Breaking News
Home / Recent Posts / ದೀಪಾವಳಿ ನಿಮಿತ್ತ ಅಡುಗೆ ಸಿಬ್ಬಂದಿಗೆ ಸನ್ಮಾನ ‘ಅಡುಗೆ ಸಿಬ್ಬಂದಿಯವರ ಕಾರ್ಯ ಶ್ಲಾಘನೀಯ’

ದೀಪಾವಳಿ ನಿಮಿತ್ತ ಅಡುಗೆ ಸಿಬ್ಬಂದಿಗೆ ಸನ್ಮಾನ ‘ಅಡುಗೆ ಸಿಬ್ಬಂದಿಯವರ ಕಾರ್ಯ ಶ್ಲಾಘನೀಯ’

Spread the love

ಮೂಡಲಗಿ ತಾಲ್ಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯವರಿಗೆ ದೀಪಾವಳಿ ಅಂಗವಾಗಿ ಸೀರೆ ನೀಡಿ ಸನ್ಮಾನಿಸಿ ಗೌರವಿಸಿದರು
ದೀಪಾವಳಿ ನಿಮಿತ್ತ ಅಡುಗೆ ಸಿಬ್ಬಂದಿಗೆ ಸನ್ಮಾನ
‘ಅಡುಗೆ ಸಿಬ್ಬಂದಿಯವರ ಕಾರ್ಯ ಶ್ಲಾಘನೀಯ’
ಮೂಡಲಗಿ: ‘ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಯೋಜನೆಯಲ್ಲಿಯ ಅಡುಗೆ ಸಿಬ್ಬಂದಿಯವರು ತೆರೆಮರೆಯಲ್ಲಿ ಮಾಡುವ ಕಾರ್ಯವು ಶ್ಲಾಘನೀಯವಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ತಾಲ್ಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹದ ಅಡಿಯಲ್ಲಿ ಅಡುಗೆ ಮಾಡುವ ಮಹಿಳೆಯರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳಿಗೆ ರುಚಿಕಟ್ಟಾಗಿ ಅಡುಗೆ ಮಾಡುವ ಸಿಬ್ಬಂದಿಗಳ ಸೇವೆಯು ಅನನ್ಯವಾಗಿದೆ ಎಂದರು.
ತುಕ್ಕಾನಟ್ಟಿಯ ಶಾಲೆಯಲ್ಲಿ ಮಕ್ಕಳಿಗೆ ವಿವಿಧ ಖಾದ್ಯಗಳನ್ನು ಮಾಡಿ ಉಣಬಡಿಸುವಉದರಿಂದ ಶಾಲೆಯ ದಾಖಲಾತಿಯೊಂದಿಗೆ ಶಾಲೆಯ ಗುಣಮಟ್ಟದಲ್ಲಿಯು ವಲಯದಲ್ಲಿ ಗುರುತಿಸಿಕೊಂಡಿದೆ ಎಂದರು.
ಪ್ರತಿ ವರ್ಷ ನಡೆಯುವ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿಗಳನ್ನು ವಿಶೇಷವಾಗಿ ಗುರುತಿಸಿ ಗೌರವಿಸುವ ಕಾರ್ಯವನ್ನು ಇಲಾಖೆಯಿಂದ ಮಾಡುವುದಾಗಿ ತಿಳಿಸಿದರು.
ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ ಮಾತನಾಡಿ ಮಧ್ಯಾಹ್ನ ಬಿಸಿಯೂಟದಲ್ಲಿ ಮಕ್ಕಳಿಗೆ ವೈವಿಧ್ಯಮಯವಾದ ಖಾದ್ಯಗಳನ್ನು ಮಾಡಿ ಉಣಿಸುವ ತುಕ್ಕಾನಟ್ಟಿ ಸರ್ಕಾರಿ ಶಾಲೆಯು ರಾಜ್ಯದಲ್ಲಿ ವಿಶೇಷವಾಗಿ ಗುರುತಿಸುತ್ತದೆ. ಇದಕ್ಕೆಲ್ಲ ಈ ಶಾಲೆಯಲ್ಲಿರುವ ಮುಖ್ಯೋಪಾಧ್ಯಾಯ ಎ.ವಿ. ಗಿರೆಣ್ಣವರ ಹಾಗೂ ಶಿಕ್ಷಕರ ಇಚ್ಛಾಶಕ್ತಿಯು ಕಾರಣವಾಗಿದೆ ಎಂದರು.
ತುಕ್ಕಾನಟ್ಟಿ ಸರ್ಕಾರಿ ಶಾಲೆಯ ಬಿಸಿಯೂಟದ ವೈವಿದ್ಯತೆಯು ಇತರೆ ಶಾಲೆಗಳಿಗೆ ಮಾದರಿಯಾಗಿದೆ. ಅಡುಗೆ ಸಿಬ್ಬಂದಿಯವರನ್ನು ಸನ್ಮಾನಿಸಿ ಗೌರವಿಸಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಅತಿಥಿಯಾಗಿದ್ದ ಅಕ್ಷರ ದಾಸೋಹ ತಾಲ್ಲೂಕು ನಿರ್ದೇಶಕ ಎ.ಬಿ. ಮಲಬನ್ನವರ, ಸಾಹಿತಿ ಬಾಲಶೇಖರ ಬಂದಿ ಮಾತನಾಡಿ ತುಕ್ಕಾನಟ್ಟಿಯ ಸರ್ಕಾರಿ ಶಾಲೆಯ ಕಾರ್ಯವನ್ನು ಪ್ರಶಂಸಿದರು.
ಅಡುಗೆ ಸಿಬ್ಬಂದಿಗಳಾದ ಸೇವಂತಾ ಅರಭಾಂವಿ, ಶಕುಂತಲಾ ಹುಲಕುಂದ, ಸುರೇಖಾ ಹಡಗಿನಾಳ, ಸಾಂವಕ್ಕಾ ಹರಿಜನ, ಮಹಾದೇವಿ ಉಪ್ಪಾರ ಇವರಿಗೆ ಶಾಲೆಯ ಸಿಬ್ಬಂದಿಯವರು ಕೊಡಮಾಡಿದ ಸೀರೆ ಹಾಗೂ ಫಲಪುಷ್ಪವನ್ನು ಗಣ್ಯರು ನೀಡಿ ಸನ್ಮಾನಿಸಿದರು.
ಪ್ರಾರಂಭದಲ್ಲಿ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ನೆಹರು ಜಯಂತಿ ಹಾಗೂ ಮಕ್ಕಳ ದಿನಾಚರಣೆಯನ್ನು ಆಚರಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಎ.ವಿ. ಗಿರೆಣ್ಣವರ ಪ್ರಾಸ್ತಾವಿಕ ಮಾತನಾಡಿದರು.
ತುಕ್ಕಾನಟ್ಟಿಯ ಪಿಡಿಒ ವೀರಭದ್ರ ಗುಂಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ದಿಲೀಪ ಜಿ. ಕಲಾರಕೊಪ್ಪ, ಕಲ್ಲೋಳಿ ಸಿಆರ್‍ಪಿ ಜಿ.ಕೆ.ಉಪ್ಪಾರ ಅತಿಥಿಯಾಗಿ ವೇದಿಕೆಯಲ್ಲಿದ್ದರು. ಶಿಕ್ಷಕ ಮಹಾದೇವ ಗೋಮಾಡೆ ನಿರೂಪಿಸಿದರು.
ಮುಗಿಯಿತು………..


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ