ಮೂರ್ತಿ ಭಗ್ನ : ಭಾಗೋಜಿ ಶ್ರೀಗಳಿಂದ ತೀವ್ರ ಖಂಡನೆ
ಮೂಡಲಗಿ: ರಾಮದುರ್ಗ ತಾಲ್ಲೂಕಿನ ಬಿಜಗುಪ್ಪಿ ಗ್ರಾಮದಲ್ಲಿಯ ಜಗಜ್ಯೋತಿ ಬಸವೇಶ್ವರ ಮೂರ್ತಿಯನ್ನು ಭಗ್ನಗೊಳಿಸಿ ಅವಮಾನಗೊಳಿಸಿರುವ ದುಷ್ಟರ್ಮಿಗಳಿಗೆ ಶಿಕ್ಷೆಯಾಗಬೇಕು ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶ್ರೀಗಳು ವಿಶ್ವಕ್ಕೆ ಸಮಾನತೆಯನ್ನು ಬೋಧಿಸಿರುವ ಬಸವಣ್ಣನನವರ ಮೂರ್ತಿಗೆ ಅವಮಾನ ಮಾಡುವುದು ಅತ್ಯಂತ ಘೋರವಾದ ಅಪರಾಧವಾಗಿದೆ. ದುಷ್ಟ ಕೃತ್ಯ ಮಾಡಿರುವ ವ್ಯಕ್ತಿಗಳನ್ನು ಹುಡುಕಿ ಶಿಕ್ಷೆ ನೀಡಬೇಕು. ಇಂಥ ಘಟನೆಗಳು ಮರಳಿ ಸಂಭವಿಸದಂತೆ ಸರ್ಕಾರವು ಮತ್ತು ಆಯಾ ಊರುಗಳ ಸ್ಥಳೀಯ ಆಡಳಿತದವರು ಕ್ರಮ ತೆಗೆದುಕೊಳ್ಳಬೇಕು. ಭಗ್ನವಾಗಿರುವ ಬಸವೇಶ್ವರರ ಮೂರ್ತಿಯನ್ನು ಪುನ: ಸ್ಥಾಪಿಸಬೇಕು ಎಂದು ಸ್ವಾಮೀಜಿಗಳು ಆಗ್ರಹಿಸಿದ್ದಾರೆ.
