ಮೂಡಲಗಿ: ಬೆಳಗಾವಿ ಜಿಲ್ಲಾಡಳಿತ ನಿರ್ಲಕ್ಷ್ಯ ಖಂಡಿಸಿ ಪೀರಣವಾಡಿ ರಾಯಣ್ಣನ ಮೂರ್ತಿಗೆ ಪದೆ ಪದೆ ಅವಮಾನ ಎಸುಗುತ್ತಿರುವುದನ್ನು ಖಂಡಿಸಿ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟಿಸಿ. ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಅವಮಾನ ಮಾಡಿದವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮದ ಗ್ರಾಪಂ ಪಿಡಿಓ ಹಾಗೂ ಲೆಕ್ಕಾಧಿಕಾರಿಗಳ ಮೂಲಕ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಈ ವೇಳೆಯಲ್ಲಿ ನಮ್ಮ ಕರವೇ ಜಿಲ್ಲಾ ಸಂಚಾಲಕರಾದ ಕಲ್ಮೇಶ ಗಾಣಿಗೇರ ಮಾತನಾಡಿ, ಪೀರಣವಾಡಿಯಲ್ಲಿನ ಮೂರ್ತಿಯನ್ನು ಜಿಲ್ಲಾಡಳಿತ ಸುಸಜ್ಜಿತವಾಗಿ ನಿರ್ಮಿಸಿ ಅದಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.
ಹಾಲುಮತ ಮಹಾಸಭಾ ಜಿಲ್ಲಾ ಸಂಚಾಲಕ ವೀರಣ್ಣ ಮೋಡಿ ಮಾತನಾಡಿ, ಸ್ವತಂತ್ರಕ್ಕಾಗಿ ಬಿಟಿಷರ ವಿರುದ್ದ ಹೋರಾಡಿದ ಮಹಾನ್ ನಾಯಕ ಸಂಗೊಳ್ಳಿ ರಾಯಣ್ಣ ಮೂರ್ತಿಯ ಪ್ರತಿಷ್ಠಾಪನೆ ಸಲುವಾಗಿ ಸಾಕಷ್ಟು ಹೋರಾಟಿದ ಪ್ರತಿಫಲವಾಗಿ ಅಭಿವೃದ್ದಿ ಮಾಡಲು ಜಿಲ್ಲಾಡಳಿತ ಮುಂದಾಗಬೇಕು ಹಾಗೂ ಮೂರ್ತಿಗೆ ಭದ್ರತೆ ಒದಗಿಸಬೇಕು ಮತ್ತು ಆ ವೃತ್ತದ ಸುತ್ತ ಮುತ್ತ ಸಿಸಿ ಕ್ಯಾಮರಾ ಅಳವಡಿಸಿ ಹೇಳಿದರು.
ಸಂಗೊಳ್ಳಿ ರಾಯಣ್ಣನ ಮೂರ್ತಿಯ ತೆಲೆ ಮೇಲೆ ನಿಂತು ಅವಮಾನ ಮಾಡಿದ್ದು ರಾಜ್ಯದ ಶಾಂತಿ ಕದಡಲು ಕೆಲ ಸಮಾಜಘಾತಕ ವ್ಯಕ್ತಿಗಳು ಇಂತಹ ಕೃತ್ಯವೆಸಗುತ್ತಿದ್ದಾರೆ. ಅಂತಹ ವ್ಯಕ್ತಿಗಳಿಗೆ ಉಗ್ರ ಶಿಕ್ಷೆ ವಿಧಿಸಿ ಮುಂದೆ ಇಂತಹ ಕೃತ್ಯಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.
ಸ್ಥಳಕ್ಕೆ ಆಗಮಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮುತ್ತು ಹುಡೇದ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮುಲ್ಲಾ ರವರು ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳಿಗೆ ತಲುಪಿಸುವುದಾಗಿ ತಿಳಿಸಿದರು
ಈ ಪ್ರತಿಭಟನೆಯಲ್ಲಿ ಕರೆಪ್ಪ ಅ ಇಟ್ಟಣ್ಣವರ ಹಾಲು ಉತ್ಪಾದಕ ಸಂಘದ ಅಧ್ಯಕ್ಷರಾದ ಬಸು ಕೆರಿ, ಲಕ್ಷ್ಮಣ ಪಾಟೀಲ, ಮುತ್ತಪ್ಪ ಕುರಿ, ಸದಾಶಿವ ಮಾಕಾಳಿ, ಮುತ್ತಪ್ಪ ಪೂಜೇರಿ, ಬಾμÁ ತಹಶಿಲ್ದಾರ, ಮಲೀಕ್ ಗುದಗಿ ಬಸು ಸಂಗೊಳ್ಳಿ, ಹಾಗೂ ನಮ್ಮ ಕರವೇ ಕಾರ್ಯಕರ್ತರು, ಹಾಲುಮತ ಮಹಾಸಭಾ ಸಂಘಟನೆ ಕಾರ್ಯಕರ್ತರು ಮತ್ತು ಯಾದವಾಡ ಗ್ರಾಮಸ್ಥರು ಭಾಗವಹಿಸಿದ್ದರು.