Breaking News
Home / Recent Posts / ‘ಸಹಕಾರಿಗಳು ಇಟ್ಟಂತ ವಿಶ್ವಾಸವನ್ನು ಉಳಿಸುತ್ತೇವೆ’ – ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ

‘ಸಹಕಾರಿಗಳು ಇಟ್ಟಂತ ವಿಶ್ವಾಸವನ್ನು ಉಳಿಸುತ್ತೇವೆ’ – ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ

Spread the love

ಮೂಡಲಗಿಯ ಬಣಜಿಗ ಸಮಾಜ ಸಂಘದಿಂದ ಡಿಸಿಸಿ ಬ್ಯಾಂಕ್‍ಗೆ ಸತತ ಎರಡನೇ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಸ್.ಜಿ. ಢವಳೇಶ್ವರ ಅವರನ್ನು ಸನ್ಮಾನಿಸಿದರು
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ ಅಭಿಪ್ರಾಯ
‘ಸಹಕಾರಿಗಳು ಇಟ್ಟಂತ ವಿಶ್ವಾಸವನ್ನು ಉಳಿಸುತ್ತೇವೆ’
ಮೂಡಲಗಿ: ಬೆಳಗಾವಿಯ ಡಿಸಿಸಿ ಬ್ಯಾಂಕ್‍ಗೆ ಉಪಾಧ್ಯಕ್ಷರಾಗಿ ಸತತ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿರುವ ಮೂಡಲಗಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುಭಾಷ ಜಿ. ಢವಳೇಶ್ವರ ಅವರನ್ನು ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಮೂಡಲಗಿ ಘಟಕದಿಂದ ಸನ್ಮಾನಿಸಿ ಗೌರವಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಢವಳೇಶ್ವರ ಅವರು ‘ಮೂಡಲಗಿಯ ಗುರು ಹಿರಿಯರ ಕೃಪೆಯಿಂದ ಡಿಸಿಸಿ ಬ್ಯಾಂಕ್‍ಗೆ ಪುನ: ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವೆ. ಎಲ್ಲರ ಪ್ರೀತಿ, ವಿಶ್ವಾಸವನ್ನು ನಿರಂತರವಾಗಿ ಉಳಿಸಿಕೊಂಡು ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಸದಾ ಬದ್ದನಾಗಿರುವೆನು’ ಎಂದರು.
ಬೆಳಗಾವಿಯ ಡಿಸಿಸಿ ಬ್ಯಾಂಕ್‍ವು ಈಗಾಗಲೇ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು, ಆಡಳಿತಮಂಡಳಿಯೊಂದಿಗೆ ಒಗ್ಗಟ್ಟಿನ ಮೂಲಕ ಬ್ಯಾಂಕ್‍ವನ್ನು ಇನ್ನು ಎತ್ತರಕ್ಕೆ ಬೆಳೆಸುತ್ತೇವೆ. ಜಿಲ್ಲೆಯ ಎಲ್ಲ ಸಹಕಾರಿಗಳು ನಮ್ಮ ಮೇಲೆ ಇಟ್ಟಂತ ಭರವಸೆಯನ್ನು ಖಂಡಿತವಾಗಿ ಉಳಿಸುತ್ತೇವೆ ಎಂದರು.
ಮೂಡಲಗಿಯ ಬಣಜಿಗ ಸಂಘದ ಅಧ್ಯಕ್ಷ ಚನಬಸಪ್ಪ ಎಸ್. ಅಂಗಡಿ ಮಾತನಾಡಿ
ಬೆಳಗಾವಿ ಜಿಲ್ಲೆಯಲ್ಲಿ ಸಹಕಾರಿ ರಂಗದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಮೂಡಲಗಿಯಿಂದ ಸುಭಾಷ ಢವಳೇಶ್ವರ ಅವರು ಡಿಸಿಸಿ ಬ್ಯಾಂಕ್‍ಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದರು.
ಉಪಾಧ್ಯಕ್ಷ ಶಿವಬಸು ನೀಲಣ್ಣವರ, ಬಿ.ಜಿ. ಜಕಾತಿ, ಸಂಗಪ್ಪ ಅಂಗಡಿ, ಪುರಸಭೆ ಮಾಜಿ ಸದಸ್ಯ ಸಿದ್ದು ಕೊಟಗಿ, ಶಿವಯೋಗಿ ಸಬರದ, ರಾಜಶೇಖರ ಅಂಗಡಿ, ಎಲ್.ಸಿ. ಗಾಡವಿ, ಈರಣ್ಣ ಜಕಾತಿ, ಮಹಾಂತೇಶ ಅಂಗಡಿ, ಅಜ್ಜಪ್ಪ ಅಂಗಡಿ, ಮಹಾಂತೇಶ ಶೆಟ್ಟಿ, ಮೂಡಲಗಿ ಸಹಕಾರಿ ಬ್ಯಾಂಕ್ ನಿರ್ದೇಶಕ ರುದ್ರಪ್ಪ ವಾಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ