ಕುಲಗೋಡ ಪೊಲೀಸರಿಂದ ಕರೋನಾ ನಿರ್ಮೂಲನಾ ಜಾಗೃತಿ ಅಭಿಯಾನ
ಕುಲಗೋಡ:ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಅಂಬೇಡ್ಕರ ವೃತ್ತದ ಬಳಿ ಪೊಲೀಸ ಇಲಾಖೆ ವತಿಯಿಂದ ಕರೋನಾ ನಿರ್ಮೂಲನಾ ಜಾಗೃತಿ ಅಭಿಯಾನ ನಡೆಯಿತು.
ಠಾಣೆಯ ವ್ಯ್ಯಾಪ್ತಿಯ ಗ್ರಾಮಸ್ಥರು ಕರೋನಾ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಪಾಡುವದು.ಸ್ಯಾನಿಟೈಸರ್ ಬಳಕೆ ಮತ್ತು ಖಡ್ಡಾಯವಾಗಿ ಮಾಸ್ಕ ಬಳಸುವ ಮೂಲಕ ಕರೋನಾ ಓಡಿಸಬಹುದು. ಹೆಲ್ಮಿಟ್ ಬಳಕೆ ಮಾಡಬೇಕು. ಕಾರ ಬೇಲ್ಟ್ ಧರಿಸಬೇಕು. ಮೋಬೈಲ ಬಳಕೆ ಮಾಡುತ್ತಾ ಬೈಕ್ ಓಡಿಸಬೇಡಿ ಎಂದು ಕುಲಗೋಡ ಪಿ ಎಸ್ ಐ ಎಚ್.ಕೆ ನರಳೆ ಹೇಳಿದರು. ಕಾರ್ಯಕ್ರಮದಲ್ಲಿ ಎ.ಎಸ್.ಐ ಬಿ.ವಾಯ್ ಅಂಬಿ. ವ್ಹಿ.ಆರ್. ಗಲಬಿ. ವ್ಹಿ.ಎಫ್ ಶೆಟ್ಟೆಪ್ಪನ್ನವರ. ಕುಲಗೋಡ ಬಸ್ ನಿಲ್ದಾಣ ನಿಯಂತ್ರನಾಧಿಕಾರಿ ಎ.ಬಿ ಜಮಾದಾರ ಹಾಗೂ ಪೊಲೀಸ್ ಸಿಬ್ಬಂದಿ ಗ್ರಾಮಸ್ಥರು ಇದ್ದರು.
