ಮೂಡಲಗಿ: 2008-13 ರ ಅವಧಿಯಲ್ಲಿ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರಪ್ಪನವರ ಅವಧಿಯಲ್ಲಿ ದೂಪದಾಳ ಡ್ಯಾಂನಲ್ಲಿಯ ಹೂಳೆತ್ತುವ ಕಾರ್ಯವನ್ನು ಇಟಲಿ ಮಾದರಿಯಲ್ಲಿ ಕೈಗೊಳ್ಳುವದಾಗಿ ಹೇಳಿದ್ದರು ಆದರೆ ಸದ್ಯ ಸ್ವದೇಶಿ ಮಾದರಿಯಲ್ಲಿಯೇ ಆ ಕಾರ್ಯಮಾಡಬೇಕೆಂದು ಕಾಂಗ್ರೇಸ್ ಜಿಲ್ಲಾ ಮುಖಂಡ ಲಕ್ಕಣ್ಣ ಸವಸುದ್ದಿ ಪತ್ರಿಕಾಘೋಷ್ಠಿಯಲ್ಲಿ ಸರಕಾರಕ್ಕೆ ಆಗ್ರಹಿಸಿದರು.
ಪಟ್ಟಣದ ಪ್ರೇಸ್ ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ದೂಫದಾಳ ಡ್ಯಾಂನಲ್ಲಿಯ ಮಣ್ಣು ಹೂಳೆತ್ತುವ ಕಾರ್ಯದಿಂದ ಈ ಭಾಗದ ರೈತರಿಗೆ ನೀರಿನ ಅನುಕೂಲ ಉಂಟಾಗುತ್ತಿದೆ. ಡ್ಯಾಂ ಸುತ್ತ ಮುತ್ತ ಭೂಮಿಯ ಒತ್ತುವರಿಯಾಗಿದ್ದು ಕೂಡಲೆ ಸ್ವಾಧಿನಪಡಿಸಿಕೊಳ್ಳ ಬೇಕು. ಈ ಭಾಗದ ಗೋಕಾಕ, ಅರಭಾಂವಿ, ಕುಡಚಿ, ಹುಕ್ಕೇರಿ, ರಾಯಬಾಗ ಜಮಖಂಡಿವರೆಗಿನ ಪ್ರದೇಶಗಳ ರೈತರಿಗೆ ನೀರಿನ ಅನುಕೂಲವಾಗುವದು. ಮಣ್ಣನ್ನು ಹೂಳೆತ್ತುವದರಿಂದ ನೀರಿನ ಸಂಗ್ರಹ ಮಟ್ಟ ಹೆಚ್ಚಾಗುವದು. ಇದರಿಂದ ಹೆಚ್ಚಿನ ನೀರಾವರಿ ಸೌಲಭ್ಯ ದೊರಕಿಸಿಕೊಟ್ಟಂತೆ ಆಗುವದು. ಪ್ರವಾಸೋದ್ಯಮದ ಉದ್ಯಾನವನ, ಬೋಟಿಂಗ್, ಸಸ್ಯ ವಣ್ಯ ಜೀವಿಗಳಿಂದ ಸರಕಾರದ ಬೊಕ್ಕಸಕ್ಕೆ ಆದಾಯ ದೊರೆಯುತ್ತದೆ. ಈ ಕೂಡಲೇ ಸರಕಾರ ಹಾಗೂ ಜಿಲ್ಲೆಯ ರಾಜಕಾರಣಿಗಳು ಅಭಿವೃದ್ಧಿಯತ್ತ ಗಮನ ಹರಿಸಬೇಕು. ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಉಘ್ರ ಸ್ವರೋಪದ ಪ್ರತಿಭಟನೆ ಮಾಡುವದಾಗಿ ಸರಕಾರಕ್ಕೆ ಒತ್ತಯಿಸಿದ್ದಾರೆ.
ಪತ್ರಿಕಾಘೋಷ್ಠಿಯಲ್ಲಿ ಗೂಳಪ್ಪ ಮೇಟಿ, ಹೊಳೇಪ್ಪ ಶಿವಾಪೂರ ಕಾಂಗ್ರೇಸ್ ಕಾರ್ಯಕರ್ತರು ಹಾಜರಿದ್ದರು.