ಹಿಂದುಳಿದ ಜನರಿಗೆ ಸಹಾಯ ಮಾಡುವ ಸಹಕಾರಿಗಳ ಪಾತ್ರ ಮುಖ್ಯ-ಕಡಾಡಿ
ಮೂಡಲಗಿ: ರೈತರ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಸಂಘಗಳ ಪಾತ್ರ ಮುಖ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಹೇಳಿದರು.
ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಸೋಮವಾರ ಜ.18 ರಂದು ಶ್ರೀ ಸಿದ್ದೇಶ್ವರ ವಿವಿದೊದ್ದೇಶಗಳ ಸಹಕಾರಿ ಸಂಘದ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಹಕಾರಿಗಳು ವೈಯಕ್ತಿಕ ಬದುಕಿನ ಕಡೆಗೆ ಗಮನಹರಿಸದೆ ಸಹಕಾರಿ ಸಂಘಗಳ ಮೂಲಕ ಸಮಾಜದ ಋಣ ತೀರಿಸಬೇಕೆಂದರು.
ಆರ್ಥಿಕವಾಗಿ ಹಿಂದುಳಿದ ಜನರಿಗೆ ಸಹಾಯ ಮಾಡುವ ಮೂಲಕ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದ ಪಾತ್ರ ಮುಖ್ಯವಾಗಿದೆ ಎಂದರಲ್ಲದೇ ಸಹಕಾರಿ ಸಂಘಗಳ ಬೆಳವಣಿಗೆಗೆ ಶ್ರಮಿಸಬೇಕೆಂದರು. ಇದೇ ಸಂದರ್ಭದಲ್ಲಿ ಸಂಸ್ಥೆಯಿಂದ ರಾಜ್ಯಸಭಾ ಸದಸ್ಯರಾದ ಈರಣ ಕಡಾಡಿ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಸತೀಶ ಕಡಾಡಿ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಭೀಮಶಿ ಮಗದುಮ್ಮ, ಪಿ.ಕೆ.ಪಿ.ಎಸ್. ಮಾಜಿ ಅಧ್ಯಕ್ಷ ಹಣಮಂತ ತೇರದಾಳ, ಬಸಪ್ಪ ಸಂತಿ, ಸಿಡಿಒ ಬಿ.ಕೆ. ಗೋಖಲೆ ಸಂಸ್ಥೆಯ ಅಧ್ಯಕ್ಷ ಶ್ರೀಶೈಲ ಲೋಕನ್ನವರ, ಉಪಾಧ್ಯಕ್ಷ ನಾಗಪ್ಪ ಬಿಸನಾಳ, ನಿರ್ದೇಶಕರಾದ ಶ್ರೀಕಾಂತ ಕೌಜಲಗಿ, ಮಹಾಂತೇಶ ಸಂತಿ, ಗಿರೀಶ ಕುಲಗೋಡ, ಶಿವಪ್ಪ ಕೌಜಲಗಿ, ಭೀಮಶಿ ಡಬ್ಬನವರ, ಸೇರಿದಂತೆ ಸರ್ವಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಮೂಡಲಗಿ: ಹಳ್ಳೂರ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ವಿವಿದೊದ್ದೇಶಗಳ ಸಹಕಾರಿ ಸಂಘದ ನೂತನ ಸಂಸ್ಥೆಯನ್ನು ಉದ್ಘಾಟಿಸುತ್ತಿರುವ ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ, ಶ್ರೀಕಾಂತ ಕೌಜಲಗಿ, ಭೀಮಶಿ ಮಗದುಮ್ಮ, ಬಸಪ್ಪ ಸಂತಿ ಇತರರನ್ನು ಕಾಣಬಹುದು.