ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಮೂಡಲಗಿ ಕೇಂದ್ರ ಹಾಗೂ ಕೌಜಲಗಿ ವಲಯದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ ಸೋಮವಾರ.25 ರಂದು ನಡೆಯಿತು.
ಮೂಡಲಗಿ ಕೇಂದ್ರದ ಶ್ರೀಕ್ಷೇಧಗ್ರಾಯೋ ಬಿಸಿ ಟ್ರಸ್ಟ್ ಯೋಜನಾಧಿಕಾರಿ ದೇವರಾಜ್ ಎಂ., ಜಿಲ್ಲಾ ಎನ್.ಆರ್.ಎಲ್.ಎಂ ಸಮನ್ವಯ ಅಧಿಕಾರಿ ಸತೀಶ್ ಎಸ್. ಅವರು ಶ್ರೀಕ್ಷೇಧಗ್ರಾ ವಿವಿಧ ಯೋಜನೆಗಳಿಂದ ದೊರಕುವ ಸಹಾಯ, ಸೌಲಭ್ಯಗಳ ಕುರಿತು ಹಾಗೂ ಒಕ್ಕೂಟ ಪದಾಧಿಕಾರಿಗಳ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳು ನಿರ್ವಹಿಸಬೇಕಾದ ಜವಾಬ್ದಾರಿಗಳ ಮಾಹಿತಿ ನೀಡಿದರು.
ಶ್ರೀಕ್ಷೇಧಗ್ರಾಯೋ ಕೌಜಲಗಿ ವಲಯದ ಮೇಲ್ವಿಚಾರಕ ಬಾಬುರಾವ್ ಗೋಣಿ, ಮಧು ತಲ್ಲೂರ, ಬಸವರಾಜ ಕರಿಗಾರ ಸೇರಿದಂತೆ ಕೌಜಲಗಿ ವಲಯ ವ್ಯಾಪ್ತಿಯ ಎಲ್ಲಾ ಒಕ್ಕೂಟದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳು, ಸದಸ್ಯರು, ಸೇವಾ ಪ್ರತಿನಿಧಿಗಳು, ಗ್ರಾಮಸ್ಥರು ಇದ್ದರು.
