Breaking News
Home / Recent Posts / ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಪ್ರವಾದಿ ಮಹ್ಮದ ಪೈಗಂಬರು

ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಪ್ರವಾದಿ ಮಹ್ಮದ ಪೈಗಂಬರು

Spread the love

ಮೂಡಲಗಿ: ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಪ್ರವಾದಿ ಮಹ್ಮದ ಪೈಗಂಬರ ಅವರ ಹೋರಾಟದ ವಿಧಾನ,ಪ್ರಗತಿಯ ತಂತ್ರ,ಮನುಕುಲದ ಶ್ರೇಯಸ್ಸು ಬಯಸುವ ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಧರ್ಮ ಗುರು ಮೌಲಾನಾ ಮೊಹ್ಮದ ಶಫೀಕ ಆಜ್ಮಿ ಹೇಳಿದರು
ಶುಕ್ರವಾರ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಮಹ್ಮದ ಪೈಗಂಬರ ಜಯಂತಿ ನಿಮಿತ್ತ ಹಾಗೂ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗಾಗಿ ಸೇರಿದ ಸಮಾಜ ಬಾಂಧವರನನ್ನುದ್ದೇಶಿಸಿ ಮಾತನಾಡಿದ ಅವರು ಮನು ಕುಲಕ್ಕೆ ಮಾರಕವಾಗಿ ಪರಿಣಮಿಸಿದ ಕೊರೋನಾ ವೈರಸ್‍ನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಸರಕಾರ ಪ್ರಯತ್ನಿಸುತ್ತಿದ್ದು ಸರಕಾರದ ಮಾರ್ಗಸೂಚಿಯನ್ನು ನಾವೆಲ್ಲ ಅನುಸರಿಸಿ ಈ ಬಾರಿ ಪ್ರವಾದಿ ಮಹ್ಮದ ಪೈಗಂಬರ ಜಯಂತಿಯನ್ನು ಸರಳ ರೀತಿಯಲ್ಲಿ ತಮ್ಮ ಮನೆಗಳಲ್ಲಿ ಆಚರಿಸಿ ಅವರ ತತ್ವಾದರ್ಶಗಳನ್ನು ಪಾಲಿಸುವಂತೆ ಸಲಹೆ ನೀಡಿದರು
ಮೌಲಾನಾ ಕೌಸರ ರಜಾ ಮಹ್ಮದ ಪೈಗಂಬರ ಕುರಿತು ಪ್ರವಚನ ನೀಡಿದರು. ಮೌಲಾನಾ ನಿಜಾಮುದ್ದಿನ ಮಂತ್ರಪಠಣ ಮಾಡಿದರು.ನಂತರ ಅನ್ನ ಸಂತರ್ಪನೆ ಜರುಗಿತು.
ಈ ಸಂದರ್ಭದಲ್ಲಿ ಕೌಜಲಗಿ ಕಾಂಗ್ರೇಸ ಮುಖಂಡ ಅರವಿಂದ ದಳವಾಯಿ ಬೆಟ್ಟಿ ನೀಡಿ ಬಾಂಧವರಿಗೆ ಶುಭಾಶಯ ಕೋರಿದರು.
ಬಿ.ಟಿ.ಟಿ.ಕಮಿಟಿ ಅದ್ಯಕ್ಷ ಶರೀಪ ಪಟೇಲ್, ಉಪಾದ್ಯಕ್ಷ ಮಲಿಕ ಕಳ್ಳಿಮನಿ,ಮೌಲಾನಾ ಅಮೀರ ಥರಥರಿ, ಸಲಿಮ ಇನಾಮದಾರ, ಯೂನುಸು ಹವಾಲ್ದಾರ, ಹುಸೇನ ಥರಥರಿ, ಇಮಾಮಹುಸೇನ ಮುಲ್ಲಾ, ಬಾಷಾ ಲಾಡಖಾನ, ಡಾ:ಅಲ್ಲಾನೂರ ಬಾಗವಾನ,ಆದಮಸಾಬ ತಾಂಬೋಳಿ,ಇಬ್ರಾಹಿಂ ಅತ್ತಾರ, ಮೀರಾಸಾಬ ಝಾರೆ,
ಹಾಜಿ ಹಸನಸಾಬ ಮುಗುಟಖಾನ, ರಫೀಕ್ ಕಡಗಾಂವಕರ, ದಸ್ತಗೀರಸಾಬ ಲಾಡಖಾನ, ಇಮಾಮಹುಸೇನ ತಾಂಬೋಳಿ, ಅಬ್ದುಲ್ ರೇಹಮಾನ ತಾಂಬೋಳಿ ಮತ್ತು ಸುನ್ನಿ ಯಂಗ್ ಕಮಿಟಿ ಸರ್ವ ಸದಸ್ಯರು ಹಾಗೂ ಅನೇಕ ಗಣ್ಯರು ಇದ್ದರು


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ