ಮೂಡಲಗಿ:ನವಭಾರತ ನಿರ್ಮಾಕ್ಕಾಗಿ ಮಹಿಳೆಯರ ಪಾತ್ರ ಮುಖ್ಯವಾಗಿದ್ದು, ಸರ್ಕಾರ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ ಎಂದು ಮೂಡಲಗಿ ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಚಂಪಾ ಸುಣಗಾರ ಕರೆ ನೀಡಿದರು.
ಕಲ್ಲೋಳಿ ಪಟ್ಟಣದ 421ರ ಅಂಗನವಾಡಿ ಕೇಂದ್ರದಲ್ಲಿ ರವಿವಾರ ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆಂದರು, ತಮ್ಮ ಕೆಲಸದಲ್ಲಿ ಪ್ರಾಮಾಣಿಕತೆಗೆ, ಸಮಯಕ್ಕೆ ಮಹತ್ವ ನೀಡಬೇಕು ಅಂಗನವಾಡಿ ಕಾರ್ಯಕರ್ತರಿಗೆ ಕರೆ ನೀಡಿದರು.ಈ ಸಂದರ್ಭದಲ್ಲಿ ಭಾಗ್ಯಲಕ್ಷೀ ಬಾಂಡ ವಿತರಿಸಿದರು, ಬಾಲಕಿಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರಾದ ಶಿಲ್ಪಾ ಸೊಮನಟ್ಟಿ, ಅವ್ವಕ್ಕ ಬಡಿಗೇರ, ಲಕ್ಷ್ಮೀ ಕಂಕನವಾಡಿ, ರತ್ನಾ ಪಾಟೀಲ, ಲಕ್ಷ್ಮೀ ಮಾಯನ್ನವರ, ಸತ್ಯೇವ್ವ ನಿಪನ್ಯಾಳ ಸೇರಿದಂತೆ ಅನೇಕ ಮಕ್ಕಳ ತಾಯಂದಿರು, ಪಾಲಕರು ಉಪಸ್ಥಿತರಿದ್ದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …