ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯರ ನುಡಿ
‘ನಿಸ್ವಾರ್ಥ ಸೇವೆಯು ಬದುಕಿನಲ್ಲಿ ಫಲ ನೀಡುತ್ತದೆ’
ಮೂಡಲಗಿ: ‘ಮನುಷ್ಯನು ತನ್ನ ಸ್ವಚ್ಛ ಮನಸ್ಸಿನಿಂದ ಮಾಡುವ ನಿಸ್ವಾರ್ಥ ಸೇವೆಯು ಬದುಕಿನಲ್ಲಿ ಎಂದಾದರು ಫಲ ನೀಡುತ್ತದೆ’ ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ ಗುರುವಾರ ಸದಾಶಿವ ಮಠದಲ್ಲಿ ಜರುಗಿದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ತಾನು ಮಾಡುವ ಸೇವೆಯ ಶ್ರದ್ಧೆ ಮತ್ತು ಪ್ರಾಮಾಣಿಕತೆಯು ಸಮಾಜದಲ್ಲಿ ಸರ್ವಕಾಲಿಕವಾಗಿ ಉಳಿಯುತ್ತದೆ ಎಂದರು.
ಅಧಿಕ ಮಾಸದಲ್ಲಿ ಒಂದು ತಿಂಗಳ ಪರ್ಯಂತರ ಕೋವಿಡ್ ಅರಿವು ಹಾಗೂ ಆದ್ಯಾತ್ಮಿಕ ಚಿಂತನವು ಯಶಸ್ಸಿಯಾಗಿದೆ. ಇದಕ್ಕೆ ಜನರ ಸಹಕಾರ, ಭಕ್ತಿ ಮುಖ್ಯ ಕಾರಣವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಮಾತನಾಡಿ ಮನೆ, ಮನೆಗೆ ತೆರಳಿ ಕೊವಿಡ್ ಅರಿವು ಅದರೊಂದಿಗೆ ಸಂಸ್ಕಾರ, ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಶ್ಲಾಘನೀಯ ಕಾರ್ಯವನ್ನು ಶ್ರೀಗಳು ಮಾಡಿದ್ದಾರೆ ಎಂದರು.
ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಮಾತನಾಡಿ ಒತ್ತಡಗಳಿಂದ ವಿಮುಕ್ತಿಯಾಗಲು ಆದ್ಯಾತ್ಮಿಕ ಚಿಂತನಗಳು ಅವಶ್ಯವಿದೆ. ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಕಾರ್ಯವನ್ನು ಗ್ರಾಮಗಳಲ್ಲಿ ಶ್ರೀಗಳು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದು ಬೇರೆಯವರಿಗೆ ಮಾದರಿಯಾಗಿದೆ ಎಂದರು.
ಪ್ರವಚನಕಾರ ಶರಣ ಲಕ್ಷ್ಮಣ ದೇವರು, ನಾಗನೂರಿನ ಕಾವ್ಯಶ್ರೀ ಅಮ್ಮನವರು, ಆನಂದರಾವ ನಾಯ್ಕ, ಹಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ ಮುರಗೋಡ ಮಾತನಾಡಿದರು.
ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪತ್ರಕರ್ತರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಿದರು.
ಅತಿಥಿಗಳಾಗಿ ಹಳ್ಳೂರಿನ ಹಣಮಂತ ತೇರದಾಳ, ಮೂಡಲಗಿಯ ಎಎಸ್‍ಐ ಮುರನಾಳ, ಮುನ್ಯಾಳ ಪಿಡಿಒ ಎಸ್.ಎಸ್. ರೊಡ್ಡನ್ನವರ, ಗ್ರಾಮ ಲೆಕ್ಕಾಧಿಕಾರಿ ಎಸ್.ಟಿ. ಕೊಟ್ಯಾಗೋಳ, ಅಂಗನವಾಡಿ ಮೇಲ್ವಿಚಾರಕಿ ಚಾಂದನಿ ಶಬ್ಬಿರ ಕುಡಚಿ, ಮುಖ್ಯಶಿಕ್ಷಕ ರಾಘವೇಂದ್ರ ಕುಲಕರ್ಣಿ, ಶಿವಪುತ್ರಯ್ಯ ಮಠಪತಿ, ಸಿದ್ರಾಮಯ್ಯ ಹಿರೇಮಠ ವೇದಿಕೆಯಲ್ಲಿದ್ದರು.
ಸಾಹಿತಿ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮದ ಯಶಸ್ಸಿ ಬಗ್ಗೆ ತಿಳಿಸಿದರು.
ಡಾ. ಬಸವರಾಜ ಚಿಪ್ಪಲಕಟ್ಟಿ, ರೆಹಮಾನ ನದಾಫ, ಲಕ್ಕಪ್ಪ ಹುಚ್ಚರಡ್ಡಿ, ರಮೇಶ ಪಾಟೀಲ, ವಿಠ್ಠಲ ಉರಬಿನವರ, ಗಿರಿಮಲ್ಲಪ್ಪ ಹುಕ್ಕೇರಿ, ಮಲ್ಲಯ್ಯ ಹಿರೇಮಠ, ಸಂಗಪ್ಪ ಸೂರಣ್ಣವರ, ಹಣಮಂತ ತಳವಾರ, ಮಹಾದೇವ ಬೆಳಗಲಿ ಮತ್ತಿತರರು ಇದ್ದರು.
ಪ್ರಾರಂಭದಲ್ಲಿ ಕಾರ್ತಿಕಶಾಸ್ತ್ರೀ, ವೀರಯ್ಯಶಾಸ್ತ್ರೀಗಳು ಮಂತ್ರಘೋಷ ಪಠಣ ಮಾಡಿದರು. ಐಶ್ವರ್ಯ ತಳವಾರ ಪ್ರಾರ್ಥಿಸಿದರು.
ಡಾ. ಕೆ.ಎಚ್. ನಾಗರಾಳ ನಿರೂಪಿಸಿದರು, ಹಣಮಂತ ಗೋಡಿಗೌಡರ ವಂದಿಸಿದರು.
