ಯಾದವಾಡ ಬಸವೇಶ್ವರ ವೃತ್ತದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ
ಕುಲಗೋಡ: ಸ್ವಾಮಿ ವಿವೇಕಾನಂದರು ಚಿಕ್ಕ ವಯಸ್ಸಿನಲ್ಲಿ ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದರು ಎಂದು ಪಿಡಿಓ ಎಮ್.ಎಮ್ ಹುಡೇದವರು ಹೇಳಿದರು.
ಇವರು ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣಾಭಿವೃದ್ದಿ ಸಂಸ್ಥೆಯ ವತಿಯಿಂದ ಶ್ರೀ ಸ್ವಾಮಿ ವಿವೇಕಾನಂದರ 158 ನೇ ಜನ್ಮ ದಿನಾಚರಣೆ ಆಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಎಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲಬೇಡಿ ಎಂದು ಘೋಷವಾಕ್ಯವನ್ನು ಹೊಂದಿದ ವಿವೇಕಾನಂದರು ಇಡೀ ವಿಶ್ವಕ್ಕೆ ಸಾರಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಹಾಂತೇಶ ಕತ್ತಿ. ಗೋವಿಂದ ಉದಪುಡಿ. ಗುರು ಬಳಿಗಾರ. ಹಣಮಂತ ಹಾವನ್ನವರ. ಬಸವರಾಜ ಭೂತಾಳಿ. ಎಸ್.ಬಿ ಮಂಟೂರ. ಎಸ್ ಆಯ್ ದಾಡಿಬಾವಿ. ಚೇತನ ತಕ್ಕಡಿ. ಪಿ.ಎಲ್. ಸೋನಾರ. ಕೆ.ಕೆ ಇಟ್ಟಣ್ಣವರ. ಎಮ್. ಆಯ್ ದಲಾಲ. ಎಮ್.ಎ ತಹಶಿಲ್ದಾರ. ವಿಶ್ವನಾಥ ಹುನಗುಂದ. ಸಿ.ಎಮ್ ಬಡೊಳ್ಳಿ. ಎಸ್.ಐ.ವಿಭೂತಿ. ಎಸ್.ಬಿ ಹೊಸಮನಿ. ಎ.ಎಮ್ ಯಾದವಾಡ. ಜೆ.ಎಸ್.ಅತ್ತಾರ. ಸ್ವಾಮಿ ವಿವೇಕಾನಂದ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.