ತುಕ್ಕಾನಟ್ಟಿಯ ಶ್ರೀ ಶಾಂತಾನಂದ ಸ್ವಾಮೀಜಿ ನಿಧನ
ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಅಮೋಘ ಸಿದ್ಧೇಶ್ವರ ಆಶ್ರಮ ಗಾಯತ್ರಿ ಪೀಠದ ಪೀಠಾಧಿಪತಿಗಳಾದ ಶ್ರೀ ಶಾಂತಾನಂದ ಭಾರತಿ ಮಹಾಸ್ವಾಮಿಗಳು ತಮ್ಮ 52ನೇ ವಯಸ್ಸಿನಲ್ಲಿ ಮಂಗಳವಾರ ಸಾಯಂಕಾಲ ಹೃದಯಾಘಾತದಿಂದ ನಿಧನರಾದರು. ಶ್ರೀಗಳ ಅಂತ್ಯಸಂಸ್ಕಾರ ಬುಧವಾರ ದಿ.9ರಂದು ಮುಂಜಾನೆ 8ಘಂಟೆಗೆ ಆಶ್ರಮದ ಆವರಣದಲ್ಲಿ ಜರುಗುಲಿದೆ.
ಸಂತಾಪ: ತುಕ್ಕಾನಟ್ಟಿ ಗಾಯತ್ರಿ ಪೀಠದ ಶ್ರೀ ಶಾಂತಾನಂದ ಶ್ರೀಗಳು ಧಾರ್ಮಿಕವಾಗಿ ಸಾಕಷ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು, ಶ್ರೀಗಳ ಅಗಲಿಕೆಯಿಂದ ಗ್ರಾಮಕ್ಕೆ ಹಾಗೂ ಅರಭಾವಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ, ಅವರ ಅಪಾರ ಭಕ್ತವೃಂದಕ್ಕೆ ನೋವು ಬರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಅರಭಾವಿ ಶಾಸಕ ಹಾಗೂ ಕೆ.ಎಮ್.ಎಪ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ ಸೂಚಿಸಿದ್ದಾರೆ.
IN MUDALGI Latest Kannada News