Breaking News
Home / Recent Posts / ರಸ್ತೆ ಸಂಚಾರಿ ನಿಯಮ ಪಾಲಿಸಿ ಅಪಘಾತಗಳಿಂದ ಮುಕ್ತರಾಗಬೇಕು

ರಸ್ತೆ ಸಂಚಾರಿ ನಿಯಮ ಪಾಲಿಸಿ ಅಪಘಾತಗಳಿಂದ ಮುಕ್ತರಾಗಬೇಕು

Spread the love

 ರಸ್ತೆ ಸಂಚಾರಿ ನಿಯಮ ಪಾಲಿಸಿ ಅಪಘಾತಗಳಿಂದ ಮುಕ್ತರಾಗಬೇಕು

ಮೂಡಲಗಿ: ‘ರಸ್ತೆ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕ ಅಪಘಾತಗಳಿಂದ ಮುಕ್ತರಾಗಬೇಕು’ ಎಂದು ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಹೇಳಿದರು.
ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ರಸ್ತೆ ಸುರಕ್ಷಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಾಹನ ಚಲಾಯಿಸುವಾಗ ತಾಳ್ಮೆ ಮತ್ತು ಜವಾಬ್ದಾರಿ ಇರಬೇಕು ಎಂದರು.
ವಾಹನಗಳ ಹಿಂಬದಿಗೆ ಕಡ್ಡಾಯವಾಗಿ ರೇಡಿಯಂ ಅಳವಡಿಸಬೇಕು, ಚಾಲಕರ ಮೂರನೇ ಕಣ್ಣು ಆಗಿರುವ ವಾಹನದ ಕನ್ನಡಿಗಳು ಯಾವಾಗಲೂ ಸುಸ್ಥಿತಿಯಲ್ಲಿಡಬೇಕು ತಪ್ಪು ದಿಕ್ಕಿನಲ್ಲಿ ವಾಹನಗಳನ್ನು ಚಲಾಯಿಸಬಾರದು ಎಂದರು.
ಪ್ರತಿ ವರ್ಷ ದೇಶದಲ್ಲಿ ಜರಗುವ ವಾಹನಗಳ ಅಪಘಾತಗಲ್ಲಿ 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದು, ಅದರಲ್ಲಿ ಯುವಕರ ಪ್ರಮಾಣ ಅಧಿಕವಾಗಿದೆ. ಮೊಬೈಲ್ ಬಳಕೆ, ಮಧ್ಯ ಸೇವನೆ, ವಾಹನ ಚಲಾಯಿಸುವಾಗ ಸಂಭಾಷಣೆ ಮತ್ತು ರಸ್ತೆ ಚಿನ್ಹೆಗಳನ್ನು ಪಾಲಿಸಿದೆ ಇರುವುದು ಆಗಿದೆ ಎಂದರು.
ಅತಿಥಿ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ ಮಾತನಾಡಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಚಾಲಕರು ಟ್ರಾಲಿಗಳಿಗೆ ಕಡ್ಡಾಯವಾಗಿ ರೇಡಿಯಂ ಅಂಟಿಸಬೇಕು. ಚಾಲಕ ಸಣ್ಣ ತಪ್ಪಿನಿಂದ ಅಪಘಾತಗಳು ಸಂಭವಿಸಿ, ಒಳ್ಳೆಯ ಕುಟುಂಬಗಳು ಹಾನಿಗೊಂಡ ಉಧಾಹರಣೆಗಳು ಇವೆ ಎಂದರು.
ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ ಅಪಘಾರ ರಹಿತ ಸಮಾಜವನ್ನು ನಿರ್ಮಿಸಲು ಮುಂದಾಗಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಪುಲಕೇಶ ಸೋನವಾಲಕರ ಮಾತನಾಡಿ ರಸ್ತೆ ಸರಕ್ಷತಾ ಅಭಿಯಾನದ ಮೂಲಕ ಜನರಲ್ಲಿ ಮತ್ತು ವಾಹನ ಚಾಲಕರಲ್ಲಿ ಸಂಚಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಪ್ರತಿ ವರ್ಷವೂ ಲಯನ್ಸ್ ಕ್ಲಬ್‍ದಿಂದ ನಡೆಸಿಕೊಡು ಬಂದಿರುವೆವು ಎಂದರು.
ನೂರಕ್ಕು ಅಧಿಕ ವಾಹನಗಳ ಹಿಂಬದಿಗೆ ರೇಡಿಯಂ ಪಟ್ಟಿಗಳನ್ನು ಅಂಟಿಸಿ ವಾಹನ ಚಾಲಕರಿಗೆ ಸಂಚಾರ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಲಯನ್ಸ್ ಡಿಸಿಗಳಾದ
ಶ್ರೀಶೈಲ್ ಲೋಕನ್ನವರ, ಈರಣ್ಣ ಕೊಣ್ಣೂರ, ಮಲ್ಲಿನಾಥ ಶೆಟ್ಟಿ, ಲಯನ್ಸ್ ಕಾರ್ಯದರ್ಶಿ ಸಂಜಯ ಮೋಕಾಸಿ, ಖಾಜಾಂಚಿ ಸಂಜಯ ಮಂದ್ರೋಳಿ, ಡಾ. ಎಸ್.ಎಸ್. ಪಾಟೀಲ, ಡಾ. ಪ್ರಕಾಶ ನಿಡಗುಂದಿ, ಡಾ. ಸಂಜಯ ಶಿಂಧಿಹಟ್ಟಿ, ಶಿವಾನಂದ ಕಿತ್ತೂರ, ವೆಂಕಟೇಶ ಪಾಟೀಲ, ಗಿರೀಶ ಆಸಂಗಿ, ಸಂದೀಪ ಸೋನವಾಲಕರ, ಮಹಾವೀರ ಸಲ್ಲಾಗೋಳ, ಸೋಮಶೇಖರ ಹಿರೇಮಠ, ವಿಶಾಲ ಶೀಲವಂತ, ಸುಪ್ರೀತ ಸೋನವಾಲಕರ, ಶಿವಬೋಧ ಯರಝರವಿ, ಪ್ರಮೋದ ಪಾಟೀಲ ಇದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ