ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು
ಮೂಡಲಗಿ: ಕನ್ನಡದ ಉಳಿವಿಗೆ ಕನ್ನಡಿಗರು ಪ್ರತಿ ದಿನದ ವ್ಯವಹಾರ, ವ್ಯಾಪರ ಇತರೆ ಚಟುವಟಿಕೆಗಳಲ್ಲಿ ಕನ್ನಡವನ್ನೆ ಬಳಸಬೇಕು ಅನಿವಾರ್ಯ ಇದ್ದರೆ ಮಾತ್ರ ಇತರ ಭಾಷೆ ಬಳಸಬಹುದು. ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು ಎಂದು ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಸಂಸ್ಥಾಪಕ ಲಕ್ಷ್ಮಣ ವಾಯ್. ಅಡಿಹುಡಿ ಹೇಳಿದರು.
ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಪ್ರತಿ ಮಕ್ಕಳಲ್ಲು ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಅಭಿಮಾನ ಮೂಡಿಸಬೇಕು ಕನ್ನಡ ಭಾಷೆಯನ್ನು ಉಳಿಸಲು ಸಾಹಿತ್ಯ ಅಧ್ಯಯನ, ಸಂಶೋಧನೆಯ ಅಭಿರುಚಿಗಳನ್ನು ವಿದ್ಯಾರ್ಥಿ ದೆಶೆಯಿಂದಲೆ ಬೆಳೆಸಲು ಅನುಕೂಲವಾಗುವಂತೆ ಪಠ್ಯಕ್ರಮ ರಚಿಸಬೇಕು ಎಂದರು.
ಪ್ರತಿಯೊಂದು ಮನೆಯಲ್ಲಿ ಕನ್ನಡ ಪತ್ರಿಕೆಯೊಂದನ್ನು ಕಡ್ಡಾಯವಾಗಿ ತರಸಬೇಕು, ಶಾಲಾ ಅಂಗಳದಲ್ಲಿ ಮಕ್ಕಳು ಕನ್ನಡ ಮಾತನಾಡುವುದನ್ನು ಅದ್ಯಾಪಕರು ಪ್ರೋತ್ಸಾಹಿಸಬೇಕು. ಕನ್ನಡ ಅಕ್ಷರಮಾಲೆಯನ್ನು ಮಕ್ಕಳಿಗೆ ಕಲಿಸಬೇಕು, ತಾಯಂದಿರು ಮಕ್ಕಳನ್ನು ಕನ್ನಡದಲ್ಲಿ ಮುದ್ದಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಶಿಧರ ಆರಾದ್ಯ, ಮಂಜುನಾಥ ಕುಂಬಾರ, ಸಿದ್ರಾಮ ಡೊಳ್ಳಿ, ಮಹಾಂತೇಶ ಕೊಟಬಾಗಿ, ರಾಘು ಗಂಗನ್ನವರ, ರಾಮಣ್ಣ ಮಂಟೂರ, ಪರಶುರಾಮ ಕೊಡಗನೂರ, ಹಾಗೂ ಮಂಜುನಾಥ ಶಿಕ್ಷಣ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.