ಮೂಡಲಗಿ: ನಮ್ಮ ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸಿ ಕಟಿಬದ್ಧವಾಗಿ ಪಾಲಿಸುವುದೇ ದೇಶಕ್ಕೆ ಮತ್ತು ಸಂವಿಧಾನ ರಚನಾಕಾರರಿಗೆ ಸಲ್ಲಿಸುವ ಶ್ರೇಷ್ಠ ಗೌರವ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.
ಕಲ್ಲೋಳಿ ಪಟ್ಟಣದಲ್ಲಿ ಮಂಗಳವಾರ ಜ.26 ರಂದು ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ನಿ. ಆಡಳಿತ ಕಛೇರಿಯಲ್ಲಿ ಭಾರತ ಮಾತೆ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡಿದೆ, ಜಾತಿ, ಮತ, ಪಂಥಗಳ ಭೇದ ತೊರೆದು ಭಾರತೀಯ ಎನ್ನುವ ತತ್ವದಡಿ ದೇಶದಲ್ಲಿ ಸಾಮರಸ್ಯ ಮೂಡಿಸಬೇಕಾಗಿದೆ. ಅದೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರಿಗೆ ನೀಡುವ ಅತಿದೊಡ್ಡ ಗೌರವವಾಗಿದೆ ಎಂದರು. ಶ್ರೀ ಮಹಾಲಕ್ಷ್ಮೀ ಪಿ.ಕೆ.ಪಿ.ಎಸ್, ಕಲ್ಲೋಳಿ ಹಾಲು ಉತ್ಪಾಧಕರ ಸಹಕಾರಿ ಸಂಘ, ಸೇವಾ ಸಂಸ್ಥೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿದರು.
ಸಹಕಾರಿ ನಿರ್ದೇಶಕರಾದ ಶ್ರೀಶೈಲ ತುಪ್ಪದ, ಬಾಳಪ್ಪ ಸಂಗಟಿ, ಶಿವಗೊಂಡ ವ್ಯಾಪಾರಿ, ರಾಜಪ್ಪ ಗೋಸಬಾಳ, ಪರಪ್ಪ ಮಳವಾಡ, ಪ್ರಭು ಕಡಾಡಿ, ಹಣಮಂತ ಸಂಗಟಿ, ಅಡಿವೆಪ್ಪ ಕುರಬೇಟ, ತುಕಾರಾಮ ಪಾಲ್ಕಿ, ಮಲ್ಲಪ್ಪ ಹೆಬ್ಬಾಳ, ಗುರುನಾಥ ಮಧಬಾಂವಿ, ಪ್ರಧಾನ ವ್ಯವಸ್ಥಾಪಕ ಹಣಮಂತ ಕಲಕುಟ್ರಿ, ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ, ಶಿವಾನಂದ ಬಡಿಗೇರ, ದೊಡ್ಡಪ್ಪ ಉಜ್ಜಿನಕೊಪ್ಪ ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರೂ ಉಪಸ್ಥಿತರಿದ್ದರು.