ಮೂಡಲಗಿ: ರೈತರಿಗೆ ಬೇಕಾಗುವಂತ ರಸಗೊಬ್ಬರವನ್ನು ಸರ್ಕಾರದಿಂದ ಅನುಮೊದನೆ ಮಾಡಿದಂತ ಲ್ಯಾಬಲ್ಲಿ ಪರೀಕ್ಷಿಸಿ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಉತ್ಕøಷ್ಠ ಗುಣಮಟ್ಟದ ಹೊಸ ಹೊಸ ರಸಗೊಬ್ಬರಗಳನ್ನು ಎಕ್ಸೀಡ್ ಕ್ರಾಪ್ ಸೈನ್ಸ್ ಕಂಪನಿ ಕಳೆದ ಆರು ವರ್ಷಗಳಿಂದ ರೈತರಿಗೆ ನೀಡುತ್ತಿದೆ ಎಂದು ಕಂಪನಿಯ ಹುಬ್ಬಳ್ಳಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಾಲಚಂದ್ರ ಆರ್.ಎ ಹೇಳಿದರು.
ತಾಲೂಕಿನ ನಾಗನೂರ ಗ್ರಾಮದಲ್ಲಿ ಶನಿವಾರದಂದು ಎಕ್ಸೀಡ್ ಕ್ರಾಪ್ ಸೈನ್ಸ್ ಕಂಪನಿ ಹಾಗೂ ಗ್ರಾಮದ ವೈಷ್ಣೋದೇವಿ ಗೋಬ್ಬರ ಮಾರಾಟ ಮಳಿಗೆ ಅವರೊಂದಿಗೆ ಆಯೋಜಿಸಲಾಗದ ಎಕ್ಸೀಡ್ ಕಂಪನಿಯ ಲಕ್ಕಿ ಡ್ರಾ ವಿಜೇತ ಸಾಗರ ಬೆಳಕೋಡ ಅವರಿಗೆ ಪ್ರೀಜ್ ವಿತರಿಸಿ ಮಾತನಾಡಿದ ಅವರು, ಕಂಪನಿ ನಿರ್ಮಾಣ ಮಾಡುವ ಗೋಬ್ಬರಗಳಲ್ಲಿ ಸಾವಯುವ ಗೋಬ್ಬರ, ಸೂಕ್ಷ್ಮಜೀವಾನುಗಳು ಗೋಬ್ಬರ, ರಸಾವರಿ ಗೋಬ್ಬರಗಳು ರೈತರ ಬೆಳೆಗೆ ಹಾಗೂ ಮಣ್ಣಿಗೆ ಸೂಕ್ತವಾದ ಗೋಬ್ಬರವನ್ನು ತಯಾರಿಸಿ ರೈತರಿಗೆ ನೀಡುವುದರ ಜೊತೆಗೆ ಉಚಿತವಾಗಿ ಮಣ್ಣಿನ ಪರೀಕ್ಷೆ ಸಹ ನೀಡುತ್ತಿದೆ ಇರದ ಸದುಪಯೋಗ ಪಡೆದುಕೊಂಡು ಹೆಚ್ಚಿನ ಇಳುವರಿ ಪಡೆಯಬೇಕೆಂದು ರೈತರಿಗೆ ಕರೆ ನೀಡಿದರು.
ರೈತರಿಗೆ ಬೇಕಾದ ಉತ್ಕøಷ್ಠ ಗುಣಮಟ್ಟದ ರಸಗೋಬ್ಬರಗಳಾದ ಐರಾವತ 17:17:17 ಮತ್ತು 15:05:05, ಸೆಟ್‍ರೈಟ್ ಬೇವಿನ ಹಿಂಡಿ, ಮಾಗ್ನೇಸಿಯಂ ಸಲ್ಫೇಟ್ ಮತ್ತು ಇತರೆ ಲಘು ಪೋಷಕಾಂಶಗಳನ್ನು ಹಾಗೂ ಜಿಂಕ್ ಸಲ್ಫೇಟ್, ಫೇರಸ್ ಸಲ್ಫೇಟ್, ವಾಟರ್ ಸಾಲ್ಯುಬಲ್ ಫರಿಲೈಸರ್ 19:19:19 ಗೋಬ್ಬರಗಳನ್ನು ತಯಾರಿಸಿ ರೈತರಿಗೆ ಮಾರಾಟ ಮಾಡುವುದರ ಜೊತೆಗೆ ರೈತರಿಗೆ ಲಕ್ಕಿ ಡ್ರಾ ಮೂಲಕ ತಿಂಗಳಿಗೊಮ್ಮೆ ಬಹುಮಾನ ವಿತರಿಸುವಂತ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರೈತರು ಖರೀದಿ ಮಾಡಿದ ಗೊಬ್ಬರ ಹಣದ ಪಾವತಿಯನ್ನು ಕಡ್ಡಾಯವಾಗಿ ಮಾರಾಟ ಮೆಳಿಗೆಯವರಿಂದ ತಗೆದುಕೂಳ್ಳುವು ಉತ್ತಮ ಹಾಗೂ ಎಕ್ಸೀಡ್ ಕಂಪನಿಯೂ ರೈತರು ಹಣ ಪಾವತಿ ಮಾಡಿದ ರಶೀದಿಯನ್ನು ಕಂಪನಿಯ ಪೋ: 8884443581 ಕ್ಕೆ ಕಳಿಸಿದರೆ ತಿಂಗಳಿಗೊಮ್ಮೆ ನಡೆಯು ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ನೀಡಲಾಗುತ್ತಿದೆ ಲಕ್ಕಿ ಡ್ರಾ ಮಾಡುವ ಮೂಲಕ ರೈತರು ತಾವು ಖರೀದಿಸಿದ ಗೊಬ್ಬರಗಳ ಪಾವತಿ ಪಡೆಯುವಂತೆ ಜಾಗೃತಿಯನ್ನು ಕಂಪನಿಯೂ ಮಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂಪನಿಯ ಗೋಕಾಕ ವಲಯದ ಮಾರಾಟ ಅಧಿಕಾರಿ ವೆಂಕಟೇಶ ಕಾಳಗೆ, ಬಸವರಾಜ್ ಬೆಳಕೋಡ, ರೈತರಾದ ಶಂಕರ ಹೊಸಮನಿ, ಲಕಣ್ಣ ಪಡದಲ್ಲಿ, ಸಂತೋಷ ವನಕುದರಿ, ಪಾವಾಡಿ ಗೋಟುರ, ಬಸಪ್ಪ ಐನಾಪೂರ, ಕಿರಣ ಹೊಸಮನಿ, ಅರ್ಜುನ ಗುಗ್ಗರಿ, ಅಜ್ಜಪ್ಪ ಗೋಟುರ ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.