ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ
ಯೋಜನೆಯಿಂದ ಅಂಗವೀಕಲರಿಗೆ ವ್ಹೀಲ ಚೇರ ವಿತರಣೆ
ಮೂಡಲಗಿ :ಪೂಜ್ಯ ವೀರೇಂದ್ರ ಹೆಗಡೆಯವರು ಕನಸಿನ ಗ್ರಾಮಿಣಾಭಿವೃದ್ದಿ ಸಂಸ್ಥೆಯು ಎಲ್ಲಾ ಕ್ಷೇತ್ರಗಳಲ್ಲಿಯೋ ಸಾಧನೆ ಮಾಡುತ್ತಿದೆ, ಮಹಿಳೆಯರ ಸಭಲಿಕರಣ, ಕೆರೆ ನಿರ್ಮಾನ, ಶೌಚಾಲಯಗಳ ನಿರ್ಮಾನ ಜೋತೆಗೆ ಪರಿಸರ ಕಾಳಜಿಯು ಅಪಾರವಾಗಿದೆ ಈ ಯೋಜನೆಗಳನ್ನು ನಾವುಗಳು ಸದುಪಯೋಗ ಪಡಿಸಿಕೋಳ್ಳಬೇಕು ಎಂದು ಮುನ್ಯಾಳ ಗ್ರಾಮ ಪಂಚಾಯಿತಿಯ ನೂತನ ಸದಸ್ಯ ಅಭಿಷೇಕ ನಾಯ್ಕ ಹೇಳಿದರು,
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಮೂಡಲಗಿ ತಾಲೂಕಿನ ಮುನ್ಯಾಳ ಗ್ರಾಮದ ಇಬ್ಬರು ಅಂಗವೀಕಲ ಹೆಣ್ಣು ಮಕ್ಕಳಾದ ಅಮೃತಾ ನಾಯ್ಕ ಹಾಗೂ ಸುನೀತಾ ಮೇಲಗಡೆ ಎಂಬ ವಿಕಲಚೇತನರಿಗೆ ವ್ಹೀಲ ಚೇರ ಉಚಿತವಾಗಿ ವಿತರಿಸಿ ಮಾತನಾಡಿದರು,
ಈ ಕಾರ್ಯಕ್ರಮದಲ್ಲಿ ಮೂಡಲಗಿ ವಲಯ ಮೇಲ್ವೀಚಾರಕಿ ಮಾನಸಿ ಪಾಟೀಲ್, ಶಿವಾನಂದ ಮಡಿವಾಳ, ಶಿವಾನಂದ ಸದಲಗಿ, ಹಣಮಂತ ಸನದಿ, ಒಕ್ಕೋಟದ ಅಧ್ಯಕ್ಷೆ ವಿದ್ಯಾ ಬಡಿಗೇರ, ಮಹಾದೇವಿ ಬಲ್ಲಾಮಸಿ, ಮಾಸವ್ವ ನಧಾಪ್ ಪದಾಧಿಕಾರಿಗಳು ಹಾಗೂ ಸೇವಾಪ್ರತಿನಿಧಿ ರೇಣುಕಾ ಸನದಿ ಉಪಸ್ಥಿತರಿದ್ದರು.