Breaking News
Home / Recent Posts / ಬಸವ ಸೇವಾ ಯುವಕ ಸಂಘದಿಂದ ಪತ್ರಿಭಟನೆ , ದುಷ್ಕರ್ಮಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಮನವಿ, ಬಸವೇಶ್ವರ ಮೂರ್ತಿ ಭಗ್ನ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ಬಸವ ಸೇವಾ ಯುವಕ ಸಂಘದಿಂದ ಪತ್ರಿಭಟನೆ , ದುಷ್ಕರ್ಮಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಮನವಿ, ಬಸವೇಶ್ವರ ಮೂರ್ತಿ ಭಗ್ನ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

Spread the love

ಬಸವ ಸೇವಾ ಯುವಕ ಸಂಘದಿಂದ ಪತ್ರಿಭಟನೆ | ದುಷ್ಕರ್ಮಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಮನವಿ
ಬಸವೇಶ್ವರ ಮೂರ್ತಿ ಭಗ್ನ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ
ಮೂಡಲಗಿ : ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಪ್ರತಿಷ್ಠಾಪಣೆ ಮಾಡಿದ ಬಸವೇಶ್ವರ ಮೂರ್ತಿಯ ಎಡಗೈಯನ್ನು ಮುರಿದ ಘಟನೆ ಖಂಡಿಸಿ ಬುಧುವಾರದಂದು ಶ್ರೀ ಬಸವ ಸೇವಾ ಯುವಕ ಸಂಘದಿಂದ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕಿಡಿಗೇಡಿಗಳ ವಿರುದ್ದ ಪ್ರತಿಭಟಿಸಿ, ಸ್ಥಳೀಯ ತಹಶೀಲ್ದಾರ ಮೂಲಕ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಬೆಗಾವಿ ಎಸ್.ಪಿಯವರಿಗೆ ಮನವಿ ಸಲ್ಲಿಸಿದರು.
ಈ ವೇಳೆಯಲ್ಲಿ ನಿಂಗಪ್ಪ ಪಿರೋಜಿ ಮಾತನಾಡಿ, ಗ್ರಾಮಗಳಲ್ಲಿಶಾಂತಿ ಕದಡಲು ಕೆಲ ಸಮಾಜಘಾತಕ ವ್ಯಕ್ತಿಗಳು ಇಂತಹ ಕೃತ್ಯವೆಸಗಿದ್ದಾರೆ. ಅಪರಾಧಿಗಳು ಎಷ್ಟೇ ಬಲಿಷ್ಠವಾಗಿದ್ದರೂ ಸೂಕ್ತ ತನಿಖೆ ಮಾಡಿ ಒಂದು ವಾರದಲ್ಲಿ ಬಂಧಿಸಿ ಶಿಕ್ಷೆಗೆ ಗುರಿಪಡಿಸಿ ಇಲ್ಲವಾದರೇ ಮುಂದೇ ಉಗ್ರ ಹೋರಾಟ ಮಾಡಲಾಗುವುದು ಎಂದರು.
ರೇವಪ್ಪ ಕೋರಿಶೆಟ್ಟಿ ಮಾತನಾಡಿ, ಹೊರ ದೇಶದಲ್ಲಿ ಕೂಡಾ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅವರ ಚಿಂತನೆಗಳಿಗೆ ಜನ ತಲೆಬಾಗುತ್ತಾರೆ ಆದರೆ ಅಂತಹ ಪುಣ್ಯಾತ್ಮರು ನಡೆದಾಡಿದ ನಾಡಲ್ಲಿ ಅವರ ಮೂರ್ತಿಗೆ ಹಾನಿ ಮಾಡಿದ್ದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.
ಬಸವ ಸೇವಾ ಯುವಕ ಸಂಘದ ಅಧ್ಯಕ್ಷ ಕಲ್ಮೇಶ ಗೋಕಾಕ ಮಾತನಾಡಿ, ವಿಶ್ವಗುರು ಬಸವಣ್ಣನವರ ಮೂರ್ತಿಗೆ ದುಷ್ಕರ್ಮಿಗಳು ಭಗ್ನಗೊಳಿಸಿ ಅಪಚಾರವೆಸಗಿದ್ದಾರೆ, ಇಡೀ ಮನುಕಲಕ್ಕೆ ಸಮಾನತೆಯ ತತ್ವವನ್ನು ಸಾರಿದ ವಿಶ್ವಗುರು ಬಸವಣ್ಣನವರ ಮೂರ್ತಿಗೆ ಅವಮಾನಿಸುವ ಘಟನೆ ಇಡೀ ಮನುಕುಲಕ್ಕೆ ಮಾಡಿದ ಅವಮಾನವಾಗಿದೆ. ರಾಜ್ಯದಲ್ಲಿ ಮೇಲಿಂದ ಮೇಲೆ ಮಹಾನ್ ನಾಯಕ್ರ ಪುತ್ತಳಿಗಳಿಗೆ ಅವಮಾನ ಮಾಡುವ ಪ್ರಕರಣಗಳು ಹೆಚ್ಚುತ್ತಿದೆ ಇದರಿಂದ ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ ಎಂದರು.
ಪ್ರಕಾಶ ಮಾದರ ಮಾತನಾಡಿ, ಇವ ನಮ್ಮವ, ಇವ ನಮ್ಮವ ಎಂದು ಜಗದ ಜನರೆಲ್ಲರನ್ನು ಅಪ್ಪಿಕೊಂಡು ಜಾತಿ, ವರ್ಗ, ಲಿಂಗ, ವರ್ಣ ಭೇದಗಳನ್ನು ಅಳಿಸಿ, ಸರ್ವರಿಗೂ ಲೇಸನ್ನೇ ಬಯಸಿದ್ದ ಯುಗಪುರುಷ ಬಸವಣ್ಣನವರಿಗೆ ಈ ರೀತಿ ಅವಮಾನಿಸಿದ್ದು ಖಂಡನೀಯ. ಕೂಡಲೇ ದುಷ್ಕರ್ಮಿಗನ್ನು ಬಂಧಿಸಿ ಉಗ್ರ ಶಿಕ್ಷಗೆ ಒಳಪಡಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಕ್ರಮಕೈಗೊಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಪಂಚಮಸಾಲಿ ಸಮಾಜದ ಮೂಡಲಗಿ ತಾಲೂಕಾಧ್ಯಕ್ಷ ಬಸವರಾಜ ಪಾಟೀಲ, ಶಿವಲಿಂಗಪ್ಪ ಗೋಕಾಕ, ಬಸವರಾಜ ಕುರಬಗಟ್ಟಿ, ಶಿವಬಸು ಸುಣಧೋಳಿ, ಗುರುಲಿಂಗಪ್ಪ ಗೋಕಾಕ, ಮಲ್ಲಿಕಾರ್ಜುನ ಕಬ್ಬೂರ, ಉಮೇಶ ಶೆಕ್ಕಿ, ಸಿದ್ದು ಬಳಿಗಾರ, ರವಿ ಮಹಾಲಿಂಗಪೂರ, ಹೊಳೆಪ್ಪ ನಿಂಗನೂರ, ಪ್ರವೀಣ ಕುಲಗೋಡ ಹಾಗೂ ಬಸವ ಸೇವಾ ಯುವಕ ಸಂಘದ ಸದಸ್ಯರು ಉಪಸ್ಥಿತರಿದರು.

ತಹಶೀಲ್ದಾರ ವಿರುದ್ದ ಆಕ್ರೋಶ : ಮನವಿ ಸ್ವೀಕರಿಸಲು ತಹಶೀಲ್ದಾರ ಕಚೇರಿ ಸಿಬ್ಬಂದಿ ಬಂದಿರುವುದರಿಂದ ತಹಶೀಲ್ದಾರ ಬಂದು ಮನವಿ ಸ್ವೀಕರಿಸಬೇಕೆಂದು ಪ್ರತಿಭಟನಾಕಾರರ ಪಟ್ಟು ಹಿಡಿದರು. ನಂತರ ದೂರವಾಣಿ ಮೂಲಕ ತಹಶೀಲ್ದಾರ ಅವರು ಕೆಲಸದ ನಿಮಿತ್ಯ ಹೊರಗಡೆ ಇರುವುದಾಗಿ ಹೇಳಿದ್ದರಿಂದ ಬೇಸತ ಪ್ರತಿಭಟನಾಕಾರರು ತಹಶೀಲ್ದಾರ ಅವರು ತಮ್ಮ ಕಚೇರಿಗೆ ಪ್ರತಿದಿನ 12 ಗಂಟೆ ಬರುವುದೇ ರೂಡಿ ಮಾಡಿಕೊಂಡಿದ್ದಾರೆ ಆದರಿಂದ ತಹಶೀಲ್ದಾರ ವಿರುದ್ದ ಸೂಕ್ತವಾದ ಕ್ರಮ ಕೈಗೊಳ್ಳಲು ಶಾಸಕರಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ