ಮೂಡಲಗಿ :- ಮದ್ಯವರ್ತಿಗಳ ಹಾವಳಿಯಿಂದ ರೈತರು ಮುಕ್ತವಾಗಿ ಮತ್ತು ನೇರವಾಗಿ ಮಾರುಕಟ್ಟೆಗೆ ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸರಕಾರವು ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಸರಕಾರ ಮುಕ್ತ ಮಾರಾಟವನ್ನು ವಹಿವಾಟವನ್ನು ಕಲ್ಪಿಸುವಲ್ಲಿ ಮುಂದಾಗಿದೆ ಎಂದು ಮಲ್ಲಪ್ಪ ಮದಗುಣಕಿ ಹೇಳಿದರು
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತರಲಿರುವ ಎ.ಪಿ.ಎಂ.ಸಿ ಮತ್ತು ಭೂ ಸೂಧಾರಣಾ ಕಾಯ್ದೆ ತಿದ್ದುಪಡಿ ರೈತ ವರ್ಗಕ್ಕೆ ಪೂರಕವೋ ಅಥವಾ ಮಾರಕವೋ ಎಂಬ ವಿಚಾರ ಆದರಿಸಿ ಕರ್ನಾಟಕ ನವ ನಿರ್ಮಾನ ಸೇನೆಯ ನೇತೃತ್ವದಲ್ಲಿ ನಾಗನೂರ ಗ್ರಾಮದ ನಾಗನೂರ ಅರ್ಬನ್ ಕೋ-ಆಪ್ರೆಟಿವ್ ಬ್ಯಾಂಕ ಸಭಾ ಭವನದಲ್ಲಿ ನಡೆದ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಮಾತನಾಡಿ, ಸದ್ಯ ಎ.ಪಿ.ಎಂ.ಸಿ ಯಲ್ಲಿ ಮದ್ಯವರ್ತಿಗಳ ಹಾವಳಿ ಹೆಚ್ಚಿದ್ದು ಸರಕಾರದ ಈ ನೀಲುವು ರೈತ ವರ್ಗಕ್ಕೆ ಪೂರಕವೆಂದರೆ ತಪ್ಪಾಗಲಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಡ್ರ್ಸ ಸಂಸ್ಥೆಯ ಅಧ್ಯಕ್ಷ ಎ.ಆರ್ ಪಾಟೀಲ್ ಪ್ರಾಸ್ಥಾವಿಕವಾಗಿ ಮಾತನಾಡಿ ಕರ್ನಾಟಕ ನವನಿರ್ಮಾಣ ಸೇನೆಯ ಈ ವಿಬಿನ್ನ ಪ್ರಯತ್ನವನ್ನು ಶ್ಲಾಗಿಸಿದ್ದಲ್ಲದ್ದೆ ಈ ಚರ್ಚೆಯನ್ನು ಸರ್ಕಾರಕ್ಕೆ ಮುಟ್ಟಿಸುವ ವಿಶ್ವಾಸವನ್ನು ವ್ಯಕ್ತಪಡಿಸಿ ಅನೇಕ ಕಾನೂನು ಮಾರ್ಗದರ್ಶನವನ್ನು ಮಾಡಿದರು.
ರೈತ ಮುಖಂಡ ಚೂನಪ್ಪ ಪೂಜೇರಿ ಮಾತನಾಡಿ,ರಾಜ್ಯದಲ್ಲಿ ಜಾರಿ ಆಗಲಿರುವ ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡೆತಯು ಮಧ್ಯವರ್ತಿಗಳಿಂದ ಮುಕ್ತಗೊಳಿಸುವ ನೇಪದಲ್ಲಿ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ ಅಲ್ಲದೆ ಭವಿಷ್ಯದಲ್ಲಿ ರೈತ ವರ್ಗ ಈ ತಿದ್ದುಪಡೆಗೆ ಹಿಡಿ ಶಾಪ ಹಾಕುವಲ್ಲಿ ಎರಡು ಮಾತಿಲ್ಲ ಈಗಾಗಲೆ ಕಬ್ಬನ್ನು ಖಾಸಗಿ ಕಂಪನಿಗಳಿಗೆ ನೀಡಿ ರೈತರು ಅನುಭವಿಸುತ್ತಿರುವ ಗೋಳು ಕೇಳುವರಿಲ್ಲ ಇನ್ನು ಎ.ಪಿ.ಎಂಸಿಗೆ ಹೊಗುತ್ತಿದ್ದ ದವಸ ದಾನ್ಯಗಳು ಮುಂದಿನ ದಿನಮಾನಗಳಲ್ಲಿ ಖಾಗಿಕರಣಕ್ಕೋಳಗಾಗಿ ರೈತರ ಆರ್ಥಿಕ ಸಂಕಷ್ಟ ದ್ವಿಗುಣಗೊಳ್ಳುವುದಂತು ಸತ್ಯ ಇಷ್ಟಾಗಿಯು ತಿದ್ದುಪಡಿಯು ಸರ್ಕಾರಕ್ಕೆ ಅನಿವಾರ್ಯವೆ ಆಗಿದ್ದರೆ ರೈತ ಬೆಳೆಯನ್ನು ಖರಿದಿಸುವ ಕಾರ್ಪೋರೇಟ್ ಕಂಪನಿಗಳ ಮೇಲೆ ಸರ್ಕಾರ ಪೂರ್ಣ ಪ್ರಮಾಣದ ಹೀಡಿತವನ್ನು ಸಾಧಿಸಬೇಕಲ್ಲದೇ ಇದಕ್ಕಾಗಿ ಅಧಿಕಾರಿಗಳನ್ನು ನಿಯೋಜಿಸಿದರೆ ಮಾತ್ರ ಭವಿಷ್ಯದಲ್ಲಿ ಈ ಕಾಯ್ದೆ ಯಾವುದೇ ರೀತಿಯ ಅಹಿತಕರ ಬದಲಾವಣೆಯನ್ನು ಹೊಂದುವುದಿಲ್ಲ ಇನ್ನೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯು ಕೃಷಿ ಕ್ಷೇತ್ರಕ್ಕೆ ಬಹುದೊಡ್ಡ ಹೊಡೆತವೇ ಸರಿ ಕೃಷಿ ಹೆಸರಿನಲ್ಲಿ ಭೂಮಿ ಖರಿದಿಸುವ ಕಾರ್ಪೋರೇಟ್ ಕಂಪನಿಗಳು ಕಾಲಕ್ರಮೆಣ ಕೃಷಿ ಭೂಮಿಯನ್ನು ಉಧ್ಯಮಕ್ಕೆ ಬಳಸಿಕೊಳ್ಳುವ ಮೂಲಕ ಕೃಷಿ ಕ್ಷೇತ್ರಕ್ಕೆ ಕೋಡ್ಲಿ ಪೆಟ್ಟು ನೀಡಲಿದೆ ಎಂದರು.
ಬಿ.ಜೆ.ಪಿ ರೈತ ಮೋರ್ಚಾ ಅರಭಾಂವಿ ಮಂಡಲ ಪ್ರದಾನ ಕಾರ್ಯದರ್ಶಿ ಶ್ರೀಕಾಂತ ಕೌಜಲಗಿ ರೈತರು ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಇಲ್ಲದ ಕಾರಣ ರೈತರು ಅನಿವಾರ್ಯವಾಗಿ ಮಧÀ್ಯವರ್ತಿಗಳ ಹಾವಳಿಯ ನಡುವೆ ಎ.ಪಿ.ಎಂ.ಸಿಗೆ ಮೊರೆ ಹೋಗುವ ಅವಶ್ಯಕತೆ ಇತ್ತು ಇದೀಗ ಸರಕಾರ ತಂದಿರುವ ತಿದ್ದುಪಡೆ ರೈತರಿಗೆ ಮುಕ್ತ ಮಾರಾಟ ಕಲ್ಪಸಿಕೊಡುವಲ್ಲಿ ಎರಡು ಮಾತಿಲ್ಲ ಹಾಗೂ ಮದ್ಯವರ್ತಿಗಳಿಗೆ ಹೋಗುತ್ತಿದ್ದ ಅನಾಯಸ ದುಡ್ಡನ್ನು ಸಹ ರೈತರಿಗೆ ಕಲ್ಪಸಿ ರೈತರನ್ನು ಆರ್ಥಿಕ ಸಧೃಡರಾಗಿಸುವಲ್ಲಿ ಈ ಕಾಯ್ದೆ ಬಹುದೊಡ್ಡ ಪಾತ್ರವನ್ನು ವಹಿಸಲಿದೆ ಎಂದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಬಗ್ಗೆ ಮಾತನಾಡಿದ ಅವರು ರೈತ ಕೃಷಿ ಭೂಮಿಯನ್ನು ರೈತ ತನ್ನ ಆರ್ಥಿಕ ಸಂಕಷ್ಟಗಳಲ್ಲಿ ಯಾರಿಗಾದರೂ ಮಾರುವ ಮತ್ತು ದೊಡ್ಡ ಕೃಷಿಕರಿಗಾಗಲಿ ಕಾರ್ಪೋರೇಟ್ ಕಂಪನಿಗಳಿಗೆ ನಿರಿಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾರುವ ಮೂಖೇನ ತನ್ನ ಆರ್ಥಿಕ ಸಬಲತೆಗೆ ಸಮರ್ಥನಾಗುತ್ತಾನಲ್ಲದೆ ರೈತರಿಂದ ಪಡೆದ ಕೃಷಿ ಭೂಮಿಯನ್ನ ಕೃಷಿಗೆ ಬಳಸುವಂತೆ ಕೆಲವು ಷರತ್ತು ಬದ್ಧ ನೀಯಮಾವಳಿಗಳು ಕಾಯ್ದೆ ತಿದ್ದುಪಡಿಯಲ್ಲಿದ್ದು ರೈತರ ಕೃಷಿ ಭೂಮಿಯು ಯಾವೂದೇ ರೀತಿಯು ಪರಿವರ್ತನೆಗೊಳ್ಳುವುದಿಲ್ಲ ಹಾಗಾಗಿ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ಮತ್ತು ರೈತರ ಒಪ್ಪಿಗೆ ಇಲ್ಲದೆ ಯಾವುದೇ ಕಾರ್ಪೋರೇಟ್ ಕಂಪನಿ ಅಥವಾ ವ್ಯಕ್ತಿಯು ರೈತನ ಕೃಷಿ ಭೂಮಿಯನ್ನ ಖರೀದಿಸಲು ಸಾಧ್ಯವಿಲ್ಲ ಮತ್ತು ರೈತರ ಮೇಲೆ ಯಾವುದೇ ದಬ್ಬಾಳಿಕೆ ಅಥವಾ ದೌರ್ಜನ್ಯದಿಂದ ಕೃಷಿ ಭೂಮಿ ಖರಿದಿಸಲು ಮುಂದಾದರೆ ಅದು ಕಾನೂನು ಉಲ್ಲಂಗನೆ ಆಗುತ್ತದೆ ಅದು ಶಿಕ್ಷಾರ್ಹ ಅಪರಾದವು ಸರಿ ಎಂಬುದು ಭೂ ಸುಧಾರಣಾ ಕಾಯ್ದೆಯ ಪ್ರಮೂಖ ಅಂಶಗಳಾಗಿವೆ ರಾಜ್ಯದಲ್ಲಿ ಸಮಾರೂ 22 ಲಕ್ಷ ಹೇಕ್ಟರ ಭೂಮಿಯು ಕೃಷಿಗೆ ವಗ್ಗದ ಹಾಗೂ ನಿರ್ಜನ ಪ್ರದೇಶವನ್ನು ಮಾತ್ರ ಉದ್ಯಮಕ್ಕೆ ಮತ್ತು ಕಾರ್ಖಾನೆಗಳಿಗೆ ಬಳಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ ಅದು ಸಹ ಮಾರಾಟ ಮಾಡುವವರ ಒಪ್ಪಿಗೆಯ ಆಧಾರದ ಮೇಲೆ ಆಗಿರುತ್ತದೆ ಎಂದರು.
ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಆನಂದರಾವ್ ನಾಯ್ಕ,ಉಮೇಶ ಬೆಳಕೂಡ ಮಾತನಾಡಿದರು
ಕರ್ನಾಟಕ ನವನಿರ್ಮಾಣ ಸೇನಯ ತಾಲೂಕಾ ಅದ್ಯಕ್ಷ ಸಚೀನ ಲೆಂಕೆನ್ನವರ, ಉಪಾಧ್ಯಕ್ಷ ಮಹಾಂತೆಶ ಮುಗಳಖೋಡ, ಕಾರ್ಯದರ್ಶಿ ಶಾನೂರ ಕುರಬೇಟ, ಬಸವರಾಜ ನಾಯ್ಕ, ಶಿವಾನಂದ ಮೇಣಸಿ, ಸಾಗರ ಢವಳೇಶ್ವರ, ರಾಘವೇಂದ್ರ ಮುನ್ಯಾಳ, ಸುರೇಶ ಪಾಟೀಲ, ರೈತ ಮುಖಂಡ ಶ್ರೀಶೈಲ ಅಂಗಡಿ, ಮಂಜುನಾಥ ಗದಾಡಿ, ಈರಪ್ಪ ಢವಳೇಶ್ವರ, ಗುರುನಾಥ ಗಂಗಣ್ಣವರ, ಶ್ರೀಶೈಲ ಜೈನಾಪೂರ, ಸಾವಂತ ಹೊಸಮನಿ, ಕೃಷ್ಣಾ ಪಾಟೀಲ, ಉದಯಕುಮಾರ ಪಾಟೀಲ ಅನೇಕರು ಉಪಸ್ಥಿತರಿದ್ದರು.