Breaking News
Home / Recent Posts / ರಾಷ್ಟ್ರೀಯ ಗ್ರಂಥಾಲಯ ಸಪ್ತಹ ಸಮಾರೋಪ ಕಾರ್ಯಕ್ರಮ

ರಾಷ್ಟ್ರೀಯ ಗ್ರಂಥಾಲಯ ಸಪ್ತಹ ಸಮಾರೋಪ ಕಾರ್ಯಕ್ರಮ

Spread the love

ಮೂಡಲಗಿ: ಪಟ್ಟಣದ ರ್ಸಾಜನಿಕ ಗ್ರಂಥಾಲಯದಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಹ ಸಮಾರೋಪ ಕಾರ್ಯಕ್ರಮ ಹಾಗೂ ಸದಸ್ಯರ ನೊಂದಣಿ ಕಾರ್ಯಕ್ರಮಕ್ಕೆ ಪತ್ರಕರ್ತರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಮಲ್ಲು ಬೊಳನವರ ಮಾತನಾಡಿ, ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದೆ ಗ್ರಂಥಾಲಯಗಳು ಅವಶ್ಯಕ. ಶಿಕ್ಷಣದಲ್ಲಿ ಗ್ರಂಥಾಲಯವು ತನ್ನದೆ ಆದ ಮಹತ್ವ ಹೊಂದಿದೆ. ಪುಸ್ತಕಗಳು ಹಾಗೂ ಗ್ರಂಥಾಲಯ ಜೀವಂತ ದೇವಾಲಯಗಳು ಇದ್ದಂತೆ. ಜ್ಞಾನ ಭಂಡಾರವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓದುವ ಹವ್ಯಾಸ ಬೆಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರತಿಯೊಂದು ಗ್ರಾಮಗಳಲ್ಲಿ ಬಡ ಓದುಗರಿಗೆ ಸಹಾಯಕವಾಗಲ್ಲಿ ಎಂದು ಸರ್ಕಾರ ಗ್ರಂಥಾಲಯಗಳನ್ನು ಸ್ಥಾಪಿಸಿದ್ದಾರೆ. ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ, ಅದೇ ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ ಆದರಿಂದ ಗ್ರಂಥಾಲಯದ ಸದುಪಯೋಗವನ್ನು ಗ್ರಾಮೀಣ ಮಕ್ಕಳು ಬಳಸಿಕೊಳ್ಳಬೇಕೆಂದು ಕೆರೆ ನೀಡಿದರು.
ಶಾಲೆಯ ಪಠ್ಯ ಮತ್ತು ಪ್ರಪಂಚ ಎರಡನ್ನು ಹೇಗೆ ಒಂದು ಕೋಣೆಯೊಳಗೆ ನಿರ್ದಿಷ್ಠ ವ್ತಕ್ತಿಯೊಂದಿಗೆ ಕಲಿಸುತ್ತದೆಯೊ ಅದರಂತೆಯೆ ಗ್ರಂಥಾಲಯವು ಕೂಡ ಶಿಕ್ಷಣ ಉದ್ದೇಶವನ್ನು ಇಡೇರಿಸುವಲ್ಲಿ ಒಂದು ಚಿಕ್ಕ ಕೋಣೆಯಾಗಿ ಅಲ್ಲಿನ ಪುಸ್ತಕಗಳೆ ಒಬ್ಬ ವ್ಯಕ್ತಿಯಾಗಿ ಶಕ್ತಿಯಾಗಿ ಬೆಳೆಯಲು ಸಹಕರಿಸುತ್ತದೆ. ಜ್ಞಾನ ಕಟ್ಟಿಕೊಳ್ಳುವುದರ ಜೊತೆಗೆ ಬದುಕಿನ ದಾರಿಗಳನ್ನು ಹುಡುಕಾಡಲು ಅವಕಾಶ ಕೊಡುತ್ತದೆ ಎಂದರು.
ಗ್ರಂಥಾಪಾಲಕ ಈರಪ್ಪ ಬಾಗೇವಾಡಿ ಮಾತನಾಡಿ, ಪಟ್ಟಣದಲ್ಲಿ ಇರುವಂತ ಓದುಗರು ತಂತ್ರಜ್ಞಾನ ಬದಲಾದಂತೆ ನಾವು ಕೂಡಾ ಬದಲಾಗಬೇಕಿದೆ. ಓದುಗರು ಗ್ರಂಥಾಲಯ ಸದುಪಯೋಗ ಪಡಿಸಿಕೊಂಡ ಉ ತಮ್ಮ ಬಾವಿ ಜೀವನವನ್ನು ಉಜ್ವಲ್ ಪಡಿಸಿಕೊಳ್ಳಬೇಕೆಂದರು.
ಈ ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಎಮ್.ಎಸ್.ಮುಲ್ಲಾ, ಪತ್ರಕರ್ತರಾದ ಕೃಷ್ಣಾ ಗಿರೆಣ್ಣವರ, ಅಲ್ತಾಫ್ ಹವಾಲ್ದಾರ, ಶಿವಬಸು ಗಾಡವಿ, ಈಶ್ವರ ಢವಳೇಶ್ವರ ಹಾಗೂ ಮತ್ತಿತರು ಉಪಸ್ಥಿತರಿದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ