Breaking News
Home / Recent Posts / ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಗೋಕಾವಿ ನೆಲದ ವೈಭವವನ್ನು ಎತ್ತಿಹಿಡಿದಿದೆ – ನಾಗಪ್ಪ ಶೇಖರಗೋಳ

ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಗೋಕಾವಿ ನೆಲದ ವೈಭವವನ್ನು ಎತ್ತಿಹಿಡಿದಿದೆ – ನಾಗಪ್ಪ ಶೇಖರಗೋಳ

Spread the love

ಮೂಡಲಗಿ : ಬಯಲಾಟ ಕಲಾವಿದೆ ಕೆಂಪವ್ವಾ ಹರಿಜನ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಗೋಕಾವಿ ನೆಲದ ವೈಭವವನ್ನು ಎತ್ತಿಹಿಡಿದಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು.
ಶುಕ್ರವಾರ ಸಂಜೆ ತಾಲೂಕಿನ ಅರಭಾವಿ ಪಟ್ಟಣದ ಬಯಲಾಟ ಕಲಾವಿದೆ ಕೆಂಪವ್ವಾ ಹರಿಜನ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ ಶಾಸಕರ ಪರವಾಗಿ ಸತ್ಕರಿಸಿ ಅವರು ಮಾತನಾಡಿದರು.
ಕಳೆದ ಮೂರ್ನಾಲ್ಕು ದಶಕಗಳಿಂದ ಕೆಂಪವ್ವಾ ಸಣ್ಣಾಟ ಬಯಲಾಟ ಕಲಾವಿದೆಯಾಗಿ ನಾಡಿನ ಮೂಲೆ-ಮೂಲೆಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ನೆರೆಯ ಮಹಾರಾಷ್ಟ್ರದಲ್ಲಿಯೂ ತಮ್ಮ ಕಲಾ ಪ್ರತಿಭೆಯನ್ನು ಸಾದರಪಡಿಸಿದ್ದಾರೆ. ಇಂತಹ ಕಲಾವಿದೆಗೆ ಕರ್ನಾಟಕ ಸರಕಾರ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ನಮ್ಮ ನೆಲಕ್ಕೆ ಹೆಮ್ಮೆಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾಗಪ್ಪ ಶೇಖರಗೋಳ ಅವರು ಕೆಂಪವ್ವಾ ಹರಿಜನ ಅವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಸತ್ಕರಿಸಿದರು. ಜೊತೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀಡಿದ 25 ಸಾವಿರ ರೂ.ಗಳ ನಗದನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಲಲಿತಾ ಕಲಾ ಅಕ್ಯಾಡೆಮಿ ಸದಸ್ಯ ಜಯಾನಂದ ಮಾದರ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ಲಕ್ಕಪ್ಪ ಲೋಕುರಿ, ಅರಭಾವಿ ಪಟ್ಟಣ ಪಂಚಾಯತ ಸದಸ್ಯರಾದ ರಮೇಶ ಮಾದರ, ಕುಮಾರ ಪೂಜೇರಿ, ಕಲಾವಿದೆ ಲಕ್ಷ್ಮೀ ಹರಿಜನ, ಸಂಜು ಮಾದರ, ಫಕೀರಪ್ಪ ಹರಿಜನ, ಅಬ್ದುಲ ಮಿರ್ಜಾನಾಯ್ಕ, ಮುಂತಾದವರು ಉಪಸ್ಥಿತರಿದ್ದರು.


ಸಂಗ್ಯಾ-ಬಾಳ್ಯಾ ಸಣ್ಣಾಟದ ಕಲಾವಿದೆಯಾಗಿರುವ ಕೆಂಪವ್ವಾ ಹರಿಜನ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಸಂತಸವಾಗಿದೆ. ಅದರಲ್ಲೂ ನಮ್ಮ ಕ್ಷೇತ್ರದವರೂ ಎಂಬ ಹೆಮ್ಮೆ ನಮಗಿದೆ. ಕಳೆದ 40 ವರ್ಷಗಳಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅವರ ಕಲಾ ಪ್ರತಿಭೆಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಕೆಂಪವ್ವಾ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿರುವುದು ಅವರ ಕಲಾ ಪ್ರತಿಭೆಗೆ ಸಾಕ್ಷಿಯಾದಂತಾಗಿದೆ.
ಬಾಲಚಂದ್ರ ಜಾರಕಿಹೊಳಿ, ಅಧ್ಯಕ್ಷರು, ಕೆಎಂಎಫ್ ಮತ್ತು ಶಾಸಕರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ