Breaking News
Home / ಬೆಳಗಾವಿ / Ragging ವಿರೋಧಿ ಕಾಯ್ದೆ ಹಾಗೂ Ragging ವಿರೋಧಿ ಮಾರ್ಗಸೂಚಿಗಳ ಅರಿವು ಅಗತ್ಯ – ನಾಗಪ್ಪ  ಒಡೆಯರ

Ragging ವಿರೋಧಿ ಕಾಯ್ದೆ ಹಾಗೂ Ragging ವಿರೋಧಿ ಮಾರ್ಗಸೂಚಿಗಳ ಅರಿವು ಅಗತ್ಯ – ನಾಗಪ್ಪ  ಒಡೆಯರ

Spread the love

 

ಮೂಡಲಗಿ :    Ragging ನಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದು ಕಾನೂನು ಬಾಹಿರ ಚಟುವಟಿಕೆಯಾಗಿದ್ದು  Ragging ಪ್ರವೃತ್ತಿಯಿಂದ ವಿದ್ಯಾರ್ಥಿಗಳು ಬದಲಾಗಬೇಕು ಇಂದು ಅಧ್ಯಯನದ ಬದಲಾಗಿ ವಿದ್ಯಾರ್ಥಿಗಳ ಕಾಲೇಜು ಅವಧಿಗಳಲ್ಲಿ ತಮ್ಮ ಕೆಳದರ್ಜೆ ವಿದ್ಯಾರ್ಥಿಗಳ ಮೇಲೆ  Ragging ಚಟುವಟಿಕೆಯಲ್ಲಿ ತೊಡಗಿ ಸಾಮಾಜಿಕ ಅಪರಾಧಕೃತ್ಯಗಳಲ್ಲಿ ಕಾರಣವಾಗುತ್ತಿದ್ದಾರೆ ಇದರಿಂದ ತಮ್ಮ ಅಮೂಲ್ಯವಾದ ಜೀವನವನ್ನು  Ragging ಚಟುವಟಿಕೆ ಯಿಂದ ಹಾಳುಮಾಡಿಕೊಂಡು ಇನ್ನೂಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ಹಾಳುಮಾಡುತಿರುವುದು ಸರ್ವೇಸಾಮನ್ಯವಾಗಿದೆ. ಮತ್ತು Ragging ಚಟುವಟಿಕೆ ವಿದ್ಯಾರ್ಥಿಗಳ ಮಾರಣಾಂತಿಕ ಸ್ವರೂಪಕ್ಕೆ ಕಾರಣವಾಗುತ್ತಿದ್ದು. ವಿದ್ಯಾರ್ಥಿಗಳು Ragging  ಪ್ರವೃತ್ತಿಯಿಂದ ದೂರವಿದ್ದು ತಮ್ಮ ಜೀವನವನ್ನು ಗುರುವಿನ ಮಾರ್ಗದರ್ಶನದಂತೆ ರೂಪಿಸಿಕೊಳ್ಳುವುದು ಅವಶ್ಯವಿದೆ ಎಂದು ಮೂಡಲಗಿ ಪೋಲಿಸ್ ಠಾಣೆಯ ಹಿರಿಯ ಪೇದೆ ನಾಗಪ್ಪ ಒಡೆಯರ ಹೇಳಿದರು.
ಅವರು ಸ್ಥಳೀಯ ಆರ್.ಡಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ  Ragging ವಿರೋಧಿ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ Ragging  ವಿರೋಧಿ ಕಾಯ್ದೆ ಹಾಗೂ Ragging  ವಿರೋಧಿ ಮಾರ್ಗಸೂಚಿ ಬಗ್ಗೆ ಅಭಿಪ್ರಾಯಗಳನ್ನು ಆಭಿವ್ಯಕ್ತಪಡಿಸುತ್ತಾ Ragging   ಮಾಡುವವರ ವಿರುದ್ದ ಕಾನೂನುಗಳಲ್ಲಿ ಉಗ್ರಶಿಕ್ಷೆ ಇದ್ದು ಮಹಿಳೆಯರನ್ನು ಚುಡಾಯಿಸುವುದು, ಅಸಭ್ಯವಾಗಿ ತಮ್ಮ ಸಹಪಾಠಿಗಳನ್ನು ನಿಂದಿಸುವುದು ಮತ್ತು ಕಾಲೇಜು ವಾತಾವರಣದಲ್ಲಿ ಅಸಭ್ಯವಾಗಿ ವರ್ತಿಸುವುದು ಇನ್ನಿತರ ಅಸಭ್ಯ ವರ್ತನೆಗಳಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಸತ್ಯಪ್ಪ ಗೋಟೂರ ವಹಿಸಿಕೊಂಡು ಮಾತನಾಡುತ್ತಾ ವಿದ್ಯಾರ್ಥಿಗಳು Ragging  ಚಟುವಟಿಕೆ ಅವರ ಬದುಕನ್ನು ನಾಶಮಾಡುತ್ತಿದೆ ಅದರಿಂದ ಎಚ್ಚರವಹಿಸಿ ತಮ್ಮ ವಿಷಯ ಅಧ್ಯಯನ ಕಡೆ ಹೆಚ್ಚು ಗಮನ ಕೊಡಬೇಕು ಇಂದು ಸಾಮಾಜಿಕ ವ್ಯವಸ್ಥೆಯಲ್ಲಿ ಅಳವಡಿಕೆಯಾದ ಮೊಬೈಲ್ ಮತ್ತು ಟಿ ವಿ. ಮಾಧ್ಯಮಗಳಿಂದ ಪ್ರಸಾರವಾಗುವ ಅಶ್ಲೀಲ ಸಂಭಾಷಣೆ ಮತೂ ದೃಶ್ಯಗಳನ್ನು ಗಮನಿಸಿ ಅದರಂತೆ ವಿದ್ಯಾರ್ಥಿಗಳನ್ನು ಚುಡಾಯಿಸುವುದು ಸರ್ವೇಸಾಮಾನ್ಯವಾಗಿದೆ ಇದರ ಬಗ್ಗೆ ವಿದ್ಯಾರ್ಥಿಗಳು ತಿಳಿವಳಿಕೆ ಹೊಂದಿ ತಪ್ಪು ಚಟುವಟಿಕೆಗಳಿಂದ ದೂರ ಇರಬೇಕೆಂದರು.
ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕರಾದ ಗೀತಾ ಹಿರೇಮಠ, ಸಂಜೀವ ಮಂಟೂರ, ಡಾ.ಪ್ರಶಾಂತ ಮಾವರಕರ, ಸುನೀಲ ಸತ್ತಿ, ರಶ್ಮೀ ಕಳ್ಳಿಮನಿ, ಕವಿತಾ ಸಿದ್ದಾಪೂರ, ಮತ್ತಿತರರು ಭಾಗವಹಿಸಿದ್ದರು.
ಉಪನ್ಯಾಸಕ ಮಲ್ಲಪ್ಪ ಪಾಟೀಲ ನಿರೂಪಿಸಿದರು ಉಪನ್ಯಾಸಕಿ ರೋಹಿಣಿ ಕಾಂಬಳೆ ಸ್ವಾಗತಿಸಿದರು, ರಾಜು ಪತ್ತಾರ ವಂದಿಸಿದರು.


Spread the love

About inmudalgi

Check Also

ಸಂಪನ್ಮೂಲ ವಿದ್ಯಾರ್ಥಿಗಳು ನವಸಮಾಜದ ಕಣ್ಣುಗಳು ಇದ್ದಂತೆ- ಎಸ್. ಎನ್. ಕುಂಬಾರ

Spread the loveಮೂಡಲಗಿ : ಸಂಪನ್ಮೂಲ ವಿದ್ಯಾರ್ಥಿಗಳು ನವಸಮಾಜದ ಕಣ್ಣುಗಳು ಇದ್ದಂತೆ ಮತ್ತು ವಿದ್ಯಾರ್ಥಿಗಳು ಸೃಜನಶೀಲ ಸಂಪನ್ಮೂಲ ಕೌಶಲ್ಯಗಳನ್ನು ಹೊಂದುವದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ