Breaking News
Home / Recent Posts / ಹೋಳಿ ಹಬ್ಬದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಹೋಳಿ ಹಬ್ಬದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

Spread the love

ಬೆಟಗೇರಿ: ಗ್ರಾಮದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಶುಕ್ರವಾರ ಮಾ.18ರಂದು ಮುಂಜಾನೆ ಹುಣ್ಣಿಮೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ 7 ಗಂಟೆಗೆ ಇಲ್ಲಿಯ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಲಾದ ಕಾಮಣ್ಣನಿಗೆ ಪುರಜನರಿಂದ ಪೂಜೆ, ನೈವೆದ್ಯ ಸಮರ್ಪನೆ, ರಾತ್ರಿ 10 ಗಂಟೆಗೆ ಸ್ಥಳೀಯ ಪ್ರಮುಖ ಕಾಮದಹನ ಸ್ಥಳದಲ್ಲಿ ಸಂಗ್ರಹಿಸಿದ ಕುಳ್ಳ, ಕಟ್ಟಿಗೆ ಒಟ್ಟಿಗೆ ಸೇರಿಸಿ ಕಾಮದಹನಕ್ಕೆ ಕಾಮಣ್ಣನ ಪ್ರತಿಷ್ಠಾಪಿಸುವ ಕಾರ್ಯಕ್ರಮ ಜರುಗಲಿದೆ.
ಶನಿವಾರ ಮಾ.19ರಂದು ಬೆಳಗ್ಗೆ 6 ಗಂಟೆಗೆ ಕಾಮ ದಹನ ಜರುಗಿದ ಬಳಿಕ ಬಣ್ಣ ಎರಚಾಟ ಆರಂಭಗೊಂಡು ಮಧ್ಯಾಹ್ನ 3 ಗಂಟೆಯ ತನಕ ನಡೆಯಲಿದೆ. ಈ ವೇಳೆ ಗ್ರಾಮದ ಸರ್ವ ಸಮುದಾಯದ ಹಿರಿಯರು, ಯುವಕರು, ಮಕ್ಕಳು, ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳಿಯ ಹೋಳಿ ಹಬ್ಬ ಆಚರಣೆ ಸಮಿತಿಯ ಹಿರಿಯ ನಾಗರಿಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

ಬೆಟಗೇರಿಯಲಿ ವಿಶ್ವ ಪರಿಸರ ದಿನ ಆಚರಣೆ

Spread the loveಬೆಟಗೇರಿಯಲಿ ವಿಶ್ವ ಪರಿಸರ ದಿನ ಆಚರಣೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇಟ್ರಿಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ