ಬೆಟಗೇರಿ:ಸಮೀಪದ ಬಿಲಕುಂದಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷದ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶನಿವಾರ ಜ.23 ರಂದು ಜರುಗಿದ ಚುನಾವಣೆಯಲ್ಲಿ ಸ್ಥಳೀಯ ಮುಖಂಡ ಶಿವಲಿಂಗಪ್ಪ ಬಳಿಗಾರ ಅವರ ಗುಂಪಿನ ಎರಡು ಸ್ಥಾನಗಳ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಶಿವಲಿಂಗಪ್ಪ ಮಲ್ಲಪ್ಪ ಬಳಿಗಾರ ಅವರು ಒಟ್ಟು 11 ಮತಗಳ ಪೈಕಿ 6 ಮತ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಸಿದ್ದ ಅಭ್ಯರ್ಥಿ ಗೋವಿಂದಪ್ಪ ಸಿದ್ದಪ್ಪ ಜೊತೆನ್ನವರ 6 ಮತಗಳನ್ನು ಪಡೆದು ಭರ್ಜರಿ ಗೇಲವು ಸಾಧಿಸಿದ್ದಾರೆ.
ಪ್ರತಿಸ್ಪರ್ಧಿಗಳಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಸುಜಾತಾ ಜೊತೆನ್ನವರ ಅವರು 4 ಮತ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಬಸಪ್ಪ ಸವದತ್ತಿ ಅವರು ಸಹ ಕೇವಲ 4 ಮತ ಪಡೆದು ಸೋಲು ಕಂಡಿದ್ದಾರೆ. ಒಂದು ಮತ ಕುಲಗೆಟ್ಟಿದೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಇಲಾಖೆಯ ಆನಂದ ಹೇರೆಕರ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕ ಆನಂದ ಬಳಿಗಾರ ತಿಳಿಸಿದ್ದಾರೆ.
ಸ್ಥಳೀಯ ಮುಖಂಡ ಶಿವಲಿಂಗಪ್ಪ ಬಳಿಗಾರ ಅವರ ಗುಂಪಿನ ಎರಡು ಸ್ಥಾನದ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ ಬಳಿಕ ಬೆಂಬಲಿಗರು, ಅಭಿಮಾನಿಗಳು ಒಬ್ಬರಿಗೂಬ್ಬರು ಗುಲಾಲ ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದ್ದಾರೆ.
