Breaking News
Home / Recent Posts / “ದೇಶ ಕಂಡ ಮಹಾನ್ ವ್ಯಕ್ತಿತ್ವದ ಅಂಬೇಡ್ಕರ್ ಅವರ ಬದುಕು ಬರಹಗಳನ್ನು ನಾವೆಲ್ಲಾ ನಿಜವಾಗಿ ಓದಿ ಅರ್ಥೈಸಿಕೊಳ್ಳಬೇಕಿದೆ- ವಿದ್ಯಾವತಿ ಭಜಂತ್ರಿ

“ದೇಶ ಕಂಡ ಮಹಾನ್ ವ್ಯಕ್ತಿತ್ವದ ಅಂಬೇಡ್ಕರ್ ಅವರ ಬದುಕು ಬರಹಗಳನ್ನು ನಾವೆಲ್ಲಾ ನಿಜವಾಗಿ ಓದಿ ಅರ್ಥೈಸಿಕೊಳ್ಳಬೇಕಿದೆ- ವಿದ್ಯಾವತಿ ಭಜಂತ್ರಿ

Spread the love

ಮೂಡಲಗಿ: ”ಕನ್ನಡ ಸಂಸ್ಕøತಿ ಎನ್ನುವುದು ಹಿರಿದಾದ ಸಂಸ್ಕøತಿಯಾಗಿದ್ದು, ನಮ್ಮ ದೇಶದ ಜ್ಞಾನದ ಕಳಶವಾಗಿರುವ ಅಂಬೇಡ್ಕರ್‍ರವರು ಹಗಲಿರುಳು ಶ್ರಮವಹಿಸಿ ಕಷ್ಟದಲ್ಲೂ ಸಾಧನೆ ಮಾಡಿದ್ದು ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ. ಅಂಬೇಡ್ಕರ್ ನೀಡಿದ ಸಮಾನತೆಯ ತತ್ವಗಳು ಇಂದು ಎಲ್ಲಾ ಜನಾಂಗದವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿದೆ ಅವರನ್ನು ಎಲ್ಲರೂ ಅರಿತುಕೊಳ್ಳುವ ಒಂದು ಸುಕಾರ್ಯವೇ ಈ ಅಂಬೇಡ್ಕರ್ ಓದು ಕಾರ್ಯಕ್ರಮವಾಗಿದೆ. ಅವರ ಚಿಂತನೆಗಳು ನಮಗೆಲ್ಲಾ ಸ್ಪೂರ್ತಿಯಾಗಿದ್ದು ಅವರನ್ನು ಸಮಗ್ರವಾಗಿ ಅರಿಯುವ ಕಾರ್ಯವನ್ನು ನಮ್ಮ ಕನ್ನಡ ಸಂಸ್ಕøತಿ ಇಲಾಖೆ ಮಾಡುತ್ತಿದೆ ಅದರ ಸದುಪಯೋಗ ಪಡೆದು ವಿದ್ಯಾರ್ಥಿಗಳು ಯಶಸ್ವಿಯಾಗಿ” ಎಂದು ಬೆಳಗಾವಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹೇಳಿದರು.


ಅವರು ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಬೆಳಗಾವಿಯ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರಸಂಯುಕ್ತಾಶ್ರಯದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡುತ್ತಾ “ದೇಶ ಕಂಡ ಮಹಾನ್ ವ್ಯಕ್ತಿತ್ವದ ಅಂಬೇಡ್ಕರ್ ಅವರ ಬದುಕು ಬರಹಗಳನ್ನು ನಾವೆಲ್ಲಾ ನಿಜವಾಗಿ ಓದಿ ಅರ್ಥೈಸಿಕೊಳ್ಳಬೇಕಿದೆ ಈ ನಿಟ್ಟಿನಲ್ಲಿ ನಡೆದ ಅಂಬೇಡ್ಕರ್ ಓದು ಕಾರ್ಯಕ್ರಮ ಅರ್ಥಪೂರ್ಣವಾಗಿದೆ” ಎಂದುತಿಳಿಸಿದರು.
ಅತಿಥಿಗಳಾದ ಲಲಿತ ಅಕಾಡೆಮಿ ಸದಸ್ಯ ಜಯಾನಂದ ಮಾದರ ಮಾತನಾಡಿ, ಅಂಬೇಡ್ಕರ್ ಅವರನ್ನು ಬೇರೆ ದೇಶದವರು ಜ್ಞಾನದ ಸಂಕೇತ ಎಂದು ಗೌರವಿಸಿ ಪ್ರಪಂಚದ ಅತಿದೊಡ ್ಡಐದು ಡಾ.ಬಿ.ಆರ್. ಅಂಬೇಡ್ಕರ್‍ ಓದು ಕಾರ್ಯಕ್ರಮ-2020 ಶ್ರೇಷ್ಠಾತಿಶ್ರೇಷ್ಠ ವಿದ್ವಾಂಸರಲ್ಲಿ ನಮ್ಮ ಅಂಬೇಡ್ಕರ್‍ಗೆ ಮೊದಲನೆಯ ಸ್ಥಾನ ಸಲ್ಲಿಸಿರುವುದು ಹೆಮ್ಮೆಯ ವಿಷಯ ಅವರು ನೀಡಿದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದು ತಿಳಿಸಿದರು.


ಪ್ರಾಂಶುಪಾಲರಾದ ಶಾನೂರಕುಮಾರ ಗಾಣಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಎನ್ನುವದು ಒಂದು ದೊಡ್ಡ ಶಕ್ತಿಯಾಗಿದ್ದು ಅವರನ್ನು ಅರಿತುಕೊಳ್ಳಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಕಿಕೊಂಡ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಬಸಪ್ಪ ಹೆಬ್ಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ಶಿಕ್ಷಣ ಎಂಬುದು ಹುಲಿಯ ಹಾಲು ಇದ್ದಂತೆ. ಅದನ್ನು ಕುಡಿದವರು ಘರ್ಜಿಸಲೆ ಬೇಕು ಎನ್ನುವ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಮಾತು ನೀಜವಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ರಸಪ್ರಶ್ನೆ, ಆಶುಭಾಷಣ, ಪ್ರಬಂಧ ಸ್ಪರ್ಧೆಯಲ್ಲಿ 150 ಕ್ಕೂ ಹೆಚ್ಚೂ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಜೇತರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಬಹುಮಾನಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಯಲ್ಲಾಲಿಂಗ ವಾಳದ, ಶಿವಲೀಲಾ, ಅಶ್ವಿನಿ ಎಸ್, ಡಾ. ರವಿ ಗಡದನ್ನವರ, ಶೀತಲ ತಳವಾರ ಹಾಗೂ ಇತರ ಬೋಧಕ ಸಿಬ್ಬಂದಿ ಹಾಜರಿದ್ದರು. ಶಿವಕುಮಾರ ನಿರೂಪಿಸಿದರು. ಚೇತನರಾಜ್ ಬಿ ಸ್ವಾಗತಿಸಿ, ಸಂಜೀವ ಮದರಖಂಡಿ ವಂದಿಸಿದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ