ ಚಟುವಟಿಕೆ ನಿಲ್ಲಿಸಬೇಕು. ಈಗಾಗಲೇ ಕೆಲ ರಾಜ್ಯಗಳಲ್ಲಿ ವಿದ್ಯುತ್ ಪ್ರಸರಣವನ್ನು ಕಾಸಗಿ ಕಂಪನಿಗೆ ವಹಿಸಿದ್ದರಿಂದ ವಿದ್ಯುತ್ ಶುಲ್ಕ ಹೆಚ್ಚಾಗಿ ಜನಸಾಮಾನ್ಯರ ಮೇಲೆ ಹೊರೆವಾಗಿದೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಕಡಿತಗೋಳುವ ಸಾಧ್ಯತೆ ಇದೆ. ಅನೇಕ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಸಾದ್ಯತೆ ಇದೆ. ಈ ಕೂಡಲೇ ಸರಕಾರ ಜನ,ರೈತ,ನೌಕರ ವಿರೋಧಿ ಕಾರ್ಯ ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ “ಬೇಡಾ ಬೇಡಾ ವಿದ್ಯುತ್ ಕಾಯ್ದಿಗೆ ತಿದ್ದುಪಡಿ ಬೇಡಾ”. “ಬೇಡಾ ಬೇಡಾ ವಿದ್ಯುತ್ ಖಾಸಗೀಕರಣ ಬೇಡಾ” ಎಂದು ಕೂಗಿ ಪ್ರತಿಭಟಿಸಿದರು.
ಸಂದರ್ಭದಲ್ಲಿ ಶಾಖಾಧಿಕಾರಿ ಎಸ್.ಎಸ್ ಯಲಿಗಾರ. ಎಮ್.ಎನ್. ಬೇಟಗೇರಿ. ಬಿ.ಬಿ. ಬಾಡವಾಡಗಿ. ಎಸ್.ಎಮ್.ಚೌಗಲಾ. ವ್ಹಿ.ವಾಯ್.ಭಜಂತ್ರಿ. ಎಮ್.ಎನ್. ಪುರವಂತ. ಎಸ್.ಎಚ್ ತುಬಚಿ. ಅಶೋಕ ಎಸ್. ಯು.ಎಸ್. ಕರನಿಂಗಪ್ಪಗೋಳ. ಬಿ.ಎಮ್ ಮಡಿಹಳ್ಳಿ . ಆರ್.ಬಿ.ಕಂಬಳಿ ಹಾಗೂ ಸರ್ವ ಸಿಬ್ಬಂದಿ ಇದ್ದರು.