ಹೊಸಟ್ಟಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿ ಉದ್ಘಾಟನೆ
ಮೂಡಲಗಿ: ಸಮಾಜ ಏಳ್ಗೆಯಾಗಬೇಕಾದರೆ ಶಿಕ್ಷಣ ಅಗತ್ಯ ಆದರಿಂದ ಸಮಾಜದ ಬಾಂದವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಮಕ್ಕಳನೇ ಆಸ್ತಿಯನ್ನಾಗಿಸಿಕೊಳ್ಳಿ ಎಂದು ಕವಲಗುಡ್ಡ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.
ಅವರು ತಾಲೂಕಿನ ಹೊಸಟ್ಟಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿ ಉದ್ಘಾಟನೆ ಸಮಾರಂಭ ಸಾನಿಧ್ಯ ವಹಿಸಿ ಮಾತನಾಡಿ, ಸಂಗೋಳಿರಾಯಣ್ಣ ದೇಶದ ಸ್ವತಂತ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಸೇನಾನಿಯ ಆದರ್ಶ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಎಲ್ಲೂರೊಂದಿಗೆ ಅವಿನಾಭಾವ ಸಂಭದಿoದ ಬಾಳಬೇಕೆಂದರು.
ಸಮಾಜದ ಭಾಂಧವರು ಆಡಂಬರ ಜೀವನಕ್ಕೆ ಮೊರೆಹೊಗದೆ ಸಮಾಜಮುಖಿ ಕಾರ್ಯಗಳನ್ನು ಕೈಗೆತಿಕೊಳ್ಳುವ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ತಮ್ಮ ತಮ್ಮ ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸಲ್ಲು ಪ್ರತಿಯೊಬ್ಬರು ಶ್ರಮೀಶಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಾಜ್ಯ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ರಾಯಣ್ಣ ಒಂದು ಜಾತಿಗೆ ಸೀಮಿತವಲ್ಲ ದೇಶದ ಐಕ್ಯತೆಯ ಸಂಕೇತ, ಕಾಗಿನೇಲೆ ಕನಕ ಗುರುಪೀಠ ಸ್ಥಾಪನೆಯ ನಂತರ ನಮ್ಮ ಸಮಾಜ ಬೆಳವಣಿಗೆ ಹೊಂದುತ್ತಾ ಬರುತ್ತಿದಾದ್ದರು ಸಮಾಜ ಇನ್ನೂ ಸಮಾಜಿಕ, ಶೈಕ್ಷಣಿ, ಆರ್ಥಿಕವಾಗಿ ಸದೃಢವಾಗಬೇಕೆದ್ದರೆ ಸಂಘಟಯಾಗುವುದು ಬಹಳ ಮುಖ್ಯವಾಗಿದೆ ಎಂದರು.
ದುರ್ಗಾದೇವಿ ದೇವಸ್ಥಾನದಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸುಮಂಗಲಿಯರ ಕುಂಭ ಮೇಳ, ಡೊಳ್ಳು ಕುಣಿತ, ಕೈಪಟ್ಟ ವಾದ್ಯಗಳೊಂದಿಗೆ ಮೆರವಣಿಗೆಯೊಂದಿಗೆ ಮೂರ್ತಿ ಮೆರವಣಿಗೆ ಮೂರ್ತಿ ಪ್ರತಿಷ್ಠಾಪನಾ ಸ್ಥಳದವರಿಗೆ ಜರುಗಿತು
ಕಾರ್ಯಕ್ರಮದಲ್ಲಿ ಹಂದಿಗುoದದ ಶ್ರೀ ಶ್ರೀಮಂತ ಮಹಾರಾಜರು, ಶಿವಾನಂದ ಹಿರೇಮಠ ಶ್ರೀಗಳು, ಅಳಬಾಳದ ಶ್ರೀ ಅಮಸಿದ್ಧ ಮಹಾರಾಜರು, ಲಕ್ಷ್ಮಣ ಮಸಗುಪ್ಪಿ, ವಿನಾಯಕ ಕಟ್ಟಿಕಾರ, ಡಾ: ಎಸ್.ಎಸ್. ಪಾಟೀಲ, ಅರ್ಜುನ ಜಿಡಿಮನ್ನಿ, ಬಸು ಸಾರಾಪುರ, ವಿಜಯ ಜಂಬಗಿ, ಮಾರುತಿ ಮರಡಿ, ವೀರಣ್ಣ ಮೋಡಿ, ಮಂಜುನಾಥ ಸಣ್ಣಕ್ಕಿ, ಸಿದ್ದಣ್ಣ ದುರದುಂಡಿ, ಭೀಮಶಿ ಕಾದರಗಿ, ರಾಯಪ್ಪ ಬಾನಸಿ, ಸದಾಶಿವ ನಾಯಿಕ, ಮಲ್ಲಪ್ಪ ಕಬ್ಬುರ, ರಮೇಶ ನಾಯ್ಕಿ, ಕಲ್ಲಪ್ಪ ದೊಡ್ಡಶಿನವರ, ವಸಂತ ಪಾಟೀಲ, ವಿನೋಧ ದೊಡ್ಡಶಿನವರ, ಮಲ್ಲಪ್ಪ ನಾಯ್ಕಿ, ಬಸಪ್ಪ ಕುಬನ್ನವರ, ಭೀಮಶೀಪ್ಪ ನಾಯ್ಕಿ, ಲಗಮನ ಪಾಟೀಲ, ಯಲ್ಲಪ್ಪ ಕಂಬಳಿ, ಅಜ್ಜಪ್ಪ ಪೂಜೇರಿ, ಕಲ್ಲಗೌಡ ಕಿಲ್ಲಾರಿ, ಪ್ರಕಾಶ ಪಾಟೀಲ ಮತ್ತಿತರು ಇದ್ದರು. ಭೀಮರಾವ್ ಘಂಟಿ ಸ್ವಾಗತಿಸಿ ನಿರೂಪಿಸಿದರು, ಸಿ.ಎಸ್.ಪಾಟೀಲ ವಂದಿಸಿದರು