Breaking News
Home / Recent Posts / ಲಿಂಗಾಯತ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ 2ಎ ಮೀಸಲಾತಿ ನೀಡಬೇಕೆಂದು – ಮೂಡಲಗಿ ತಾಲೂಕಾ ಪಂಚಮಸಾಲಿ ಸಮೀತಿಯಿಂದ ಆಗ್ರಹ

ಲಿಂಗಾಯತ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ 2ಎ ಮೀಸಲಾತಿ ನೀಡಬೇಕೆಂದು – ಮೂಡಲಗಿ ತಾಲೂಕಾ ಪಂಚಮಸಾಲಿ ಸಮೀತಿಯಿಂದ ಆಗ್ರಹ

Spread the love

ಲಿಂಗಾಯತ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ 2ಎ ಮೀಸಲಾತಿ ನೀಡಬೇಕೆಂದು – ಮೂಡಲಗಿ ತಾಲೂಕಾ ಪಂಚಮಸಾಲಿ ಸಮೀತಿಯಿಂದ ಆಗ್ರಹ

ಮೂಡಲಗಿ: ಲಿಂಗಾಯತ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ 2ಎ ಮೀಸಲಾತಿ ನೀಡಬೇಕೆಂದು ಬುಧವಾರದಂದು ಮೂಡಲಗಿ ತಾಳೂಕಾ ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮೀತಿಯಿಂದ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮಾನವ ಸರ್ಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟಿಸಿ, ಕೆಲ ಸಮಯಗಳ ಕಾಲ ರಸ್ತೆ ಬಂದ್ ಮಾಡಿ ಸ್ಥಳೀಯ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ಆಲಗೂರ ಮಠದ ಶ್ರೀಶಾಂತಮೂರ್ತಿ ಧರಿದೇವರ ಮಾತನಾಡಿ, ಕಾರ್ನಾಟಕ ರಾಜ್ಯದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜವು ಬಹುಸಂಖ್ಯಾತ ಸಮಾಜವಾಗಿದೆ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮಾಜವಾಗಿದೆ ಆದರಿಂದ ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾಗಿತಿ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
2ಎ ಮೀಸಲಾತಿಗಾಗಿ 20 ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದೇವೆ, ಆದರೆ ಯಾವುದೇ ಸರ್ಕಾರ ಮಾತ್ರ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ, ಸಹೋದರ ಸಮಾಜಗಳು ಸಂಘಟಿತರಾಗಿ ಸರ್ಕಾರದ ಮೇಲೆ ಒತ್ತಡ ಹಾಕಿ ಮೀಸಲಾತಿ ಪಡೆದಿದ್ದರಿಂದ ನಾವು ಹೋರಾಟಕ್ಕೆ ಇಳಿದಿದ್ದೇವೆ ಅದರಂತೆ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಆದರಿಂದ ರಾಜ್ಯದ ಪಂಚಮಸಾಲಿ ಸಮುದಾಯದ ಜನರು ಪಾದಯಾತ್ರೆ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಇದನ್ನು ಅರಿತು ಸಿಎಂ ಅವರು ಶೀಘ್ರವಾಗಿ 2ಎ ಮೀಸಲಾತಿಯನ್ನು ಘೋಷಿಸಬೇಕೆಂದು ಹೇಳಿದರು.
ಸಮೀತಿಯ ಜಿಲ್ಲಾ ಕಾರ್ಯದರ್ಶಿ ರವಿ ಮಾಹಾಲಿಂಗಪೂರ ಮಾತನಾಡಿ, ನಾವು ನಮಗಾಗಿ ಹೋರಾಟ ಮಾಡುತ್ತಿಲ್ಲ, ನಮ್ಮ ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿಯ ಹಕ್ಕೊತ್ತಾಯ ಮಂಡಿಸುತ್ತಿದ್ದೇವೆ. ಪಂಚಮಸಾಲಿ ಸಮುದಾಯದ ಜನರಿಗೆ ಸರಕಾರಿ ಸೌಲಭ್ಯಗಳು ಸಿಗುತ್ತಲ್ಲ, ನಮ್ಮ ಸಮಾಜದ ಉಳವಿಗಾಗಿ ಇಂದು ರಾಜ್ಯದ ಪಂಚಮಸಾಲಿ ಸಮುದಾಯದ ಜನರು ಬೀದಿಗಿಳಿದು ಹೋರಾಟ ಮಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಸಿಎಂ ಯಡಿಯೂರಪ್ಪನವರೇ ನೀವು ಪಂಚಮಸಾಲಿ ಸಮಾಜದ ಮೇಲೆ ಅಭಿಮಾನ ಇದೆ ಅಂತ ಹೇಳಿದ್ರಿ ಆದರೆ ಇಂದು ನಮ್ಮ ಸಮಾಜದ ಶ್ರೀಗಳನ್ನು 300ಕಿಲೋ ಮೀಟರ್ ನಡೆಯೋ ಹಾಗೆ ಮಾಡಿದ್ದೀರಾ ಅವರು ಇಡುವ ಪ್ರತಿಯೊಂದು ಹೆಜ್ಜೆಯೂ ನಿಮಗೆ ಶಾಪವಾಗಿ ನಿಮ್ಮ ಸರ್ಕಾರಕ್ಕೆ ಕುತ್ತು ಬರುತ್ತದೆ ಎಂದು ಸರ್ಕಾರದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಸಮೀತಿಯ ತಾಲೂಕಾ ಅಧ್ಯಕ್ಷ ಬಸವರಾಜ ಪಾಟೀಲ ನೇತೃತ್ವದಲ್ಲಿ ತಾಲೂಕಿನ ಹಳ್ಳೂರ, ಶಿವಾಪೂರ(ಹ), ಖಾನಟ್ಟಿ, ಮುನ್ಯಾಳ, ನಾಗನೂರ ಕಲ್ಲೋಳಿ, ಹುಣಶ್ಯಾಳ, ಕಮಲದಿನ್ನಿ, ಪಟಗುಂದಿ ಇನ್ನೂ ಅನೇಕ ಗ್ರಾಮಗಳಿಂದ ಸಮಾಜದ ಮುಖಂಡರು ಭಾಗವಹಿಸಿದ್ದರು. ಕಿತ್ತೂರ ರಾಣಿ ಚೆನ್ನಮ್ಮನ ವೇಷದಾರಿಯಾಗಿ ರೇಖಾ ಶೇಗುಣಸಿ ಹಾಗೂ ಮೈಮೇಲೆ ಬಣದಿಂದ ಹೋರಾಟದ ಬಗ್ಗೆ ಬರೆದುಕೊಂಡ ಸುರೇಶ ಬೆಳವಿ ಉಪಸ್ಥಿತರಿದ್ದರು.

 : ಶ್ರೀ ಬಸವಜಯ ಮೃತ್ಯುಂಜಯ ಶ್ರೀಗಳು ಚಿತ್ರದುರ್ಗದಿಂದ ಬಾರಕೋಲ ಚಳವಳಿ ಮಾಡಲು ನಿರ್ಧರಿಸಿದ್ದಾರೆ. ಆ ಚಳುವಳಿಯಿಂದ ಹೋರಾಟ ಉಗ್ರ ಸ್ವರೂಪವಾಗಿ ನಿಮ್ಮ ಸರ್ಕಾರಕ್ಕೆ ಬಾರುಕೋಲಿನ ಪೆಟ್ಟು ಬೀಳಬಾರದು ಎಂದರೇ ಶೀಘ್ರವಾಗಿ ಮೀಸಲಾತಿಯನ್ನು ಘೋಷಿಸಿ ಎಂದು ಸಿಎಂ ಅವರಿಗೆ ಎಚ್ಚರಿಕೆ ನೀಡಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ