Breaking News
Home / Recent Posts / ಬನವಾಸಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶೇ.79.13ರಷ್ಟು ಮತದಾನ

ಬನವಾಸಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶೇ.79.13ರಷ್ಟು ಮತದಾನ

Spread the love

ಬನವಾಸಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶೇ.79.13ರಷ್ಟು ಮತದಾನ

ಬನವಾಸಿ: ಬನವಾಸಿ ಗ್ರಾಮ ಪಂಚಾಯತ್‍ನ 5 ವಾರ್ಡ್‍ಗಳ 18ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆಯಿತು. ಪಟ್ಟಣದಲ್ಲಿ ಒಟ್ಟು 5597 ಮತದಾರರಲ್ಲಿ 4429 ಮತದಾರರು ಮತ ಚಲಾಯಿಸಿದ್ದು ಶೇ 79.13ರಷ್ಟು ಮತದಾನವಾಗಿದೆ.
ಮುಂಜಾನೆ 7 ಕ್ಕೆ 7 ಬೂತ್‍ಗಳಲ್ಲಿ ಪ್ರಾರಂಭವಾದ ಮತದಾನವೂ ಆರಂಭದಲ್ಲಿಯೇ ಚುರುಕುಗೊಂಡು ಮಧ್ಯಾಹ್ನದ ಹೊತ್ತಿಗೆ ಮಂದಗತಿಯಲ್ಲಿ ಸಾಗಿ ಮಧ್ಯಾಹನದ ನಂತರ ವೇಗ ಪಡೆಯಿತು. ಮತದಾರು ಸರತಿಸಾಲಿನಲ್ಲಿ ನಿಂತು ಮತದಾನದ ಹಕ್ಕು ಚಲಾಯಿಸಿದರು. ಮೊದಲ ಬಾರಿ ಮತ ಚಲಾಯಿಸಲೂ ಬಂದ ಯುವ ಮತದಾರರು ಸರದಿ ಸಾಲಿನಲ್ಲಿ ಉತ್ಸಾಹದಿಂದ ಮತಚಲಾಯಿಸಿದರು. ವಯೋವೃದ್ದರು, ಅಂಗವಿಕಲರು ಕುಟುಂಬದವರ ನೆರವಿನಿಂದ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದರು.
ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಯಲ್ಲ. ಸಿಪಿಐ ಬಿ.ಯು. ಪ್ರದೀಪ ಮಾರ್ಗದರ್ಶನದಲ್ಲಿ ಪಿಎಸ್‍ಐ ಮಹಾಂತೇಶ, ಅಬಕಾರಿ ನಿರೀಕ್ಷಕಿ ಜ್ಯೋತಿಶ್ರೀ ನಾಯ್ಕ್ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ ಒದಗಿಸಲಾಗಿತ್ತು. ಚುನಾವಣಾ ಅಧಿಕಾರಿ ದತ್ತಾತ್ರೇಯ ಭಟ್ಟ, ಮಹೇಶ ಕುಮಾರ ಮತದಾನ ಸುಸಜ್ಜಿತವಾಗಿ ನಡೆಯಲು ಕ್ರಮ ಕೈಗೊಂಡಿದ್ದರು. ಗ್ರಾಮ ಪಂಚಾಯತ್ ಪಿಡಿಓ ಮಮತಾ ನಾಯ್ಕ್ ನೇತೃತ್ವದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಮತದಾನ ಕೇಂದ್ರಗಳಲ್ಲಿ ಕೋವಿಡ್ 19 ಸುರಕ್ಷತೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ಬನವಾಸಿ ಗ್ರಾಮ ಪಂಚಾಯತ್‍ನ 5 ವಾರ್ಡ್‍ಗಳಲ್ಲಿನ 69 ಅಭ್ಯರ್ಥಿಗಳ ಭವಿಷ್ಯ ಸಂಜೆ 5 ಗಂಟೆಗೆ ಮತಪೆಟ್ಟಿಗೆಯಲ್ಲಿ ಭದ್ರವಾಯಿತು.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ