Breaking News
Home / Recent Posts / ಗೋವುಗಳಿಗೆ ಪೂಜೆ ಸಲ್ಲಿಸಿ ಸರಕಾರವನ್ನು ಅಭಿನಂದಿಸಿ ಸಂಭ್ರಮ

ಗೋವುಗಳಿಗೆ ಪೂಜೆ ಸಲ್ಲಿಸಿ ಸರಕಾರವನ್ನು ಅಭಿನಂದಿಸಿ ಸಂಭ್ರಮ

Spread the love

ಗೋಶಾಲೆಯ ಗೋವುಗಳಿಗೆ ಪೂಜೆ,ಸಂಭ್ರಮ

ಮೂಡಲಗಿ: ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಹಿನ್ನೆಲೆಯಲ್ಲಿ ಅರಭಾಂವಿ ಮಂಡಲ ಬಿಜೆಪಿ ಹಾಗೂ ವಿಶ್ವ ಹಿಂದು ಪರಷತ್ ವತಿಯಿಂದ ಇಲ್ಲಿಯ ಶ್ರೀ ಶಿವಬೋಧರಂಗ ಮಠದ ಆವರಣದಲ್ಲಿರುವ ಗೋಶಾಲೆಯ ಗೋವುಗಳಿಗೆ ಪೂಜೆ ಸಲ್ಲಿಸಿ ಸರಕಾರವನ್ನು ಅಭಿನಂದಿಸಿ ಸಂಭ್ರಮಿಸಿದರು
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತನ ತಾಲೂಕಾ ಅಧ್ಯಕ್ಷ ಪ್ರಕಾಶ ಮಾದರ ಮಾತನಾಡಿ, ಈ ಹಿಂದೆ ಬಿಜೆಪಿ ಸರಕಾರ ಮಾಡಿದ್ದ ಮಸೂಧೆಯನ್ನು ಕಾಂಗ್ರೇಸ ಸರಕಾರ ತಗೆದು ಹಾಕಿತ್ತು ಈಗ ಮತ್ತೆ ಬಿಜೆಪಿ ಸರಕಾರ ಅಂಗೀಕಾರ ಮಾಡಿದ ಕಾರ್ಯ ಸ್ವಾಗತಾರ್ಹವಾಗಿದೆ ಎಂದರು.
ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಮಾತನಾಡಿ,ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು ಸಾಮಾನ್ಯ ಕಾರ್ಯಕರ್ತರಿಗೂ ಇಲ್ಲಿ ಬೆಲೆ ಇದೆ ಗೋಹತ್ಯೆ ನಿಷೇಧದಿಂದ ಗೋಮಾತೆಗೆ ರಕ್ಷಣೆ ನೀಡಿದಂತಾಗಿದೆ ಸರಕಾರ ಎಲ್ಲರು ಅಭಿನಂದಿಸುವಂvಹÀ ಕಾರ್ಯ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಲಿಂಗಾಯತ ತಾಲೂಕಾ ಅಧ್ಯಕ್ಷ ಬಸಗೌಡ ಪಾಟೀಲ,ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಈರಣ್ಣ ಅಂಗಡಿ, ಬಿಜೆಪಿ ದಲಿತ ಮುಖಂಡ ಶಿವಬಸು ಬಂಡಿವಡ್ಡರ ಕಾರ್ಯಕರ್ತರಾದ ಚೇತನ ನಿಶಾನಿಮಠ, ಈಶ್ವರ ಮುರಗೋಡ, ಕೇದಾರಿ ಭಸ್ಮೆ, ಜಗದೀಶ ತೇಲಿ, ಪಾಂಡು ಮಹೇಂದ್ರಕರ, ಎಸ್ ಟಿ ಮೋರ್ಚಾ ಅಧ್ಯಕ್ಷ ಯಲ್ಲಾಲಿಂಗ ವಾಳದ, ಮಲ್ಲಪ್ಪ ನೇಮಗೌಡ್ರ, ಸದಾಶಿವ ನಿಡಗುಂದಿ, ತಮ್ಮಣ್ಣ ನಾಗನ್ನವರ, ಗಿರೀಶ ನಾಗರೆ, ಕಾರ್ತಿಕ ನಾಗನ್ನವರ ಇನ್ನಿತರರು ಇದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ