ಪಂಚಮಸಾಲಿ ಸಮಾಜದ ಭವಿಷ್ಯಕ್ಕಾಗಿ ಹೋರಾಡದೇ ಇದ್ದರೆ ಸರ್ಕಾರಗಳಿಗೆ ನಮ್ಮ ಕೂಗು ಕೇಳಿಸುವುದೇ ಇಲ್ಲ : ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ
ಅ.28ರಂದು ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗಾಗಿ ಬೆಳಗಾವಿ ಸುವರ್ಣ ಸೌಧದ ಎದುರು ನಡೆಯಲಿರುವ ಉಪವಾಸ ಸತ್ಯಾಗ್ರಹದ ಪೂರ್ವಭಾವಿ ಸಭೆ
ಮೂಡಲಗಿ : ಪಂಚಮಸಾಲಿ ಸಮಾಜದ ಭವಿಷ್ಯಕ್ಕಾಗಿ ಹಾಗೂ ಅಸ್ತಿತ್ವಕ್ಕಾಗಿ ಹೋರಾಡದೇ ಇದ್ದರೆ ಸರ್ಕಾರಗಳಿಗೆ ನಮ್ಮ ಕೂಗು ಕೇಳಿಸುವುದೇ ಇಲ್ಲ, ಆದರಿಂದ ಬೆಳಗಾವಿಯಲ್ಲಿ ನಡೆಯಲಿರುವ ಉಪವಾಸ ಸತ್ಯಗ್ರಹ ಸಂಕಲ್ಪದೊoದಿಗೆ 2ಎ ಮೀಸಲಾತಿ ಪಡೆಯಲು ಒತ್ತಾಯಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿರು.
ಪಟ್ಟಣದ ಮಹಾಲಕ್ಷ್ಮಿ ಅರ್ಬನ ಸೊಸಾಯಿಟಿಯ ಸಭಾಂಗಣದಲ್ಲಿ ಆಯೋಜಿಸಲಾದ ಬುದುವಾರ ಅ.28ರಂದು ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗಾಗಿ ಬೆಳಗಾವಿ ಸುವರ್ಣ ಸೌಧದ ಎದುರು ನಡೆಯಲಿರುವ ಉಪವಾಸ ಸತ್ಯಾಗ್ರಹದ ಪೂರ್ವಭಾವಿ ಸಭೆಯ ಉದ್ದೇಶಿಸಿ ಮಾತನಾಡಿ, ಕರ್ನಾಟಕದ ಬಹುಸಂಖ್ಯಾತ ಸಮುದಾಗಳಲ್ಲಿಯೇ ಲಿಂಗಾಯತ ಪಂಚಮಸಾಲಿ ಸಮಾಜವು ಅಗ್ರಗಣ್ಯವಾಗಿದೆ. ಕೃಷಿಕಾರ್ಮಿಕ ಸಿರತ, ದಾಸೋಹ ರೂಪಿತ, ಧರ್ಮ ಸಹಿತ, ಬೇಧರಹಿತ ಹಾಗೂ ರಾಷ್ಟ ಭಕ್ತಿ ಸಂಕಲ್ಪಿತವಾದ ಸಮಾಜವೇ ಪಂಚಮಸಾಲಿ ಸಮಾಜವಾಗಿದೆ, ಈಗಾಗಲೇ ಸರ್ಕಾರವು ಅನೇಕ ನಮ್ಮ ಸಹೋದರ ಸಮಾಜಗಳಿಗೆ 2ಎ ಮೀಸಲಾತಿಯನ್ನು ನೀಡಿದ್ದಾರೆ, ಆದರೆ ಇದುವರೆಗೂ ಸರ್ಕಾರದ ಯಾವುದೇ ಸೌಲಭ್ಯ ಹಾಗೂ ಸವಲತ್ತುಗಳು ಪಡೆಯದೇ ಪಂಚಮಸಾಲಿ ಸಮಾಜ ವಂಚಿತಗೊoಡಿದೆ ಎಂದರು.
ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯರಿಗೆ 2ಎ ಮೀಸಲಾತಿ ಒದಗಿಸುವಂತೆ ಒತ್ತಾಯಿಸಿತು, 2003ರಲ್ಲಿ ಕೇಂದ್ರ ಸಚಿವರಾಗಿದ ಬಸವನಗೌಡ ಪಾಟೀಲ್ ಯತ್ನಾಳ ನೇತೃತ್ವದ ನಿಯೋಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯರಿಗೆ ಮೀಸಲಾತಿಗೆ ಮನವಿ ಮಾಡಿತು, ಅಂದಿನಿoದ ಇಂದಿನವರೆಗೂ ಎಲ್ಲಾ ಸರ್ಕಾರಗಳಿಗೆ ಮನವಿ ಕೊಟ್ಟರು ನಮ್ಮ ಮನವಿಗೆ ಇದುವರೆಗೂ ನಿರೀಕ್ಷಿತ ಫಲ ದೊರೆಯಲಿಲ್ಲ ಎಂದರು.
ಪಂಚಮಸಾಲಿ ಸಮಾಜದ ಹೋರಾಟ ಸಮೀತಿಯ ಸಂಚಾಲಕ ಎಫ್ ಸಿ ಸಿದ್ದನಗೌಡ ಮಾತನಾಡಿ, ಉಪವಾಸ ಸತ್ಯಗ್ರಹದಲ್ಲಿ ಹಾಲಿ ಮಾಜಿ ಸಚಿವರು, ಸಂಸದರು, ಶಾಸಕರು, ಎಲ್ಲಾ ಚುನಾಯಿತ ಜನಪ್ರತಿನಿಧಿಗಳು, ಯುವಕರು, ರೈತರು, ಮಹಿಳೆಯರು, ವಿವಿಧ ರಾಷ್ಟ್ರೀಯ, ರಾಜ್ಯ, ಜಿಲ್ಲಾ, ತಾಲೂಕಿನ ಎಲ್ಲ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು.
ಸಭೆಯಲ್ಲಿ ಪಂಚಮಸಾಲಿ ಸಂಘದ ತಾಲೂಕಾ ಅಧ್ಯಕ್ಷ ಬಸವರಾಜ ಪಾಟೀಲ, ಬಸಪ್ರಭು ನಿಡಗುಂದಿ, ಶಿವನಗೌಡ ಪಾಟೀಲ ದುಂಡಪ್ಪ ಖಾನಟ್ಟಿ, ಪರಪ್ಪ ಮುನ್ಯಾಳ, ಸಂತೋಷ ಪಾರ್ಶಿ, ಮುತ್ತಪ್ಪ ಮಾಲಗಾರ, ಅಜಪ್ಪ ಬಳಿಗಾರ, ಶಿವಾನಂದ ಸಸಾಲಟ್ಟಿ, ಸುಭಾಷ ಬೆಳಕ್ಕಿ, ಸುರೇಶ ಡಬ್ಬನ್ನವರ, ಶಿಲ್ಪಾ ಗೋಡಿಗೌಡರ, ಹೊಳೆಪ್ಪ ಶಿವಾಪೂರ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪ್ರೋ.ಸಂಗಮೇಶ ಗುಜಗೊಂಡ ಪ್ರಾಸ್ತವಿಕವಾಗಿ ಮಾತನಾಡಿದರು. ಸಿ.ಎಂ ಹಂಜಿ ಸ್ವಾಗತಿಸಿದರು, ಬಸವರಾಜ ಸಸಾಲಟ್ಟಿ ನಿರೂಪಿಸಿದರು, ಪಿರೋಜಿ ಪ್ರಾಥಿಸಿದರು, ರೇವಪ್ಪ ಕೋರಿಶೆಟ್ಟಿ ವಂದಿಸಿದರು.