ಮೂಡಲಗಿ: ರಾಸಾಯನಿಕ ವಸ್ತುಗಳ ಬಳಕೆಯ ಪ್ರಮಾಣ ಕಡಿಮೆ ಮಾಡಿ ನೈಸರ್ಗಿಕ ವಸ್ತುಗಳ ಮೂಲಕ ಸೌಂದರ್ಯವನ್ನು ವೃದ್ಧಿಸಬೇಕು ಸಿಡಾಕ್ ನಿರ್ದೇಶಕ ಡಾ|| ವೀರಣ್ಣ ಎಸ್.ಎಹ್ ಹೇಳಿದರು.
ತಾಲೂಕಿನ ಯಾದವಾಡ ದಾಲ್ಮಿಯಾ ಸಿಮೆಂಟ ಕಾರ್ಖಾನೆ(ದಾಲ್ಮಿಯಾ ಭಾರತ ಫೌಂಡೇಶನ್), ಬೆಂಗಳೂರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ ಇವರುಗಳ ಆಶ್ರಯದಲ್ಲಿ ಸೋನವಾರದಂದು ಉಚಿತ 30 ದಿನಗಳ ಕೌಶಲ್ಯ ಉದ್ಯೋಗ ಯೋಜನೆಯಡಿ ಹರ್ಬಲ್ ಕಾಸ್ಮೋಟೋಲಾಜಿ ಹಾಗೂ ಬ್ಯೂಟಿಶೀಯನ್ ಆಧಾರಿತ ಉದ್ಯಮ ಶೀಲತಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಬಿರಾರ್ಥಿಗಳು ತರಬೇತಿಯ ಸಮಯದಲ್ಲಿ ಏಕಚಿತ್ತವಾಗಿ ತರಬೇತಿಯನ್ನು ಪಡೆದುಕೊಂಡು ಸ್ವ-ಉದ್ಯೋಗಕ್ಕಾಗಿ ಹೆಚ್ಚಿನ ಆದ್ಯತೆ ನೀಡಬೇಕು ಎಂದÀರು.
ಮುಖ್ಯ ಅಥಿತಿ ಬೆಳಗಾವಿ ಕೆನರಾ ಬ್ಯಾಂಕಿನ ಜಿಲ್ಲಾ ಅಗ್ರಣೀಯ ವ್ಯವಸ್ಥಾಪಕ ರಾಹುಲ್.ವಿ ಮಾತನಾಡಿ,
ಶಿಭಿರಾರ್ಥಿಗಳು ತರಬೇತಿಯ ನಂತರ ಸ್ವ-ಉದ್ಯೋಗಕ್ಕಾಗಿ ಬ್ಯಾಂಕ್ ಸಾಲ ಸೌಲಭ್ಯವನ್ನು ಪಡೆದುಕೋಳ್ಳಬಹುದು ಎಂದ ಅವರು ಬ್ಯಾಂಕಿನಿಂದ ಸಾಲದ ಪ್ರಕ್ರಿಯೆಯನ್ನು ಮತ್ತು ಸಾಲ ಪಡೆಯಲು ಅವಶ್ಯಕತೆ ಇರುವ ದಾಖಲೆಗಳು ಮತ್ತು ಸಾಲ ಪಡೆಯಲು ಇರುವ ಅರ್ಹತೆಗಳ ಬಗ್ಗೆ ತಿಳಿಸಿದರು.
ಮುಖ್ಯ ಅಥಿತಿ ದಾಲ್ಮಿಯಾ ಸಿಮೆಂಟನ ಮಾನವ ಸಂಪನ್ಮೂಲ ಮತ್ತು ವಿಭಾಗೀಯ ಮುಖ್ಯಸ್ಥ ರಾಜೀವಕುಮಾರ ಜೋಶಿ ಮಾತನಾಡಿ, ಇಂದಿನ ಆಧುನಿಕ ಜಗತ್ತಿನ ಕೆಲಸದ ಮೇಲೆ ಆವಲಂಬನೆ ಆಗಬಾರದು ಮತ್ತು ಸ್ವ-ಉದ್ಯೋಗದಲ್ಲಿ ಹೆಚ್ಚಾಗಿ ತೊಡಗಬೇಕು ಹಾಗೂ ಸ್ವ-ಉದ್ಯೋಗದಲ್ಲಿ ನಾವೀನ್ಯತೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಸಿಡಾಕ್ ಜಂಟಿ ನಿರ್ದೇಶಕ ಬಿ.ಎಮ್.ಗೋಟೂರ ಮಾತನಾಡಿ, ಶಿಭಿರಾರ್ಥಿಗಳು 30 ದಿನಗಳ ಕಾಲ ಮಾತ್ರ ತರಬೇತಿ ಎಂದು ಭಾವಿಸಬಾರದು, 30 ದಿನಗಳ ತರಬೇತಿ ನಂತರ ಸ್ವ-ಉದ್ಯೋಗದಲ್ಲಿಯೂ ಕೂಡ ನಿರಂತರ ಕಲಿಕೆ ಇರುತ್ತೆದೆ ಎಂದರು.
ಪ್ರಾಸ್ತಾವಿಕವಾಗಿ ಗಿರೀಶ ಕುಲಕರ್ಣಿ ಮಾತನಾಡಿದರು, ದಾಲ್ಮಿಯಾ ಸಿಮೆಂಟ ಕಾರ್ಖಾನೆ ಕಾರ್ಯಕ್ರಮಾಧಿಕಾರಿ ಚೇತನ ವಾಘಮೋರೆ ನಿರೂಪಿಸಿದರು, ಅಶ್ವಿನಿ.ಬ. ಧಗಾಟೆ ಸ್ವಾಗತಿಸಿದರು, ತೇಜಸ್ವಿ ವಂದಿಸಿದರು.
