Breaking News
Home / Recent Posts / ಮೂಡಲಗಿ ಲಯನ್ಸ್ ಪರಿವಾರದಿಂದ ಉಚಿತ ಯೋಗ ಶಿಬಿರ ‘ರೋಗಗಳ ಮುಕ್ತಿಗೆ ಯೋಗಾಭ್ಯಾಸ ಅವಶ್ಯ’

ಮೂಡಲಗಿ ಲಯನ್ಸ್ ಪರಿವಾರದಿಂದ ಉಚಿತ ಯೋಗ ಶಿಬಿರ ‘ರೋಗಗಳ ಮುಕ್ತಿಗೆ ಯೋಗಾಭ್ಯಾಸ ಅವಶ್ಯ’

Spread the love

ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ಆತಿಥ್ಯದಲ್ಲಿ ಏರ್ಪಡಿಸಿದ್ದ ಉಚಿತ 5 ದಿನಗಳ ಬಸವ ಚೈತನ್ಯ ಯೋಗ ಶಿಬಿರವನ್ನು ಉದ್ಘಾಟಿಸಿದರು .

ಮೂಡಲಗಿ ಲಯನ್ಸ್ ಪರಿವಾರದಿಂದ ಉಚಿತ ಯೋಗ ಶಿಬಿರ
‘ರೋಗಗಳ ಮುಕ್ತಿಗೆ ಯೋಗಾಭ್ಯಾಸ ಅವಶ್ಯ’

ಮೂಡಲಗಿ: ‘ಒತ್ತಡಗಳಿಂದ ಮುಕ್ತರಾಗಿ ಜೀವನದಲ್ಲಿ ಉತ್ಸಾಹ ಮತ್ತು ಲವಲವಿಕೆಯಿಂದ ಇರಲು ಪ್ರತಿ ನಿತ್ಯ ಯೋಗಾಭ್ಯಾಸ ಅವಶ್ಯವಿದೆ’ ಎಂದು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಲಹೆಗಾರ ಚನ್ನಬಸವ ಗುರೂಜಿ ಹೇಳಿದರು.
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಮಹಾಲಿಂಗಪೂರದ ಮೈಂಡ್ ಸೈನ್ಸ್ ಫೌಂಡೇಶನ್ ಇವರ ಸಹಯೋಗದಲ್ಲಿ ಶಿವಬೋಧರಂಗ ಕೋ.ಆಫ್. ಸೊಸೈಟಿ ಸಭಾಭವನದಲ್ಲಿ ಏರ್ಪಡಿಸಿದ್ದ 5 ದಿನಗಳ ಉಚಿತ ಬಸವ ಚೈತನ್ಯ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಯೋಗಾಭ್ಯಾಸದಿಂದ ರೋಗಗಳಿಂದ ಮುಕ್ತಿಪಡೆಯಲು ಸಾಧ್ಯ ಎಂದರು.
ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮಾನಸಿಕ ಒತ್ತಡ, ಉದ್ವೇಗತೆ, ಖಿನ್ನತೆ ಮತ್ತು ರೋಗ ನಿರೋಧಕ ಶಕ್ತಿಯ ಕ್ಷೀಣತೆ ಹೀಗೆ ಮನುಷ್ಯನು ಸಾಮಾನ್ಯವಾಗಿ ಬಳಲುತ್ತಿದ್ದು, ದೇಹ, ಮನಸ್ಸು ಮತ್ತು ಉಸಿರಾಟ ಇವುಗಳ ಚಲನಗಳ ಮೂಲಕ ಎಲ್ಲ ಕಾಯಿಲೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ದೈಹಿಕ ಮತ್ತು ಮಾನಸಿಕ ಸ್ಥಿತಿ ಉತ್ತಮಗೊಳ್ಳುವುದು ಎಂದರು.
ಮನುಷ್ಯನಿಗೆ ತನ್ನ ಸಾಧನೆಯ ದಾರಿಯಲ್ಲಿ ಸಾಕಷ್ಟು ಕಷ್ಟ, ನೋವುಗಳು ಎದುರಾಗುತ್ತವೆ. ಅವಮಾನ ಮತ್ತು ಅನುಮಾನ ಎದುರಿಸುವವರು ಮುಂದೊಂದು ದಿನ ಸನ್ಮಾನ, ಗೌರವಕ್ಕೆ ಪಾತ್ರರಾಗಬಹುದು. ಚಲನಶೀಲರಾಗಿ ಬದುಕುವುದನ್ನು ಕಲಿಯಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಲಯನ್ಸ್ ಕ್ಲಬ್ ಪರಿವಾರದ ಅಧ್ಯಕ್ಷ ಪುಲಕೇಶ ಸೋನವಾಲಕರ ಮಾತನಾಡಿ ಉತ್ತಮ ಆರೋಗ್ಯಕ್ಕಾಗಿ ಯೋಗ ಅವಶ್ಯವಿದೆ. ಶಿಬಿರಾರ್ಥಿಗಳು ಶಿಬಿರದ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಲಯನ್ಸ್ ವಿಭಾಗೀಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಂಜಯ ಮೋಕಾಶಿ ವೇದಿಕೆಯಲ್ಲಿದ್ದರು.
ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು.
ಆರ್.ಪಿ. ಸೋನವಾಲಕರ,  ಡಾ. ಪ್ರಕಾಶ ನಿಡಗುಂದಿ, ಡಾ. ಎಸ್.ಎಸ್. ಪಾಟೀಲ,ಮಲ್ಲಿನಾಥ ಶೆಟ್ಟಿ,  ಈರಣ್ಣ ಕೊಣ್ಣೂರ, ಶ್ರೀಶೈಲ್ ಲೋಕನ್ನವರ, ಉಮೇಶ ಬೆಳಕೂಡ, ಡಾ. ಸಂಜಯ ಶಿಂಧಿಹಟ್ಟಿ, ಪಂಚಯ್ಯ ಹಿರೇಮಠ, ಮಹಾವೀರ ಸಲ್ಲಾಗೋಳ, ಸುರೇಶ ನಾವಿ, ಮಹಾಂತೇಶ ಹೊಸೂರ, ಶಿವಾನಂದ ಗಾಡವಿ, ವೆಂಕಟೇಶ ಬಡಿಗೇರ, ಆರ್.ಎಸ್. ಕಬ್ಬೂರ, ವಿ.ಪಿ. ಕಲಾಲ, ಎಚ್.ಎಸ್. ನಾಯ್ಕ್, ಪಿ.ಪಿ. ಕಡಾಡಿ, ಜೆ.ಎಸ್. ಕೋಪರ್ಡೆ, ಆರ್.ಪಿ. ಭರಮನಾಯ್ಕ, ಜೆ.ಎಸ್. ಕೋಪರ್ಡೆ, ಆರ್.ಎಸ್. ಕಬ್ಬೂರ, ಗೀತಾ ಕರಗಣ್ಣಿ, ಮೈತ್ರಾ ಜಿ. ಮುಕ್ಕನ್ನವರ, ಎ.ಜಿ. ಕಂಕಣವಾಡಿ, ಎಂ.ಎಂ. ಹಂದಿಗುಂದ ಸೇರಿದಂತೆ 60ಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಶಿಬಿರದಲ್ಲಿ ಭಾಗವಹಿಸಿದ್ದರು.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ