Breaking News
Home / Recent Posts / ತುಕ್ಕಾನಟ್ಟಿಯ ಶ್ರೀ ಶಾಂತಾನಂದ ಸ್ವಾಮೀಜಿ ನಿಧನ

ತುಕ್ಕಾನಟ್ಟಿಯ ಶ್ರೀ ಶಾಂತಾನಂದ ಸ್ವಾಮೀಜಿ ನಿಧನ

Spread the love

ತುಕ್ಕಾನಟ್ಟಿಯ ಶ್ರೀ ಶಾಂತಾನಂದ ಸ್ವಾಮೀಜಿ ನಿಧನ

ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಅಮೋಘ ಸಿದ್ಧೇಶ್ವರ ಆಶ್ರಮ ಗಾಯತ್ರಿ ಪೀಠದ ಪೀಠಾಧಿಪತಿಗಳಾದ ಶ್ರೀ ಶಾಂತಾನಂದ ಭಾರತಿ ಮಹಾಸ್ವಾಮಿಗಳು ತಮ್ಮ 52ನೇ ವಯಸ್ಸಿನಲ್ಲಿ ಮಂಗಳವಾರ ಸಾಯಂಕಾಲ ಹೃದಯಾಘಾತದಿಂದ ನಿಧನರಾದರು. ಶ್ರೀಗಳ ಅಂತ್ಯಸಂಸ್ಕಾರ ಬುಧವಾರ ದಿ.9ರಂದು ಮುಂಜಾನೆ 8ಘಂಟೆಗೆ ಆಶ್ರಮದ ಆವರಣದಲ್ಲಿ ಜರುಗುಲಿದೆ

ಸಂತಾಪ: ತುಕ್ಕಾನಟ್ಟಿ ಗಾಯತ್ರಿ ಪೀಠದ ಶ್ರೀ ಶಾಂತಾನಂದ ಶ್ರೀಗಳು ಧಾರ್ಮಿಕವಾಗಿ ಸಾಕಷ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು, ಶ್ರೀಗಳ ಅಗಲಿಕೆಯಿಂದ ಗ್ರಾಮಕ್ಕೆ ಹಾಗೂ ಅರಭಾವಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ, ಅವರ ಅಪಾರ ಭಕ್ತವೃಂದಕ್ಕೆ ನೋವು ಬರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಅರಭಾವಿ ಶಾಸಕ ಹಾಗೂ ಕೆ.ಎಮ್.ಎಪ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ ಸೂಚಿಸಿದ್ದಾರೆ.


Spread the love

About inmudalgi

Check Also

*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

Spread the loveಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ  ಸ್ವಚ್ಛತಾ  ಕಾರ್ಯ.! *ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ