Breaking News
Home / Recent Posts / ಗ್ರಾಮೀಣ ವಲಯದ ಸಹಕಾರಿ ಸಂಘ-ಸಂಸ್ಥೆಗಳು ಹಳ್ಳಿಯ ಜನರ ಜೀವನಾಡಿಗಳಾಗಿವೆ

ಗ್ರಾಮೀಣ ವಲಯದ ಸಹಕಾರಿ ಸಂಘ-ಸಂಸ್ಥೆಗಳು ಹಳ್ಳಿಯ ಜನರ ಜೀವನಾಡಿಗಳಾಗಿವೆ

Spread the love

ಬೆಟಗೇರಿ: ಗ್ರಾಮೀಣ ವಲಯದ ಸಹಕಾರಿ ಸಂಘ-ಸಂಸ್ಥೆಗಳು ಹಳ್ಳಿಯ ಜನರ ಜೀವನಾಡಿಗಳಾಗಿವೆ. ಪಾರದರ್ಶಕ ಹಾಗೂ ವಿಶ್ವಾಸದ ಪ್ರತಿಬಿಂಬವಾಗಿ ಸಹಕಾರಿ ಸಂಘ, ಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಎಂದು ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ ಹೇಳಿದರು.


ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಗುರುವಾರ ನ.19 ರಂದು ನಡೆದ ಮೂಡಲಗಿ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ 13 ನೇ ನೂತನ ಶಾಖೆಯ ಉದ್ಘಾಟನೆ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡಿ, ಮೂಡಲಗಿಯ ಬಸವೇಶ್ವರ ಸೊಸಾಯಿಟಿಯು ಪ್ರಗತಿಯ ದಾಪುಗಾಲು ಇಡುತ್ತಾ ಜನಪರ ಕಾರ್ಯಕೈಗೊಳ್ಳಲಿ ಎಂದು ಹಾರೈಸಿದರು.
ಅರಭಾಂವಿ ಮಠದ ಸಿದ್ಧಲಿಂಗ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿ ಸ್ಥಳೀಯ ನೂತನ ಶಾಖೆಯ ಉದ್ಘಾಟನೆ ನೆರವೇರಿಸಿ ಆರ್ಶೀವಚನ ನೀಡಿದರು. ಮೂಡಲಗಿ ಬಸವೇಶ್ವರ ಸೊಸಾಯಿಟಿ ಪ್ರಧಾನ ಕಛೇರಿಯ ಅಧ್ಯಕ್ಷ ಬಸವರಾಜ ತೇಲಿ ಅಧ್ಯಕ್ಷತೆ ವಹಿಸಿದ್ದರು. ಶಂಭು ಹಿರೇಮಠ, ವಿಜಯ ಹಿರೇಮಠ ಸಮ್ಮುಖ ವಹಿಸಿದ್ದರು. ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಸುಭಾಷ ಢವಳೇಶ್ವರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಹಕಾರಿ ಧುರೀಣರಾದ ಗಿರೀಶ ಢವಳೇಶ್ವರ, ಅರ್ಜುನ ಅಂದಾನಿ, ಮಲ್ಲಪ್ಪ ಪಣದಿ, ಮಲ್ಲಿಕಾರ್ಜುನ ಢವಳೇಶ್ವರ, ಶ್ರೀಶೈಲ ಫಿರೋಜಿ, ಶ್ರೀಕಾಂತ ಹಿರೇಮಠ, ಮಲ್ಲಿಕಾರ್ಜುನ ಮೆಳೆಣ್ಣವರ, ಚನಬಸು ಬಡ್ಡಿ, ಬಸಪ್ಪ ದೇಯಣ್ಣವರ, ಶ್ರೀಶೈಲ ಮದಗಣ್ಣವರ, ನಿರ್ವಾಣಿ ಕತ್ತಿ, ದೇವಪ್ಪ ಕೌಜಲಗಿ, ಸದಾಶಿವ ಕುರಿ, ಮಲಗೌಡ ಪಾಟೀಲ, ರಾಮಯ್ಯ ಮಠದ, ಬಸವರಾಜ ಬಡಿಗೇರ, ಸೊಸಾಯಿಟಿಯ ಪ್ರಧಾನ ಕಛೇರಿ ಆಡಳಿತ ಮಂಡಳಿ ಸದಸ್ಯರು, ವಿವಿಧ ಶಾಖೆಯ ಸಲಹಾ ಸಮಿತಿ ಸದಸ್ಯರು, ಇತರರು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ