Breaking News
Home / Recent Posts / ಕುಲಗೋಡ ಪೋಲಿಸರಿಂದ ರಾಷ್ಟ್ರೀಯ ಏಕತಾ ದಿನ ಆಚರಣೆ ಹಾಗೂ 5 ಕಿಮೀ ಏಕತಾ ಓಟ, ವಿಚಾರ ಸಂಕೀರ್ಣ

ಕುಲಗೋಡ ಪೋಲಿಸರಿಂದ ರಾಷ್ಟ್ರೀಯ ಏಕತಾ ದಿನ ಆಚರಣೆ ಹಾಗೂ 5 ಕಿಮೀ ಏಕತಾ ಓಟ, ವಿಚಾರ ಸಂಕೀರ್ಣ

Spread the love

ಕುಲಗೋಡ ಪೋಲಿಸರಿಂದ ರಾಷ್ಟ್ರೀಯ ಏಕತಾ ದಿನ ಆಚರಣೆ ಹಾಗೂ 5 ಕಿಮೀ ಏಕತಾ ಓಟ, ವಿಚಾರ ಸಂಕೀರ್ಣ

 ಕುಲಗೋಡ; ಯುವಕರು ದೇಶದ ಏಕತೆಗೆ ಶ್ರಮಿಸಿದರೆ ಭಾರತ ಸುಭದ್ರವಾಗಿರುತ್ತದೆ. ಹಲವು ಭಾಷೆ-ಸಂಸ್ಕøತಿಗಳನ್ನು ಹೊಂದಿದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ವಿಶ್ವದ ಗುರುವಾಗಲಿ ಎಂದು ಬೆಟಗೇರಿ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ರಮೇಶ ಅಳಗುಂಡಿ ಅಭಿಪ್ರಾಯಿಸಿದರು.

ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಮುಂಜಾನೆ ಕುಲಗೋಡ ಪೋಲಿಸ್ ಠಾಣೆಯ ವತಿಯಿಂದ ಜರುಗಿದ ರಾಷ್ಟ್ರೀಯ ಏಕತೆ ಮತ್ತು ಭದ್ರತೆ ವಿಷಯ ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿ, ದೇಶದ ರಕ್ಷಣೆಗಾಗಿ ಸೈನಿಕರು ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶದ ಒಳಗಡೆ ಪೋಲಿಸರು ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಏಕತೆ ಮತ್ತು ಭದ್ರತೆಯ ಹಿನ್ನೆಲೆಯಲ್ಲಿ ಪೋಲಿಸರ ಸೇವೆ ಅನನ್ಯವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಏಕತೆ ಕುರಿತು ಮಾತನಾಡಿದ ಇನ್ನೊರ್ವ ಪ್ರಬಂಧಕಾರ ಡಾ.ರಾಜು ಕಂಬಾರ, ಸರದಾರ್ ವಲ್ಲಭಾಯಿ ಪಟೇಲ ಅವರ ಜನ್ಮ ದಿನಾಚರಣೆಯನ್ನು ಕಳೆದ 6 ವರ್ಷಗಳಿಂದ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಸ್ವಾತಂತ್ರ್ಯಾನಂತರದ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಸುಮಾರು 565 ಸಂಸ್ಥಾನಗಳನ್ನು ವಿಲೀನಗೊಳಿಸಲು ಪಟೇಲ ಅವರು ತುಂಬಾ ಶ್ರಮವಹಿಸಿದ್ದಾರೆ. ಹಿಂದೆ ಉಳಿದ 3 ಸಂಸ್ಥಾನಗಳಲ್ಲಿ ಜುಘವಾಡ, ಹೈದರಾಬಾದ ನವಾಬರ ಸಂಸ್ಥಾನಗಳನ್ನು ತಮ್ಮ ದೃಢ ನಿಲುವಿನ ಮೂಲಕ ವಿಲೀನಗೊಳಿಸಿ ರಾಷ್ಟ್ರದಲ್ಲಿ ಏಕತೆಯನ್ನು ಸಾಧಿಸಲು ಪ್ರಯತ್ನಿಸಿದ ವಲ್ಲಭಬಾಯಿ ಪಟೇಲ್ ಕೇವಲ ಉಕ್ಕಿನ ಮನುಷ್ಯನಷ್ಟೇ ಅಲ್ಲ ಸ್ವತಂತ್ರ ಭಾರತದ ಬಂಗಾರದ ಮನುಷ್ಯನಾಗಿದ್ದನೆಂದು ಹೇಳಿದರು. ಜ್ಞಾನಜ್ಯೋತಿ ಪ್ರೌಢಶಾಲೆಯ ಚೇರಮನ್ ಶಿವಾನಂದ ಲೋಕನ್ನವರ, ಸರದಾರ ವಲಭಬಾಯಿ ಪಟೇಲ ಕುರಿತು ಮಾತನಾಡಿದರು.


ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಕುಲಗೋಡ ಗ್ರಾಮದಿಂದ ಕೌಜಲಗಿಯವರೆಗೆ ಸುಮಾರು 5 ಕಿ.ಮೀ. ವರೆಗೆ, ಇಲ್ಲಿಯ ಪೋಲಿಸ್ ಸಿಬ್ಬಂದಿ ಪಿ.ಎಸ್.ಯ. ಎಚ್.ಕೆ. ನೇರಳೆ ಅವರ ನೇತೃತ್ವದಲ್ಲಿ ಏಕತಾ ಓಟ ನಡೆಯಿತು. ಕಾರ್ಯಕ್ರಮದಲ್ಲಿ ಕುಲಗೋಡ ಪೋಲಿಸ್ ಠಾಣೆಯ ಸಿಬ್ಬಂದಿ ವರ್ಗ, ಸಂಕಲ್ಪ ಪೌಂಡೇಷನ್ ಸರ್ವ ಸದಸ್ಯರು, ಶ್ರೀರಾಮ ಸ್ಪೋಟ್ರ್ಸ್ ಕ್ಲಬ್, ಯುವಕರು ಏಕತಾ ಓಟದಲ್ಲಿ ಪಾಲ್ಗೊಂಡಿದ್ದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಂ.ಕೆ.ಹಾದಿಮನಿ ವಹಿಸಿದ್ದರು. ಮುಖಂಡರಾದ ಶಿವಾನಂದ ಲೋಕನ್ನವರ, ರವಿ ಪರುಶೆಟ್ಟಿ, ಮಹಾದೇವ ಬುದ್ನಿ, ಅಶೋಕ ಹೊಸಮನಿ, ಅಲ್ಲಾಬಕ್ಷ ಹುನ್ನೂರ, ಚೇತನ ಯಕ್ಷಂಬಿ, ಬಸು ಮಲಕನ್ನವರ, ಮಲ್ಲಪ್ಪ ಗೋಕಾವಿ, ಶಂಕರ ಹಾದಿಮನಿ. ಎ.ಎಂ.ಮೋಡಿ, ಜಕೀರ ಜಮಾದಾರ ಹಾಗೂ ಕುಲಗೋಡ ಠಾಣೆಯ ಸಿಬ್ಬಂದಿ. ಕುಲಗೋಡ, ಕೌಜಲಗಿ ಯುವಕರು ಗ್ರಾಮಸ್ಥರು ಮುಂತಾದವರಿದ್ದರು.
ಪತ್ರಕರ್ತ ಶಂಕರ ಹಾದಿಮನಿ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಕೋಟಿ ನಿರೂಪಿಸಿದರು. ಕುಲಗೋಡ ಪಿ.ಎಸ್.ಐ. ಎಚ್.ಕೆ.ನೇರಳೆ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ